ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ನೀರವ್ ಮೋದಿ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ಒಪ್ಪಿಗೆ

|
Google Oneindia Kannada News

ಲಂಡನ್, ಏಪ್ರಿಲ್ 16: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 14,000 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡಲು ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿದೆ.

ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ನೀರವ್ ಮೋದಿ ವೆಸ್ಟ್ ಮಿಸಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಫೆಬ್ರವರಿಯಲ್ಲಿ ಹಾಜರಾಗಿದ್ದರು. ಲಂಡನ್​ ವೆಸ್ಟ್ ಮಿಸಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಜಡ್ಜ್​ ಸ್ಯಾಮುವಲ್​ ಗೊಜ್​ ಈ ದೇಶ ನೀಡಿದ್ದು, ಮುಂಬೈನ ಅರ್ಥರ್ ರೋಡ್​ ಜೈಲಿನಲ್ಲಿ ಅವರಿಗೆ ಎಲ್ಲ ರೀತಿಯ ಚಿಕಿತ್ಸೆ ಸಿಗಲಿದೆ ಎಂದಿದ್ದರು.

ಉದ್ಯಮಿ ನೀರವ್ ಮೋದಿ ಪತ್ನಿಗೆ ರೆಡ್ ಕಾರ್ನರ್ ನೋಟಿಸ್ಉದ್ಯಮಿ ನೀರವ್ ಮೋದಿ ಪತ್ನಿಗೆ ರೆಡ್ ಕಾರ್ನರ್ ನೋಟಿಸ್

ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡುವುದು ಮಾನವ ಹಕ್ಕುಗಳಿಗೆ ಅನುಸಾರವಾಗಿದೆ ಎಂದಿದ್ದ ಅವರು, ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲು ಅವರಿಗೆ ಹಕ್ಕಿದೆ ಎಂದಿದ್ದರು ಜತೆಗೆ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ವಾದವನ್ನ ತಳ್ಳಿ ಹಾಕಿದ್ದರು.

Nirav Modis Extradition To India Cleared By UK Government

ಇದೀಗ ನೀರವ್ ಮೋದಿ ಹಸ್ತಾಂತರಕ್ಕೆ ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿದೆ. ಇತ್ತೀಚೆಗಷ್ಟೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 108 ಘಟಕಗಳಲ್ಲಿ ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಆಭರಣಗಳು ಸೇರಿದಂತೆ 1,350 ಕೋಟಿ ರೂ.ಗಳ ಮೌಲ್ಯದ ಮುತ್ತುಗಳನ್ನು ಹಾಂಕಾಂಗ್‌ನಿಂದ ವಶಪಡಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇಡಿ) ಭಾರತಕ್ಕೆ ಮರಳಿ ತಂದಿತ್ತು.

"ಈ ಸರಕುಗಳ ಮೌಲ್ಯವನ್ನು 1,350 ಕೋಟಿ ರೂ. (ಅಂದಾಜು) ಎಂದು ಘೋಷಿಸಲಾಗಿದೆ. ಈ ಬೆಲೆಬಾಳುವ ವಸ್ತುಗಳಲ್ಲಿ ನಯಗೊಳಿಸಿದ ವಜ್ರಗಳು, ಮುತ್ತುಗಳು, ಮುತ್ತು ಮತ್ತು ಬೆಳ್ಳಿ ಆಭರಣಗಳು ಸೇರಿದ್ದವು.

ಇದೀಗ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹಸ್ತಾಂತರ ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ.

English summary
Scam-accused billionaire Nirav Modi's extradition to India has been cleared by the British government. UK Home Secretary Priti Patel today signed the extradition order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X