ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಕೊರೊನಾ ವೈರಸ್ ರೂಪಾಂತರದ ಬಗ್ಗೆ ಒಂದಿಷ್ಟು ಮಾಹಿತಿ

|
Google Oneindia Kannada News

ಲಂಡನ್, ಡಿಸೆಂಬರ್ 17: ಒಂದು ವರ್ಷದಿಂದ ಇಡೀ ವಿಶ್ವವನ್ನೇ ನಲುಗಿಸಿರುವ ಕೊರೊನಾ ವೈರಸ್ ಇದೀಗ ಬ್ರಿಟನ್‌ನಲ್ಲಿ ಮತ್ತೊಂದು ರೂಪ ತಾಳಿದೆ.

ಕಳೆದ ವಾರ ಲಸಿಕೆ ವಿತರಣೆ ಆರಂಭಿಸಿರುವ ಬ್ರಿಟನ್‌ನಲ್ಲಿ ಮಾರಕ ವೈರಾಣುವಿನ ಹೊಸ ಮಾದರಿಯೊಂದು ಪತ್ತೆಯಾಗಿದ್ದು ತೀವ್ರ ಆತಂಕ ಮೂಡಿಸಿದೆ.

ಭಾರತದ ವಿರುದ್ಧ ಆರೋಪವಿರುವ ಅಧ್ಯಯನ ವರದಿ ಹಿಂಪಡೆದ ಚೀನಾಭಾರತದ ವಿರುದ್ಧ ಆರೋಪವಿರುವ ಅಧ್ಯಯನ ವರದಿ ಹಿಂಪಡೆದ ಚೀನಾ

ಕೊರೊನಾ ಸೋಂಕಿನ ಹೊಸ ರೂಪಾಂತರದಿಂದ ಒಂದು ವಾರದಿಂದ ಬ್ರಿಟನ್‌ನಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಕೆಲವು ಪ್ರದೇಶಗಳಲ್ಲಿ ಸೋಂಕು ದ್ವಿಗುಣಗೊಳ್ಳುವ ಅವಧಿ 7 ದಿನಗಳಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ.

ಮತ್ತೆ ಬ್ರಿಟನ್‌ನಲ್ಲಿ ಲಾಕ್‌ಡೌನ್ ಜಾರಿ

ಮತ್ತೆ ಬ್ರಿಟನ್‌ನಲ್ಲಿ ಲಾಕ್‌ಡೌನ್ ಜಾರಿ

ರಾಜಧಾನಿ ಲಂಡನ್, ಸುತ್ತಲಿನ ಪ್ರದೇಶಗಳಾದ ಎಸ್ಸೆಕ್ಸ್, ಹರ್ಟ್ ಫೋರ್ಡ್ ಶೈರ್‌ಗಳಲ್ಲಿ 3ನೃ ಸ್ತರದ ಕೊರೊನಾ ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಲಾಕ್‌ಡೌನ್ ಜಾರಿಮಾಡಲಾಗಿದೆ. ಇದರಿಂದಾಗಿ ಸದ್ಯ ಇಂಗ್ಲೆಂಡ್ ನ ಶೇ.61ರಷ್ಟು ಮಂದಿ ಕಠಿಣ ಲಾಕ್‌ಡೌನ್ ನಿಯಮಗಳಿಗೆ ಒಳಗಾಗಿದ್ದಾರೆ. ಅಕ್ಕಪಕ್ಕದಮನೆಯವರು ಬೆರೆಯುವುದನ್ನು ನಿಷೇಧಿಸಲಾಗಿದೆ. ಎಲ್ಲಾ ರೆಸ್ಟೋರೆಂಟ್ ಹಾಗೂ ಬಾರ್‌ಗಳನ್ನು ಬಂದ್ ಮಾಡಲಾಗಿದ್ದು, ಟೇಕ್ ಅವೇ ಹಾಗೂ ಡೆಲಿವರಿಗೆ ಮಾತ್ರ ಅನುಮತಿ ನೀಡಲಾಗಿದೆ.

ಸಾವಿರ ಮಂದಿಯಲ್ಲಿ ಹೊಸ ಬಗೆಯ ಕೊರೊನಾ ಸೋಂಕು

ಸಾವಿರ ಮಂದಿಯಲ್ಲಿ ಹೊಸ ಬಗೆಯ ಕೊರೊನಾ ಸೋಂಕು

ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಕೊರೊನಾ ವೈರಸ್‌ನ ಹೊಸ ಮಾದರಿ ಪತ್ತೆಯಾಗಿದ್ದು, ವೇಗವಾಗಿ ಹಬ್ಬುತ್ತಿದೆ. ಸಾವಿರ ಮಂದಿಯಲ್ಲಿ ಹೊಸ ಬಗೆಯ ಕೊರೊನಾ ಸೋಂಕು ಕಂಡುಬಂದಿದೆ. ಇದನ್ನು 60 ವಿವಿಧ ಸ್ಥಳೀಯ ಸಂಸ್ಥೆಗಳು ವರದಿ ಮಾಡಿವೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಹೊಸ ಮಾದರಿ ವೈರಸ್

ಹೊಸ ಮಾದರಿ ವೈರಸ್

ಸ್ವ್ಯಾಬ್ ಪರೀಕ್ಷೆಯ ಮೂಲಕವೇ ಕೊರೊನಾ ಸೋಂಕು ಹೊಸ ಮಾದರಿಯನ್ನು ಪತ್ತೆಹಚ್ಚಬಹುದು ಕೆಂಟ್, ಸುತ್ತಲಿನ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಈಗಾಘಲೇ ಸಾವಿರ ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ವೇಗವಾಗಿ ಹಬ್ಬುತ್ತಿದೆ ಹೊಸ ಲಸಿಕೆ ಈ ಹೊಸ ಮಾದರಿಯ ಮೇಲೆ ಕೆಲಸ ಮಾಡುವುದೋ ಇಲ್ಲವೋ ಎಂಬ ಅನುಮಾನ ವಿಜ್ಞಾನಿಗಳಿಂದ ಈ ಹೊಸ ವೈರಸ್ ಬಗ್ಗೆ ಅಧ್ಯಯನ

ವೈರಸ್‌ ಕಾಲಕಾಲಕ್ಕೆ ರೂಪಾಂತರ

ವೈರಸ್‌ ಕಾಲಕಾಲಕ್ಕೆ ರೂಪಾಂತರ

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ತಜ್ಞ ಮೈಕ್ ರಯಾನ್ ಅವರು ಜಿನೆವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂಗ್ಲೆಂಡ್‌ನಲ್ಲಿ ಒಂದು ಸಾವಿರ ಮಂದಿಯಲ್ಲಿ ಕೊರೊನಾ ಹೊಸ ಮಾದರಿ ಪತ್ತೆಯಾಗಿದೆ. ನಾವು ಹಲವು ಮಾದರಿಗಳನ್ನು ನೋಡಿದ್ದೇವೆ. ಈ ವೈರಸ್ ಕಾಲಕಾಲಕ್ಕೆ ರೂಪಾಂತರ ಹೊಂದುತ್ತಿರುತ್ತದೆ. ಬ್ರಿಟನ್‌ನಲ್ಲಿ ಈಗಾಗಲೇ ಲಸಿಕೆ ಅಭಿಯಾನ ಆರಂಭವಾಗಿದೆ. ಹೊಸ ಬಗೆಯ ವೈರಸ್ ಲಸಿಕೆಗೆ ಸ್ಪಂದಿಸುತ್ತದೋ ಅಥವಾ ಲಸಿಕೆ ಆ ವೈರಸ್ ವಿರುದ್ಧ ವಿಫಲವಾಗುತ್ತದೋ ಎಂದು ಕಾದುನೋಡಬೇಕಿದೆ. ಸ್ವ್ಯಾಬ್ ಪರೀಕ್ಷೆಯ ಮೂಲಕವೇ ಕೊರೊನಾ ಹೊಸ ಮಾದರಿಯನ್ನು ಪತ್ತೆಹಚ್ಚಬಹುದಾಗಿದೆ.

English summary
The British capital faces tougher Covid-19 measures within days, the UK government said, with a new coronavirus variant emerging as a possible cause for rapidly rising infection rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X