ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಕನ್ನಡಕ ಮೂಲಬೆಲೆಗೂ 26 ಪಟ್ಟು ಅಧಿಕ ಮೊತ್ತಕ್ಕೆ ಸೇಲ್

|
Google Oneindia Kannada News

ಲಂಡನ್, ಆ .22: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಧರಿಸಿದ್ದ ಕನ್ನಡಕವು ಬ್ರಿಸ್ಟೋಲ್ ಪೂರ್ವದಲ್ಲಿ ಹರಾಜಿಗಿಡಲಾಗಿತ್ತು. ಮೂಲಬೆಲೆಗೂ 26ಪಟ್ಟು ಅಧಿಕ ಮೊತ್ತಕ್ಕೆ ಕನ್ನಡಕ ಮಾರಾಟಗೊಂಡಿದೆ.

ಗಾಂಧೀಜಿ ಅವರ ಕನ್ನಡಕಕ್ಕೆ ಸರಿ ಸುಮಾರು 260,000 ಪೌಂಡ್(ಸುಮಾರು 2.5 ಕೋಟಿ ರು) ನೀಡಿ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ.

ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ಸ್ ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ಸ್

1920ರಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧಿ ಅವರು ಈ ಕನ್ನಡಕವನ್ನು ಒಬ್ಬರಿಗೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಶುಕ್ರವಾರದಂದು ನಡೆದ ಬಿಡ್ಡಿಂಗ್ ನ ಮೊದಲ 6 ನಿಮಿಷದಲ್ಲೇ ಅಮೆರಿಕದ ವ್ಯಕ್ತಿಯೊಬ್ಬರು ಫೋನ್ ಬಿಡ್ ಸಲ್ಲಿಸಿ, ಹರಾಜು ಗೆದ್ದಿದ್ದಾರೆ ಎಂದು ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಆಂಡ್ರ್ಯೂ ಸ್ಟೋ ಹೇಳಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಬಿಡ್, ಮೂಲಬೆಲೆಗಿಂತ ಅತಿ ಹೆಚ್ಚು ಮೌಲ್ಯಕ್ಕೆ ಮಾರಾಟವಾಗಿದ್ದು ಎರಡು ದಾಖಲೆ ಎಂದು ಆಂಡ್ರ್ಯೂ ಹೇಳಿದ್ದಾರೆ.

Mahatma Gandhi’s spectacles sold for record price at Bristol auction

ಗಾಂಧಿ ಧರಿಸಿದ್ದ ಈ ದುಂಡನೆಯ ಫ್ರೇಮಿನ ಚಿನ್ನದ ಬಣ್ಣದ ಕನ್ನಡಕವು £15,000 ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿತ್ತು. ಆದರೆ, ಮ್ಯಾಂಗೋಸ್ ಫೀಲ್ಡ್ ನ ಹಿರಿಯ ವ್ಯಕ್ತಿಯೊಬ್ಬರು ಈ ಕನ್ನಡಕವನ್ನು ಹರಾಜಿಗೆ ಇಡಲು ಸೂಚಿಸಿದ್ದರು. ಭಾರಿ ಬೆಲೆಗೆ ಮಾರಾಟವಾಗಿದ್ದು ಅವರಿಗೂ ಅಚ್ಚರಿ ಮೂಡಿಸಿದೆ. ಭಾರಿ ಮೊತ್ತವನ್ನು ತಮ್ಮ ಹೆಣ್ಣು ಮಕ್ಕಳಿಗೆ ನೀಡುವುದಾಗಿ ಹೇಳಿದ್ದಾರೆ ಎಂದು ಆಂಡ್ರ್ಯೂ ಹೇಳಿದ್ದಾರೆ.

English summary
A pair of glasses, worn by Mahatma Gandhi, were sold for £260,000(around Rs2.5 Cr), at East Bristol auction, twenty-six times the guide price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X