ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆಯನ್ನೂ ಮೀರಿ ಬೆಳೆಯಲಿದೆಯೇ ರೂಪಾಂತರಿ ವೈರಸ್?

|
Google Oneindia Kannada News

ಲಂಡನ್, ಡಿಸೆಂಬರ್ 22: ಕೊರೊನಾ ವೈರಸ್‌ನ ರೂಪಾಂತರ ತಳಿಯು ಲಸಿಕೆಯ ಪ್ರಭಾವದಿಂದ ತಪ್ಪಿಸಿಕೊಂಡು ಮತ್ತಷ್ಟು ಹಂತಗಳವರೆಗೆ ಬೆಳೆಯುವಷ್ಟು ಪ್ರಬಲವಾಗುವ ಹಾದಿಯಲ್ಲಿದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ರವೀಂದ್ರ ಗುಪ್ತಾ ಆತಂಕ ವ್ಯಕ್ತಪಡಿಸಿದ್ದಾರೆ.

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು, 'ವೈರಸ್ ತನ್ನ ಲಕ್ಷಣಗಳನ್ನು ಬದಲಿಸಿಕೊಳ್ಳುವುದರಿಂದ ಲಸಿಕೆಯ ಪೂರ್ಣ ಪ್ರಮಾಣದ ಪರಿಣಾಮದಿಂದ ತಪ್ಪಿಸಿಕೊಂಡು ಜನರ ಮೇಲೆ ಹಾನಿಯುಂಟುಮಾಡುವುದನ್ನು ಮುಂದುವರಿಸುವ ಸಾಧ್ಯತೆಗಳು ಇರುತ್ತವೆ. ವೈರಸ್‌ನಿಂದ ಉಂಟಾಗಿರುವ ಈಗಿನ ಅತ್ಯಂತ ಕಳವಳಕಾರಿ ಸಂಗತಿಯಿದು. ವೈರಸ್ ನಮ್ಮ ಮೇಲೆ ಮತ್ತಷ್ಟು, ಇನ್ನಷ್ಟು ಸೋಂಕಿನ ಪ್ರಭಾವ ಬೀರಲು ವೈರಸ್ ಮುಂದುವರಿಸಿರುವುದು ಇತ್ತೀಚಿನ ಹೊಸ ಸ್ವರೂಪವಷ್ಟೇ' ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ರೂಪಾಂತರ ಬೇರೆ ದೇಶದಲ್ಲೂ ಇರಬಹುದು: WHO ಕೊರೊನಾ ವೈರಸ್ ರೂಪಾಂತರ ಬೇರೆ ದೇಶದಲ್ಲೂ ಇರಬಹುದು: WHO

'ರೂಪಾಂತರವು ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಇದು ಸರ್ಕಾರವನ್ನು ಚಿಂತೆಗೀಡುಮಾಡಿದೆ. ನಮಗೂ ಚಿಂತೆ ಮೂಡಿಸಿದೆ. ಹೆಚ್ಚಿನ ವಿಜ್ಞಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ' ಎಂದು ಹೇಳಿದ್ದಾರೆ.

Mutant Virus Is On The Way To Escape From Vaccine: Ravindra Gupta

ಲಸಿಕೆಗಳು ವೈರಸ್ ವಿರುದ್ಧದ ತನ್ನ ಪರಿಣಾಮವನ್ನು ಉಳಿಸಿಕೊಳ್ಳುತ್ತವೆಯೇ ಎಂಬ ಪ್ರಶ್ನೆಗೆ ಉತ್ತರ ಹೌದು ಎಂದು ಅವರು ಹೇಳುತ್ತಾರೆ. ಆದರೆ ವೈರಸ್ ಮತ್ತಷ್ಟು ರೂಪಾಂತರವಾಗುತ್ತಲೇ ಹೋದಲ್ಲಿ ಲಸಿಕೆಯು ಅಷ್ಟೇ ಪರಿಣಾಮಕಾರಿಯಾಗಿರಬಲ್ಲದೇ ಎಂಬುದರ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.

English summary
Cambridge University Prof. Ravindra Gupta said that mutant coronavirus is on the way to escape from vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X