ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಸ್ವರೂಪದ ಕೊರೊನಾ ವೈರಸ್‌ ಮಾರಣಾಂತಿಕವಲ್ಲ: ವಿವೇಕ್ ಮೂರ್ತಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 21: ಬ್ರಿಟನ್‌ನಲ್ಲಿ ಕಂಡು ಬಂದಿರುವ ಅತಿ ವೇಗವಾಗಿ ಹರಡುವ ಕೊರೊನಾವೈರಸ್‌ನ ಹೊಸ ಪ್ರಬೇಧ ಮಾರಣಾಂತಿಕವಲ್ಲ ಎಂದು ಅಮೆರಿಕದ ಸರ್ಜನ್ ಜನರಲ್ ,ಭಾರತ ಮೂಲದ ವಿವೇಕ್ ಮೂರ್ತಿ ಹೇಳಿದ್ದಾರೆ.

ಈಗಾಗಲೇ ಅಭಿವೃದ್ಧಿ ಪಡಿಸಲಾಗಿರುವ ಕೊವಿಡ್ ಲಸಿಕೆಗಳು ಹೊಸ ಪ್ರಬೇಧದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎನ್ನಲು ಕೂಡ ಪುರಾವೆಗಳಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್‌ನ ಹೊಸ ಪ್ರಬೇಧ ಬ್ರಿಟನ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂಬ ವರದಿ ಬೆನ್ನಲ್ಲೇ ಅನೇಕ ರಾಷ್ಟ್ರಗಳು ಬ್ರಿಟನ್ ಪ್ರಯಾಣಕ್ಕೆ ನಿರ್ಬಂಧ ಹೇರಿವೆ.

ಬ್ರಿಟನ್‌ನಿಂದ ಬಂದಿರುವ ಹೊಸ ಸುದ್ದಿಯಿಂದ , ಈಗಾಗಲೇ ಹರಡಿರುವ ಕೊರೊನಾ ವೈರಸ್‌ಗಿಂತಲೂ ಹೊಸ ಪ್ರಬೇಧವು ಹೆಚ್ಚು ಸಾಂಕ್ರಾಮಿಕ ಎಂಬುದು ತಿಳಿದುಬಂದಿದೆ. ಇದು ಹೆಚ್ಚು ಹರಡುವಂತೆ ತೋರುತ್ತದೆ., ಆದರೆ ಹೆಚ್ಚು ಮಾರಕ ಎಂಬುದಕ್ಕೆ ಪುರಾವೆಯಿಲ್ಲ ಎಂದಿದ್ದಾರೆ.

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೋವಿಡ್ ಸೋಂಕು ಪತ್ತೆಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೋವಿಡ್ ಸೋಂಕು ಪತ್ತೆ

ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ತೊಳೆಯುವುದು ಕೊವಿಡ್ ಹರಡದಂತೆ ತಡೆಯಲು ಇರುವ ಅಸ್ತ್ರಗಳಾಗಿವೆ ಎಂದರು ಹೇಳಿದ್ದಾರೆ.

 New UK Virus Strain Doesnt Appear To Be Deadlier: Vivek Murthy

ಹೊಸ ಸ್ವರೂಪದ ಕೋವಿಡ್ ಸೋಂಕಿನ ಕುರಿತು ಬ್ರಿಟನ್ ಸರ್ಕಾರ ಘೋಷಿಸಿದ ಬಳಿಕ ಅಕ್ಕ-ಪಕ್ಕದ ರಾಷ್ಟ್ರಗಳು ಬ್ರಿಟನ್‌ಗೆ ವಿಮಾನ ಸಂಪರ್ಕವನ್ನು ರದ್ದುಗೊಳಿಸಿವೆ. ಯುರೋಪ್‌ನ ಎಲ್ಲಾ ರಾಷ್ಟ್ರಗಳಿಗೆ ಹೊಸ ಮಾದರಿ ಕೋವಿಡ್ ಸೋಂಕು ಹರಡುವ ಅಪಾಯದಿಂದ ವಿಮಾನ ಸಂಚಾರ ರದ್ದು ಮಾಡಲಾಗಿದೆ.

ಮೂಲ ಸ್ವರೂಪದ ಕೋವಿಡ್‌ ವೈರಸ್‌ಗೆ ಹೋಲಿಕೆ ಮಾಡಿದರೆ ಈ ವೈರಸ್‌ನಲ್ಲಿ 23 ಬದಲಾವಣೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೂಲ ವೈರಸ್‌ಗಿಂತ ಶೇ 70ರಷ್ಟು ವೇಗದಲ್ಲಿ ಇದು ಹಬ್ಬಬಲ್ಲದು ಎಂದು ಹೇಳಿದ್ದಾರೆ. ವಿಶ್ವಕ್ಕೆ ಇದು ಹಬ್ಬುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್ ನಂತರ ರಷ್ಯಾದಲ್ಲಿಯೂ ಕೊರೊನಾ ವೈರಸ್ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 29,350 ಹೊಸ ಪ್ರಕರಣಗಳು ಪತ್ತೆಯಾಗಿವೆ. 493 ಸೋಂಕಿತರು ಮೃತಪಟ್ಟಿದ್ದಾರೆ.

English summary
Indian-American physician Vivek Murthy, US President-elect Joe Biden's pick for Surgeon General, has said there is no evidence to suggest that a new and more contagious coronavirus variant reported in the UK is any deadlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X