ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ಮೇಲೇ ಪೆಟ್ರೋಲ್ ಸುರಿದು ನಡುಕ ಹುಟ್ಟಿಸಿದ ಆರೋಪಿ

|
Google Oneindia Kannada News

ಲಂಡನ್, ನವೆಂಬರ್ 08: ಬೈಕ್ ಕಳ್ಳನನ್ನು ಹಿಡಿಯಲು ಬಂದ ಪೊಲೀಸರ ಮೇಲೇ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ನಡುಕ ಹುಟ್ತಿಸಿದ ಘಟನೆ ಇಂಗ್ಲೆಂಡ್ ನ ಎಸ್ಸೆಕ್ಸ್ ನ ಬಸಿಲ್ಡನ್ ನಲ್ಲಿ ನಡೆದಿದೆ.

ಜಸ್ಟಿನ್ ಜಾಕ್ಸನ್ ಎಂಬ 28 ವರ್ಷ ವಯಸ್ಸಿನ ಯುವಕನಿಗೆ ಈ ತಪ್ಪಿಗಾಗಿ ಮೂರು ವರ್ಷ, ಒಂಬತ್ತು ತಿಂಗಳು ಜೈಲುವಾಸದ ಶಿಕ್ಷೆ ನೀಡಲಾಗಿದೆ.

ಸಜೀವ ದಹನವಾಗಲೆಂದೇ ವಿಜಯಾ ರೆಡ್ಡಿ ಶಿಕ್ಷಕಿ ಕೆಲಸ ಬಿಟ್ಟು ಬಂದರೇ...?!ಸಜೀವ ದಹನವಾಗಲೆಂದೇ ವಿಜಯಾ ರೆಡ್ಡಿ ಶಿಕ್ಷಕಿ ಕೆಲಸ ಬಿಟ್ಟು ಬಂದರೇ...?!

ಬೈಕ್ ಕದ್ದು ಹೋಗುತ್ತಿದ್ದ ಕಳ್ಳನನ್ನು ಪೊಲೀಸರು ಚೇಸ್ ಮಾಡಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಗುಂಡೇಟಿಗೆ ಕಳ್ಳ ಕೆಳಗೆ ಬಿದ್ದಿದ್ದ. ಅಲ್ಲಿ ನೆರೆದಿದ್ದವರೆಲ್ಲ ಅವನ ರಕ್ಷಣೆಗೆ ಮುಂದಾಗಿದ್ದರು. ಇನ್ನೇನು ಅವನನ್ನು ಬಂಧಿಸಬೇಕು ಎಂಬಷ್ಟರಲ್ಲಿ ಜಾಕ್ಸನ್ ಎಂಬ ವ್ಯಕ್ತಿ ಒಂದು ಕ್ಯಾನ್ ತುಂಬ ಪೆಟ್ರೋಲ್ ತಂದು ಏಕಾಏಕಿ ಪೊಲೀಸರ ಮೇಲೆ ಚೆಲ್ಲಿದ್ದಾನೆ. ಕೂಡಲೆ ಎಚ್ಚೆತ್ತ ಪೊಲೀಸರು ಅವನನ್ನು ತಳ್ಳಿದ್ದಾರೆ. ಆದರೆ ಆತನಿಗೆ ಗುಂಡು ಹೊಡದರೆ ಅಲ್ಲೆಲ್ಲ ಚೆಲ್ಲಿರುವ ಪೆಟ್ರೋಲ್ ಮೂಲಕ ತಾವೂ ಸುಟ್ಟು ಹೋಗುವ ಭಯದಿಂದ ಪೊಲೀಸರಿಗೇ ನಡುಕ ಉಂಟಾಗಿದೆ. ಯಾರಾದ್ರೂ ಸಿಗರೇಟ್ ಸೇದುತ್ತಿದ್ದಾರೆಯೇ ಎಂದೂ ಭಯದಿಂದಲೇ ಸುತ್ತಲೂ ಹುಡುಕಾಡಿದ್ದಾರೆ.

Man Pours Petrol On Police, creates Tension,

ಆತ ಕ್ಯಾನ್ ನಲ್ಲಿ ಏನು ತಂದು ಸುರಿಯುತ್ತಿದ್ದಾನೆ ಎಂಬುದನ್ನು ಗಮನಿಸುವುದಕ್ಕೂ ಅವಕಾಶ ನೀಡದೆ ಅನಿರೀಕ್ಷಿತವಾಗಿ ಆತ ಬಂದಿದ್ದಾನೆ. ಬ್ಲೀಚಿಂಗ್ ಪೌಡರ್ ಸೇರಿಸಿದ ನೀರಿರಬಹುದು ಎಂದು ಮೊದಲಿಗೆ ಪೊಲೀಸರು ಭಾವಿಸಿದ್ದಾರೆ. ಆದರೆ ನಂತರ ಪೆಟ್ರೋಲ್ ವಾಸನೆ ಹಬ್ಬುತ್ತಿದ್ದಂತೆಯೇ ತೀವ್ರ ಆತಂಕಕ್ಕೀಡಾಗಿದ್ದಾರೆ.

"ನಾನು ಆ ಸಮಯದಲ್ಲಿ ಪರಿಸ್ಥಿತಿಯನ್ನು ತಣ್ಣಗಾಗಿಸುವ ಸಲುವಾಗಿ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹಾಗೆ ಮಾಡಿದೆ. ಆ ಸಂದರ್ಭದಲ್ಲಿ ಪೊಲೀಸರಿಗೆ ಎಷ್ಟು ಭಯವಾಗಿರಬಹುದು" ಎಂಬುದನ್ನು ನಾನು ಊಹೆ ಮಾಡಬಲ್ಲೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಳಿಸರು ತಿಳಿಸಿದ್ದಾರೆ.

ಆದರೆ ಈ ಆರೋಪಕ್ಕೆ ಆತನಿಗೆ 3 ವರ್ಷ 9 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

English summary
Man Pours Petrol On Police, creates Tension. Incident Took Place In Basildon, Essesx, England.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X