ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್ ಕೋರ್ಟ್‌

|
Google Oneindia Kannada News

ಲಂಡನ್, ಮಾರ್ಚ್ 29: ಉದ್ದೇಶಪೂರ್ವಕ ಸುಸ್ತೀದಾರ ನೀರವ್ ಮೋದಿ ಅವರಿಗೆ ಲಂಡನ್ ನ್ಯಾಯಾಲಯವು ಮತ್ತೆ ಜಾಮೀನು ನಿರಾಕರಿಸಿದೆ.

ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀರವ್ ಮೋದಿ ಅವರು ಜಾಮೀನಿನಾಗಿ ಎರಡನೇ ಬಾರಿ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಧೀಶರು ಎರಡನೇ ಬಾರಿಯೂ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನೀರವ್ ಮೋದಿ ಅವರು ಸಾಕ್ಷ್ಯದಾರರೊಬ್ಬರಿಗೆ ಬೆದರಿಕೆ ಒಡ್ಡಿದ್ದಾರೆ ಮತ್ತು ತಮ್ಮ ಬಂಧನವನ್ನು ಮುಂದೂಡಲು ಲಂಚದ ಆಮೀಷ ಒಡ್ಡಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀರವ್ ವಿರುದ್ಧ ವಾದ ಮಂಡನೆ ಮಾಡಲಾಯಿತು.

ನೀರವ್ ಮೋದಿ ಸಂಬಳ ₹ 18 ಲಕ್ಷ, ಮನೆ ಬಾಡಿಗೆ ₹ 15 ಲಕ್ಷ! ನೀರವ್ ಮೋದಿ ಸಂಬಳ ₹ 18 ಲಕ್ಷ, ಮನೆ ಬಾಡಿಗೆ ₹ 15 ಲಕ್ಷ!

ನೀರವ್ ಮೋದಿಗೆ ಜಾಮೀನು ನೀಡಿದರೆ, ಆತ ಮತ್ತೆ ದೇಶಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳಬಹುದು ಎಂದು ಸಹ ವಕೀಲರು ನ್ಯಾಯಾಧೀಶರ ಮುಂದೆ ವಾದ ಮಂಡನೆ ಮಾಡಿದರು.

Nirav Modi bail application rejected by UK court

ನೀರವ್ ಮೋದಿಯು ವನುತುವ ಎಂಬ ದ್ವೀಪ ದೇಶದ ಪೌರತ್ವ ಪಡೆಯಲು ಯತ್ನಿಸಿದ್ದಾರೆ ಎಂದು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಾಯಿತು. ಇದನ್ನೆಲ್ಲಾ ಗಮನಿಸಿ ನ್ಯಾಯಾಧೀಶರು ನೀರವ್ ಮೋದಿಯ ಜಾಮೀನು ಅರ್ಜಿಯನ್ನು ನಿರಾಕರಿಸಿದರು.

ನೀರವ್ ಬಂಧನ, ಎಲೆಕ್ಷನ್ ಟೈಮಲ್ಲಿ ಒಳ್ಳೆ ಗಿಮಿಕ್ : ಕಾಂಗ್ರೆಸ್ ನೀರವ್ ಬಂಧನ, ಎಲೆಕ್ಷನ್ ಟೈಮಲ್ಲಿ ಒಳ್ಳೆ ಗಿಮಿಕ್ : ಕಾಂಗ್ರೆಸ್

ನೀರವ್ ಮೋದಿಯನ್ನು ಈಗ ಮತ್ತೆ ಎಚ್‌ಎಂಪಿ ವ್ಯಾಂಡ್ಸ್‌ವರ್ತ್‌ ಜೈಲಿಗೆ ಕಳುಹಿಸಲಾಯಿತು, ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 26ಕ್ಕೆ ಮುಂದೂಡಲಾಗಿದ್ದು, ಅಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಾಗುವುದು.

English summary
Fugutive Nirav Modi's bail application rejected by UK court second time. prosecution said, there is a real risk that he could flee, interfere with witnesses, interfere with evidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X