ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಲ್ಲೇ ಕೊರೊನಾ ಲಸಿಕೆ ಬಳಸಲು ಮೊದಲು ಅನುಮತಿ ನೀಡಿದ ದೇಶಕ್ಕೆ ಮತ್ತೆ ಇದೆಂತಹ ಆಘಾತ

|
Google Oneindia Kannada News

ನವೆಂಬರ್ ಹದಿನೆಂಟರಂದು ಅಮೆರಿಕ ಮತ್ತು ಜರ್ಮನಿಯ ಬಯೋಟೆಕ್ ಕಂಪೆನಿ ಕೊರೊನಾ ವಿರುದ್ದದ ಲಸಿಕೆಯನ್ನು ಕೊನೆಯ ಹಂತದ ಟ್ರಯಲ್ ಗಾಗಿ ಬಿಡುಗಡೆ ಮಾಡಿತ್ತು. ಆದರೆ, ಬ್ರಿಟನ್ ವಿಶ್ವದಲ್ಲೇ ಮೊದಲ ದೇಶವಾಗಿ, ಡಿಸೆಂಬರ್ ಮೂರರಂದು ಎಮರ್ಜೆನ್ಸಿ ಬಳಕೆಗಾಗಿ ಲಸಿಕೆಯನ್ನು ಬಿಡುಗಡೆ ಮಾಡಿ, ಲಸಿಕೆ ಪರಿಚಯಿಸಿದ ಮೊದಲ ದೇಶವಾಗಿ ಗುರುತಿಸಲ್ಪಟ್ಟಿತ್ತು.

ಆದರೆ, ಒಂದು ಕಡೆ ಕೊರೊನಾಗೆ ಸಾರ್ವಜನಿಕರು ಲಸಿಕೆ ಬಳಕೆ ಮಾಡಲು ಆರಂಭಿಸಿದರೆ, ಬ್ರಿಟನ್ ಸೇರಿದಂತೆ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಹೊಸ ಪ್ರಭೇದದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ, ಮುಂದಿನೆರಡು ತಿಂಗಳಲ್ಲಿ ವಿಶ್ವದಲ್ಲಿ ಜನಜೀವನ, ಆರ್ಥಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಬರಬಹುದು ಎನ್ನುವ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆಯಲಾರಂಭಿಸಿದೆ.

ಬ್ರಿಟನ್‌ನಲ್ಲಿ ಕೋವಿಡ್‌ನ ಹೊಸ ತಳಿಯಿಂದ ಹೆಚ್ಚಿದ ಆತಂಕಬ್ರಿಟನ್‌ನಲ್ಲಿ ಕೋವಿಡ್‌ನ ಹೊಸ ತಳಿಯಿಂದ ಹೆಚ್ಚಿದ ಆತಂಕ

ಬ್ರಿಟನ್ ನಲ್ಲಿ ಅತ್ಯಂತ ವೇಗವಾಗಿ ಈ ವೈರಸ್ ಹರಡುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ, ರೂಪಾಂತರಗೊಂಡ ಈ ವೈರಸಿನ ಲಕ್ಷಣ, ತೀವ್ರತೆ, ಪರಿಣಾಮ ಏನು ಎನ್ನುವುದರ ಬಗ್ಗೆ ಆರೋಗ್ಯ ಇಲಾಖೆಗೆ ಸ್ಪಷ್ಟತೆ ಇಲ್ಲದೇ ಇರುವುದು.

ಕ್ರಿಸ್ಮಸ್, ಹೊಸವರ್ಷದ ಸಂದರ್ಭದಲ್ಲೇ ಈ ಹೊಸ ಪ್ರಭೇದದ ವೈರಾಣು ಬ್ರಿಟನ್, ಡೆನ್ಮಾರ್ಕ್ ಮುಂತಾದ ದೇಶಗಳಲ್ಲಿ, ಹಳೆಯ ವೈರಸ್ ಗಿಂತ ಶೇ. 70ರಷ್ಟು ವೇಗವಾಗಿ ಹರಡುತ್ತಿದೆ. ಹೀಗಾಗಿ, ಬ್ರಿಟನ್ ನಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಬ್ದಗೊಂಡಿದೆ. ಭಾರತ ಸೇರಿದಂತೆ ಹಲವು ದೇಶಗಳು ಬ್ರಿಟನ್ ದೇಶಕ್ಕೆ ಪ್ರಯಾಣ ನಿರ್ಬಂಧ ಹೇರಿದೆ.

ಡಿ.31ರವರೆಗೂ ಬ್ರಿಟನ್‌-ಭಾರತ ವಿಮಾನಗಳ ರದ್ದುಡಿ.31ರವರೆಗೂ ಬ್ರಿಟನ್‌-ಭಾರತ ವಿಮಾನಗಳ ರದ್ದು

ಬ್ರಿಟನ್ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮ್ಯಾಟ್ ಹಾನ್ಕಾಕ್

ಬ್ರಿಟನ್ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮ್ಯಾಟ್ ಹಾನ್ಕಾಕ್

"ಲಂಡನ್ ನಲ್ಲಿ ಹಲವು ತಿಂಗಳುಗಳ ಲಾಕ್ ಡೌನ್ ಹೇರುವ ಸಾಧ್ಯತೆಯಿದೆ. ಪರಿಸ್ಥಿತಿ ಅತ್ಯಂತ ಕಷ್ಟಕರವಾಗಿದ್ದು, ಹೊಸ ವೈರಾಣು ಬಗ್ಗೆ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಇದಕ್ಕೆ ಲಸಿಕೆ ಇನ್ನೂ ಲಭ್ಯವಾಗದ ಹಿನ್ನಲೆಯಲ್ಲಿ ಡಿಸೆಂಬರ್ ಮೂವತ್ತಕ್ಕೆ ಮುಂದಿನ ದಿನಗಳಲ್ಲಿ ನಿರ್ಬಂಧ ಯಾವ ರೀತಿ ಇರಲಿದೆ ಎನ್ನುವುದರ ಬಗ್ಗೆ ನಿರ್ಧರಿಸಲಾಗುವುದು"ಎಂದು ಬ್ರಿಟನ್ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮ್ಯಾಟ್ ಹಾನ್ಕಾಕ್ ಹೇಳಿದ್ದಾರೆ.

ಲಸಿಕೆ ಬಳಸಲು ಮೊದಲು ಅನುಮತಿ ನೀಡಿದ ದೇಶಕ್ಕೆ ಮತ್ತೆ ಇದೆಂತಹ ಆಘಾತ

ಲಸಿಕೆ ಬಳಸಲು ಮೊದಲು ಅನುಮತಿ ನೀಡಿದ ದೇಶಕ್ಕೆ ಮತ್ತೆ ಇದೆಂತಹ ಆಘಾತ

ವೈರಾಣು ತೀವ್ರವಾಗಿ ಬ್ರಿಟನ್ ನಲ್ಲಿ ಹರಡುತ್ತಿರುವುದರಿಂದ ರಾಜಧಾನಿ ಲಂಡನ್ ಮತ್ತು ಆಗ್ನೇಯ ಇಂಗ್ಲೆಂಡ್ ನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ (ಟೈರ್ 4) ಘೋಷಿಸಲಾಗಿದೆ. ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್ ಆಗಿರುವುದರಿಂದ ಸುಮಾರು ಹದಿನಾರು ಮಿಲಿಯನ್ ನಾಗರೀಕರನ್ನು ಮನೆಯಿಂದ ಹೊರಗೆ ಬರದಂತೆ ಬ್ರಿಟನ್ ಸರಕಾರ ಸೂಚಿಸಿದೆ.

ರೂಪಾಂತರಗೊಂಡ ಈ ವೈರಾಣುವಿಗೆ ವಿಐಯು - 202012/01 ಎಂದು ಹೆಸರು

ರೂಪಾಂತರಗೊಂಡ ಈ ವೈರಾಣುವಿಗೆ ವಿಐಯು - 202012/01 ಎಂದು ಹೆಸರು

ಬ್ರಿಟನ್ ನಲ್ಲಿ ಕಳೆದ ಕೆಲವು ದಿನಗಳಿಂದ ದಿನವೊಂದಕ್ಕೆ ಸರಾಸರಿ ನಲವತ್ತು ಸಾವಿರ ಜನರಿಗೆ ಸೋಂಕು ತಗಲುತ್ತಿದೆ. ಈ ಹೊಸ ವೈರಾಣುವಿನ ಬಗ್ಗೆ ಎರಡು ದಿನಗಳ ಹಿಂದೆ ಬ್ರಿಟನ್ ಸರಕಾರ ವಿಶ್ವ ಆರೋಗ್ಯ ಸಂಸ್ಥೆಗೆ (WHO) ಮಾಹಿತಿಯನ್ನು ನೀಡಿದೆ. ರೂಪಾಂತರಗೊಂಡ ಈ ವೈರಾಣುವಿಗೆ ವಿಐಯು - 202012/01 ಎಂದು ಹೆಸರಿಡಲಾಗಿದೆ.

ಲಸಿಕೆ ಬಳಸಲು ಮೊದಲು ಅನುಮತಿ ನೀಡಿದ ದೇಶಕ್ಕೆ ಮತ್ತೆ ಇದೆಂತಹ ಆಘಾತ

ಲಸಿಕೆ ಬಳಸಲು ಮೊದಲು ಅನುಮತಿ ನೀಡಿದ ದೇಶಕ್ಕೆ ಮತ್ತೆ ಇದೆಂತಹ ಆಘಾತ

ಬ್ರಿಟನ್ ಮಾತ್ರವಲ್ಲದೇ ಡೆನ್ಮಾರ್ಕ್ ಮತ್ತು ಆಸ್ಟ್ರೇಲಿಯಾದಲ್ಲೂ ಈ ವೈರಾಣು ಪತ್ತೆಯಾಗಿದೆ. ಇನ್ನು, ಕಳೆದ ಭಾನುವಾರದಂದು (ಡಿ 20) ಸುಮಾರು 450 ಪ್ರಯಾಣಿಕರು ಇಂಗ್ಲೆಂಡ್ ನಿಂದ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಪೈಕಿ 138 ಮಂದಿ ನೆಗೆಟೀವ್ ವರದಿಯನ್ನು ತಂದಿಲ್ಲ. ಇವರೆಲ್ಲಾ ತಮ್ಮ ಜವಾಬ್ದಾರಿಯನ್ನು ಅರಿತು ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕಿದೆ. ಯುರೋಪ್ ದೇಶದಲ್ಲಿ ಕಾಣಿಸಿಕೊಂಡಿರುವ ಈ ವೈರಾಣು ಬೇರೆ ದೇಶಕ್ಕೆ ಹರಡದಂತೆ ಎಲ್ಲಾ ರಾಷ್ಟ್ರಗಳು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕಿದೆ.

English summary
New Coronavirus Strain In Britain And Other Two Countries Spreading Faster Than Old Virus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X