ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ರಾಜಮನೆತನಕ್ಕೆ ಆಘಾತ ನೀಡಿದ ಪ್ರಿನ್ಸ್ ಹ್ಯಾರಿ-ಮೇಘನ್ ದಂಪತಿ

|
Google Oneindia Kannada News

ಲಂಡನ್, ಜನವರಿ 10: ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಯುವರಾಣಿ ಮೇಘನ್ ಮರ್ಕಲ್ ದಂಪತಿ ಅರಸೊತ್ತಿಗೆಯ ಹಿರಿಯ ಸ್ಥಾನದಿಂದ ಕೆಳಕ್ಕಿಳಿಯುವ ಮೂಲಕ ರಾಜಮನೆತನ ಹಾಗೂ ಬ್ರಿಟನ್‌ಗೆ ಆಘಾತ ನೀಡಿದ್ದಾರೆ.

ರಾಜಮನೆತನದಿಂದ ಹಿರಿಯ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿರುವುದಾಗಿ ಹ್ಯಾರಿ ಮತ್ತು ಮೇಘನ್ ಘೋಷಣೆ ಮಾಡಿದ್ದಾರೆ. ಈ ನಿರ್ಧಾರಕ್ಕೂ ಮುನ್ನ ಮಹಾರಾಣಿ ಎಲಿಜಬೆತ್, ರಾಜಕುಮಾರ್ ವಿಲಿಯಮ್ಸ್ ಅವರನ್ನಾಗಲೀ ದಂಪತಿ ಸಂಪರ್ಕಿಸಿಲ್ಲ. ಇದರಿಂದಾಗಿ ರಾಜಮನೆತನ ತೀವ್ರ ಬೇಸರಗೊಂಡಿದೆ. ರಾಜಮನೆತನ ಇತರೆ ಹಿರಿಯ ಸದಸ್ಯರಿಗೂ ಈ ಹೇಳಿಕೆಯಿಂದ ನೋವಾಗಿದೆ ಎಂದು ವರದಿಯಾಗಿದೆ. ಈ ಹಠಾತ್ ನಿರ್ಧಾರದಿಂದ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಮೌನದ ವಾತಾವರಣ ನಿರ್ಮಾಣವಾಗಿದೆ.

ಬ್ರಿಟನ್ ರಾಜಕುಮಾರ ಹ್ಯಾರಿ ಸಮೋಸ ಕದ್ದಿದ್ದೇಕೆ?ಬ್ರಿಟನ್ ರಾಜಕುಮಾರ ಹ್ಯಾರಿ ಸಮೋಸ ಕದ್ದಿದ್ದೇಕೆ?

ಕಳೆದ ಅಕ್ಟೋಬರ್‌ನಲ್ಲಿ ಹ್ಯಾರಿ ಮತ್ತು ಮೇಘನ್ ದಂಪತಿ ತಾವು ಎದುರಿಸುತ್ತಿರುವ ಸಂಕಷ್ಟಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ದಂಪತಿಯ ಈ ನಿರ್ಧಾರಕ್ಕೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ರಾಜಮನೆತನದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಅನೇಕರು ಹೇಳಿದ್ದರೆ, ಆಧುನಿಕ ಕಾಲಘಟ್ಟದಲ್ಲಿ ಈ ವ್ಯವಸ್ಥೆಯನ್ನು ತಿರಸ್ಕರಿಸಿ ಹೊರಬರುವುದು ಅತ್ಯುತ್ತಮ ಮತ್ತು ದಿಟ್ಟತನದ ನಿರ್ಧಾರ ಎಂದು ಕೆಲವರು ಶ್ಲಾಘಿಸಿದ್ದಾರೆ.

ಎಲ್ಲರನ್ನೂ ಗೌರವಿಸುತ್ತೇವೆ

ಎಲ್ಲರನ್ನೂ ಗೌರವಿಸುತ್ತೇವೆ

ಅರಸೊತ್ತಿಗೆಯ ಹಿರಿಯ ಸದಸ್ಯತ್ವದಿಂದ ಹೊರಬಂದು ಆರ್ಥಿಕವಾಗಿ ಸ್ವತಂತ್ರರಾಗಲು ಬಯಸಿರುವುದಾಗಿ ದಂಪತಿ ತಿಳಿಸಿದ್ದರು. ಜತೆಗೆ ತಮ್ಮ ಸಮಯವನ್ನು ಇಂಗ್ಲೆಂಡ್ ಮತ್ತು ಉತ್ತರ ಅಮೆರಿಕಗಳಲ್ಲಿ ಕಳೆಯಲು ಅವರು ನಿರ್ಧರಿಸಿದ್ದಾರೆ. ರಾಣಿ, ಕಾಮನ್‌ವೆಲ್ತ್ ಮತ್ತು ತಮ್ಮ ಆಶ್ರಯದಾತರನ್ನು ಗೌರವಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಈ ಪ್ರಕಟಣೆ ಮಾಡುತ್ತಿದ್ದಂತೆಯೇ ಮೇಡಂ ಟುಸ್ಸಾಡ್ಸ್ ಮೇಣದ ಮ್ಯೂಸಿಯಂನಲ್ಲಿ ರಾಜಮನೆತನದ ಕುಟುಂಬದ ಜತೆಗೆ ನಿಲ್ಲಿಸಲಾಗಿದ್ದ ಹ್ಯಾರಿ ಮತ್ತು ಮೇಘನ್ ಅವರ ಮೇಣದ ಪ್ರತಿಮೆಗಳನ್ನು ತೆರವುಗೊಳಿಸಲಾಗಿದೆ.

ಸಹೋದರರ ನಡುವೆ ಭಿನ್ನಾಭಿಪ್ರಾಯ

ಸಹೋದರರ ನಡುವೆ ಭಿನ್ನಾಭಿಪ್ರಾಯ

ರಾಜಕುಮಾರ ಹ್ಯಾರಿ ಮತ್ತು ಅವರ ಸಹೋದರ ವಿಲಿಯಮ್ಸ್ ನಡುವಿನ ಭಿನ್ನಾಭಿಪ್ರಾಯಗಳೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಸಹೋದರರ ನಡುವೆ ಅನೇಕ ವಿಚಾರಗಳಲ್ಲಿ ಮನಸ್ತಾಪವಿದೆ. ವಿಲಿಯಮ್ಸ್ ಪತ್ನಿ ಕೇಟ್ ಮಿಡ್ಲಟನ್ ಅವರ ಜನ್ಮದಿನದ ಎರಡು ಕಾರ್ಯಕ್ರಮಗಳಿಗೂ ಹ್ಯಾರಿ ಮತ್ತು ಮೇಘನ್ ಹಾಜರಾಗಿರಲಿಲ್ಲ. ಆಗಿನಿಂದಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದು ಬಹಿರಂಗವಾಗಿತ್ತು.

ಐದು ವರ್ಷದಲ್ಲಿ ಸರ್ಕಾರ ರಾಜಮನೆತನಕ್ಕೆ ನೀಡಿರುವ ಗೌರವ ಧನ ಎಷ್ಟು?ಐದು ವರ್ಷದಲ್ಲಿ ಸರ್ಕಾರ ರಾಜಮನೆತನಕ್ಕೆ ನೀಡಿರುವ ಗೌರವ ಧನ ಎಷ್ಟು?

ವಿಲಿಯಮ್ಸ್ ದಂಪತಿಗೆ ಅತ್ಯುನ್ನತ ಸ್ಥಾನ

ವಿಲಿಯಮ್ಸ್ ದಂಪತಿಗೆ ಅತ್ಯುನ್ನತ ಸ್ಥಾನ

ರಾಜಮನೆತನದ ಮುಖ್ಯ ಆಡಳಿತ ನಿರ್ವಹಿಸುವ ವಿಚಾರದಲ್ಲಿ ಹ್ಯಾರಿ ಮತ್ತು ವಿಲಿಯಮ್ಸ್ ನಡುವೆ ಪೈಪೋಟಿ ಇತ್ತು. ಆದರೆ ಹಿರಿಯರಾಗಿರುವ ವಿಲಿಯಮ್ಸ್ ಅವರಿಗೆ ಈ ಪಟ್ಟ ಸಿಗುವ ಸಾಧ್ಯತೆ ಇದೆ. ಇದರಿಂದ ಅವರ ಪತ್ನಿ ಕೇಟ್ ರಾಣಿಯ ಸ್ಥಾನ ಪಡೆದುಕೊಳ್ಳಲಿದ್ದಾರೆ. ಇದು ಹ್ಯಾರಿ ಮತ್ತು ಮೇಘನ್ ದಂಪತಿಗೆ ಕಸಿವಿಸಿ ಉಂಟುಮಾಡಲಿದೆ. ಆ ಸಂದರ್ಭದವರೆಗೂ ಕಾಯುವ ಮೊದಲೇ ಅರಮನೆಯಿಂದ ಹೊರಬರಲು ಅವರು ತೀರ್ಮಾನಿಸಿದ್ದಾರೆ.

ಸಂಪೂರ್ಣ ವೆಚ್ಚ ಸರ್ಕಾರದ್ದು

ಸಂಪೂರ್ಣ ವೆಚ್ಚ ಸರ್ಕಾರದ್ದು

ಅಮೆರಿಕದ ಮಾಜಿ ನಟಿಯಾಗಿರುವ ಮೇಘನ್ ಮರ್ಕಲ್ ಮತ್ತು ಪ್ರಿನ್ಸ್ ಹ್ಯಾರಿ ವಿವಾಹ 2018ರಲ್ಲಿ ನಡೆದಿತ್ತು. ಮೇಘನ್ ಅವರ ತಾಯಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಹೀಗಾಗಿ ಈ ದಂಪತಿ ಅಲ್ಲಿಗೆ ತೆರಳಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಬ್ರಿಟನ್ ರಾಜಮನೆತನಕ್ಕೆ ಸೇರಿದವರು ಯಾವುದೇ ಉದ್ಯೋಗ ನಡೆಸುವಂತಿಲ್ಲ. ಅವರ ಎಲ್ಲ ಖರ್ಚು ವೆಚ್ಚಗಳನ್ನು ಬ್ರಿಟನ್ ಸರ್ಕಾರವೇ ಭರಿಸುತ್ತದೆ. ವಿದೇಶ ಪ್ರವಾಸಗಳಿಗೂ ಸರ್ಕಾರದಿಂದಲೇ ಹಣ ವ್ಯಯಿಸಲಾಗುತ್ತದೆ. ಲಂಡನ್ ಮೆಟ್ರೊಪಾಲಿಟನ್ ಪೊಲೀಸರಿಂದ ಅವರಿಗೆ ಸಶಸ್ತ್ರ ಭದ್ರತೆ ನೀಡಲಾಗುತ್ತದೆ. 2018-19ನೇ ಸಾಲಿನಲ್ಲಿ ಬ್ರಿಟನ್ ಸರ್ಕಾರವು ರಾಜಮನೆತನದ ವೆಚ್ಚಕ್ಕಾಗಿಯೇ 82 ಮಿಲಿಯನ್ ಪೌಂಡ್ ಹಣ ಮೀಸಲಿಟ್ಟಿದೆ. ಈ ಹಣವನ್ನು ಬಳಸದೆ ಇರಲು ಹ್ಯಾರಿ ದಂಪತಿ ನಿರ್ಧರಿಸಿದ್ದಾರೆ.

ಬೇಗನೆ ಪರಿಹಾರ ಕಂಡುಕೊಳ್ಳಲು ಸೂಚನೆ

ಬೇಗನೆ ಪರಿಹಾರ ಕಂಡುಕೊಳ್ಳಲು ಸೂಚನೆ

ರಾಜಪ್ರಭುತ್ವದ ನಂಟು ತ್ಯಜಿಸಿದ ಬಳಿಕವೂ ಪ್ರಿನ್ಸ್ ಹ್ಯಾರಿಗೆ ವಂಶಪಾರಂಪರ್ಯವಾಗಿ ಬರಬೇಕಾದ 91 ಕೋಟಿ ರೂ. ಮೌಲ್ಯದ ಆಸ್ತಿ ಸಿಗಲಿದೆ. ಜತೆಗೆ ಇತರೆ ಸೌಲಭ್ಯಗಳು ಸಹ ದೊರಕಲಿದೆ. ಸರ್ಕಾರದೊಂದಿಗೆ ಮತ್ತು ಸಸೆಕ್ಸ್ ಮನೆತನದೊಂದಿಗೆ ಸೇರಿ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವಂತೆ ವೇಲ್ಸ್‌ನ ರಾಜಕುಮಾರ ಮತ್ತು ಕೇಂಬ್ರಿಡ್ಜ್ ರಾಜನಿಗೆ ರಾಣಿ ಸೂಚನೆ ನೀಡಿದ್ದಾರೆ. ಈ ಸಮಸ್ಯೆಗೆ ವಾರಗಳಲ್ಲ, ಕೆಲವೇ ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ರಾಜಮನೆತನದ ಮೂಲಗಳು ತಿಳಿಸಿವೆ.

ಸ್ನೇಹಿತೆಯ ಬಳಿ ದಂಪತಿ ಮಗು

ಸ್ನೇಹಿತೆಯ ಬಳಿ ದಂಪತಿ ಮಗು

ರಾಜಕುಮಾರ ಹ್ಯಾರಿ, ತಮ್ಮ ನಿರ್ಗಮನದ ಕುರಿತು ಅರಮನೆಯ ಹಿರಿಯ ಸದಸ್ಯರ ಜತೆ ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಮೇಘನ್ ಮೂರು ದಿನಗಳ ಬಳಿಕ ಕೆನಡಾಕ್ಕೆ ಮರಳಿದ್ದಾರೆ. ಬ್ರಿಟನ್‌ಗೆ ತೆರಳುವ ಮನ್ನ ಮೇಘನ್ ತಮ್ಮ ಎಂಟು ತಿಂಗಳ ಮಗು ಆರ್ಚಿಯನ್ನು ಆತ್ಮೀಯ ಸ್ನೇಹಿತೆ ಜೆಸ್ಸಿಕಾ ಮುಲ್ರೋನಿ ಅವರ ವಶದಲ್ಲಿ ಇರಿಸಿದ್ದರು.

ಮುಂದಿನ ಕೆಲವು ದಿನಗಳವರೆಗೆ ಮೇಘನ್ ಕೆನಡಾದಲ್ಲಿಯೇ ಇರಲಿದ್ದಾರೆ. ಹ್ಯಾರಿ ಬ್ರಿಟನ್‌ನಲ್ಲಿ ಉಳಿದುಕೊಂಡಿದ್ದು, ರಗ್ಬಿ ಲೀಗ್ ವಿಶ್ವಕಪ್ 2021ರಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Buckingham Palace is disappointed after Prince Harry and Meghan Markle announced they will step back as senior royals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X