ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌: ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತ

|
Google Oneindia Kannada News

ಲಂಡನ್, ಮಾರ್ಚ್‌ 20: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಲಂಡನ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ನೀರವ್ ಮೋದಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಆದರೆ ಅವರ ಜಾಮೀನು ತಿರಸ್ಕೃತಗೊಂಡಿದೆ.

ಲಂಡನ್‌ನ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದಲ್ಲಿ ನೀರವ್ ಮೋದಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಮಾರ್ಚ್‌ 29ರ ವರೆಗೆ ಅವರ ಬಂಧನವನ್ನು ವಿಸ್ತರಿಸಿದೆ.

ಲಂಡನ್ : ಪಿಎನ್ ಬಿ ಹಗರಣದ ರೂವಾರಿ ನೀರವ್ ಮೋದಿ ಬಂಧನಲಂಡನ್ : ಪಿಎನ್ ಬಿ ಹಗರಣದ ರೂವಾರಿ ನೀರವ್ ಮೋದಿ ಬಂಧನ

ಜಾರಿ ನಿರ್ದೇಶನಾಲಯದ ದೂರಿನ ಮೇಲೆ ಲಂಡನ್ ನ್ಯಾಯಾಲಯವು ಎರಡು ದಿನಗಳ ಹಿಂದೆ ನೀರವ್ ಮೋದಿ ವಿರುದ್ಧ ವಾರೆಂಟ್ ಹೊರಡಿಸಿತ್ತು, ಅದರಂತೆ ಇಂದು ನೀರವ್ ಅವರ ಬಂಧನವಾಗಿದೆ.

Nirav Modi bail application rejected by London court

ಜಾಮೀನು ಅರ್ಜಿ ಹಾಕಿದ್ದ ನೀರವ್, ನಾನು ಎಲ್ಲ ಹಣವನ್ನು ಕಟ್ಟಲು ತಯಾರಿದ್ದೇನೆ ಆದರೆ, ತನಿಖಾ ಸಂಸ್ಥೆಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ, ನನಗೆ ಸಮಸ್ಯೆ ನೀಡಬೇಕೆಂಬ ಉದ್ದೇಶದಿಂದಲೇ ಅವರು ನನ್ನ ವಿರುದ್ಧ ಉಗ್ರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ನೀರವ್ ನ್ಯಾಯಾಲಯಕ್ಕೆ ಹೇಳಿದ್ದಾರೆ.

ವಿಜಯ್ ಮಲ್ಯ ಅವರಿಗೂ ಸಹ ಲಂಡನ್ ನ್ಯಾಯಾಲಯ ಜಾಮೀನು ನೀಡಿದೆ. ಮಲ್ಯರನ್ನು ಭಾರತಕ್ಕೆ ಕರೆತರುವ ಭಾರತದ ಯತ್ನಗಳು ಇನ್ನೂ ಸಫಲವಾಗಿಲ್ಲ, ನೀರವ್ ಮೋದಿ ಪ್ರಕರಣವೂ ಇದೇ ಹಾದಿಯನ್ನು ಹಿಡಿಯಲಿದೆ ಎನ್ನಲಾಗುತ್ತಿದೆ.

English summary
Nirav Modi bail application rejected by London court. He was arrested today morning in London in PNB case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X