ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರಿ ವೈರಸ್ ಇತರೆ ಸೋಂಕಿಗಿಂತ ತೀವ್ರ ಅನಾರೋಗ್ಯ ಸೃಷ್ಟಿಸದು: ಅಧ್ಯಯನ

|
Google Oneindia Kannada News

ಲಂಡನ್, ಡಿಸೆಂಬರ್ 30: ಈ ರೂಪಾಂತರಿ ಕೊರೊನಾ ಸೋಂಕು ಇತರೆ ಸೋಂಕುಗಳಿಗಿಂತ ಹೆಚ್ಚು ಅನಾರೋಗ್ಯವನ್ನು ಸೃಷ್ಟಿಸುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡ ಹೊಸಮಾದರಿಯ ವೈರಸ್ ವೇಗವಾಗಿ ಹರಡಬಹುದು ಎಂಬ ವಿಜ್ಞಾನಿಗಳ ಹೇಳಿಕೆ ಬೆನ್ನಲ್ಲೇ ಇತರೆ ದೇಶಗಳು ಬ್ರಿಟನ್‌ನಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿವೆ. ಈ ಮಧ್ಯೆ, ಭಾರತವು ಸೇರಿದಂತೆ ಹಲವು ದೇಶಗಳಲ್ಲಿ ಹೊಸ ಮಾದರಿಯ ಸೋಂಕು ಪತ್ತೆಯಾಗಿದದೆ.

ರೂಪಾಂತರಿತ ವೈರಸ್‌ ವಿರುದ್ಧ ಯಾವ ಲಸಿಕೆಗಳೂ ಪರಿಣಾಮಕಾರಿಯಲ್ಲ ಎನ್ನಲು ಆಧಾರವಿಲ್ಲ: ಸರ್ಕಾರರೂಪಾಂತರಿತ ವೈರಸ್‌ ವಿರುದ್ಧ ಯಾವ ಲಸಿಕೆಗಳೂ ಪರಿಣಾಮಕಾರಿಯಲ್ಲ ಎನ್ನಲು ಆಧಾರವಿಲ್ಲ: ಸರ್ಕಾರ

ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್ ಬೇರೆ ಮಾದರಿಯ ಕೊರೊನಾ ಸೋಂಕಿಗಿಂತ ಹೆಚ್ಚು ಅನಾರೋಗ್ಯವನ್ನು ಸೃಷ್ಟಿಸುವುದಿಲ್ಲ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಇಲಾಖೆ ಮಾಡಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

ಎರಡನೇ ಬಾರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು

ಎರಡನೇ ಬಾರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು

ಎರಡನೇ ಬಾರಿಗೆ ಸೋಂಕು ತಗುಲುವ ಪ್ರಮಾಣವು ಹೊಸ ಮಾದರಿಯ ಕೊರೊನಾ ಸೋಂಕಿತರಲ್ಲಿ ಹೆಚ್ಚಿದೆ ಎಂಬುದನ್ನು ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬ್ರಿಟನ್ ಸರ್ಕಾರಕ್ಕೆ ಸಲಹೆ ನೀಡಿರುವ ದೇಶದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹೇವರ್ಡ್, ರೂಪಾಂತರಿ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ವಾರಗಳಲ್ಲಿ ಬ್ರಿಟನ್ ದುರಂತದತ್ತ ಸಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಎರಡು ತಂಡಗಳಾಗಿ ವಿಂಗಡಣೆ

ಎರಡು ತಂಡಗಳಾಗಿ ವಿಂಗಡಣೆ

ಅಧ್ಯಯನಕಾರರು ಲಿಂಗ, ವಯಸ್ಸು, ವಾಸಿಸುವ ಸ್ಥಳ ಮತ್ತು ಪರೀಕ್ಷೆ ಮಾಡಲಾದ ಸಮಯದ ಆಧಾರದ ಮೇಲೆ ಹೊಸ ಮಾದರಿಯ ವೈರಸ್ ಸೋಂಕಿತ 1769 ಮಂದಿ ಮತ್ತು ಹಳೆಯ ಮಾದರಿಯ ಸೋಂಕು ತಗುಲಿರುವ 1769 ಮಂದಿಯ ಎರಡು ತಂಡಗಳಾಗಿ ವಿಂಗಡಿಸಿ ಅವರ ಮೇಲಾದ ಆರೋಗ್ಯದ ಪರಿಣಾಮಗಳ ಬಗ್ಗೆ ತುಲನಾತ್ಮಕ ಅಧ್ಯಯನ ಮಾಡಿದ್ದಾರೆ.

ಹೊಸ ಅಧ್ಯಯನ ಏನು ಹೇಳುತ್ತೆ?

ಹೊಸ ಅಧ್ಯಯನ ಏನು ಹೇಳುತ್ತೆ?

ಆಸ್ಪತ್ರೆಗೆ ದಾಖಲಾದ 42 ಕೊರೊನಾ ಸೋಂಕಿತರ ಪೈಕಿ 16 ಮಂದಿಗೆ ಹೊಸ ಮಾದರಿಯ ಸೋಂಕು ತಗುಲಿದ್ದರೆ, 26 ಮಂದಿಗೆ ಹಳೆ ಮಾದರಿಯ ಸೋಂಕು ಪತ್ತೆಯಾಗಿದೆ. ಸಾವಿನ ದೃಷ್ಟಿಯಿಂದ ನೋಡುವುದಾದರೆ ಹೊಸ ಸೋಂಕಿತರು 12 ಮಂದಿ ಮೃತಪಟ್ಟಿದ್ದರೆ, ಹೊಸ ಸೋಂಕಿತರು 10 ಮಂದಿ ಸಾವನ್ನಪ್ಪಿದ್ದಾರೆ.

ಹೊಸ ಸೋಂಕಿನಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ

ಹೊಸ ಸೋಂಕಿನಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ

ಅಧ್ಯಯನದ ಫಲಿತಾಂಶದಲ್ಲಿ ಹಳೆ ಮತ್ತು ಹೊಸ ಮಾದರಿಯ ಕೊರೊನಾ ಸೋಂಕಿತರ ಆಸ್ಪತ್ರೆ ದಾಖಲಾಗುವಿಕೆ,28 ದಿನಗಳ ಸಾವಿನ ದೃಷ್ಟಿಯಲ್ಲಿ ಯಾವುದೇ ಮಹತ್ವದ ತೃಪ್ತಿಕರ ವ್ಯತ್ಯಾಸಗಳು ಕಂಡುಬಂದಿಲ್ಲ. ಇತರೆ ಕೊರೊನಾ ಸೋಂಕುಗಳೊಂದಿಗೆ ಹೋಲಿಸಿದರೆ ಹೊಸ ರೂಪಾಂತರಿತ ವೈರಸ್‌ನಲ್ಲಿ ಯಾವುದೇ ದೊಡ್ಡ ವ್ಯತ್ಯಾಸಗಳಿಲ್ಲ ಎಂದು ಹೇಳಲಾಗಿದೆ.

English summary
A new variant of the novel coronavirus does not appear to cause more severe illness than other variants, according to a matched study by Public Health England.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X