ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಮಾನ ವಿಳಂಬ' ಪ್ರಕಟಣೆ ಕೇಳಿ ಪ್ರಯಾಣಿಕನೇ ವಿಮಾನ ಚಲಾಯಿಸಿದ ವಿಚಿತ್ರ ಕತೆ!

|
Google Oneindia Kannada News

"ಯುವರ್ ಫ್ಲೈಟ್ ವಿಲ್ ಬಿ ಡಿಲೇಡ್..." ಪ್ರಯಾಣಿಕರು ಅತ್ಯಂತ ದ್ವೇಷಿಸುವ ವಾಕ್ಯ ಅಂದ್ರೆ ಅದೇ! ಆದರೆ ಇಂಥದೊಂದು ಪ್ರಕಟಣೆಯನ್ನು ಕೇಳಿ ಪ್ರಯಾಣಿಕರು ಏನು ಮಾಡುವುದಕ್ಕೆ ಸಾಧ್ಯ, ಮನಸ್ಸಲ್ಲೇ ಹಿಡಿಶಾಪ ಹಾಕಿಕೊಂಡು ಕೂರುವುದನ್ನು ಬಿಟ್ಟರೆ?!

ಆದರೆ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಿಂದ ಸ್ಪೇನ್ ನ ಅಲಿಕೆಂಟ್ ಗೆ ತೆರಳಬೇಕಿದ್ದ ವಿಮಾನದಲ್ಲಿ 'ವಿಮಾನ ವಿಳಂಬ' ಎಂಬ ಪ್ರಕಟಣೆಗೆ ಜನರು ಹಿಡಿಶಾಪಕುತ್ತಿದ್ದ ಹೊತ್ತಲ್ಲಿ ವಿಚಿತ್ರವೊಂದು ಸಂಭವಿಸಿತ್ತು. ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮುಂದೆ ಬಂದು ಪೈಲಟ್ ಸೀಟಿನಲ್ಲಿ ಕೂತು ವಿಮಾನ ಚಾಲನೆಗೆ ತೊಡಗಿಬಿಟ್ಟಿದ್ದ!

ವಿಮಾನವನ್ನು ಜೋಳದ ಗದ್ದೆಗಿಳಿಸಿ 233 ಜನರ ಪ್ರಾಣ ಉಳಿಸಿದ 'ಹೀರೋ' ಪೈಲಟ್ವಿಮಾನವನ್ನು ಜೋಳದ ಗದ್ದೆಗಿಳಿಸಿ 233 ಜನರ ಪ್ರಾಣ ಉಳಿಸಿದ 'ಹೀರೋ' ಪೈಲಟ್

ವಿಮಾನ ಡಿಲೆ ಆಗಲಿದೆ ಎಂದು ಉಲಿದಿದ್ದ ಮಹಿಳೆ ಇದ್ದಕ್ಕಿದ್ದಂತೆಯೇ, "ವಿಮಾನ ಈಗ ಟೇಕಾಫ್ ಆಗಲಿದೆ" ಎಂದು ಪ್ರಕಟಿಸಿಬಿಟ್ಟರು. ಪ್ರಯಾಣಿಕರಿಗೆಲ್ಲ ಒಂದೆಡೆ ಆತಂಕ, ಗಾಬರಿ, ಆಶ್ಚರ್ಯ... ಸೇರಿ ಮುಖದಲ್ಲಿ ನವರಸಗಳು ಉಕ್ಕುತ್ತಿರುವ ಹೊತ್ತಲ್ಲಿ ತಿಳಿದುಬಂದ ವಿಷಯ ಇಷ್ಟೇ...

Long Flight Delay in London, Passanger Becomes Pilot!

ಹಾಗೆ ಪೈಲಟ್ ಸೀಟಿನ ಬಳಿ ಹೋಗಿ, ವಿಮಾನ ಚಾಲನೆಗೆ ತೆರಳಿದ ವ್ಯಕ್ತಿ ಮೈಕೆಲ್ ಬ್ರಾಡ್ಲೆ ಎಂಬ ಪೈಲಟ್! ರಜೆಯ ಮೇಲೆ ಸ್ಪೇನ್ ನಲ್ಲಿರುವ ತನ್ನ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಾನಿದ್ದ ವಿಮಾನದ ಪೈಲಟ್ ರಜೆ ಹಾಕಿರುವ ವಿಷಯ ಆತನಿಗೆ ತಿಳಿಯುತ್ತದೆ. ಸಿಬ್ಬಂದಿಯ ಕೊರತೆಯಿಂದ ಅಲ್ಲಿನ ವಿಮಾನಯಾನ ಸಂಸ್ಥೆ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ತಿಳಿದಿದ್ದ ಮೈಕಲ್ ತಾವೇ ವಿಮಾನ ಚಾಲನೆಗೆ ಮುಂದಾದರು. ಪರಿಣಿತ ಪೈಲಟ್ ಆಗಿ ಹೆಸರು ಮಾಡಿದ್ದ ಮೈಕಲ್, "ನಾನು ರಜೆಯ ಮೇಲಿದ್ದೇನೆ. ಆದರೆ ಇಷ್ಟು ಪ್ರಯಾಣಿಕರಿಗೆ ಸಹಾಯವಾಗುತ್ತದೆ ಎಂದಾದರೆ ನಾನು ನೆರವಿಗೆ ಸಿದ್ಧನಾಗಿದ್ದೇನೆ" ಎನ್ನುತ್ತಿದ್ದಂತೆಯೇ ಅವರನ್ನು ವಿಮಾನ ಚಾಲನೆ ಮಾಡುವಂತೆ ಆ ನಿರ್ದಿಷ್ಟ ವಿಮಾನಯಾನ ಸಂಸ್ಥೆಯೇ ಮನವಿ ಮಾಡಿತ್ತು.

ಕರಾಳ ರಾತ್ರಿ: ನಿದ್ದೆಯಲ್ಲಿ ಮುಳುಗಿ ವಿಮಾನ ಇಳಿಯುವುದನ್ನೇ ಮರೆತ ಮಹಿಳೆ, ಮುಂದೇನಾಯ್ತು?ಕರಾಳ ರಾತ್ರಿ: ನಿದ್ದೆಯಲ್ಲಿ ಮುಳುಗಿ ವಿಮಾನ ಇಳಿಯುವುದನ್ನೇ ಮರೆತ ಮಹಿಳೆ, ಮುಂದೇನಾಯ್ತು?

ವಿಮಾನ ಟೇಕಾಫ್ ಆಗಬೇಕಿದ್ದ ಸಮಯಕ್ಕೆ ಇನ್ನು 38 ಸೆಕೆಂಡ್ ಗಳು ಬಾಕಿ ಇದ್ದಾಗ ಮೈಕಲ್ ಗೆ ವಿಮಾನಯಾನ ಸಂಸ್ಥೆಯೇ ಫೋನಾಯಿಸಿ, ವಿಮಾನ ಚಾಲನೆ ಮಾಡುವಂತೆ ಮನವಿ ಮಾಡಿತ್ತು. ಆದರೆ ಇದ್ಯಾವುದೂ ಗೊತ್ತಿಲ್ಲದ ಪ್ರಯಾಣಿಕರು, ತಮ್ಮದೇ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಪೈಲಟ್ ಸೀಟಿನಲ್ಲಿ ಕೂತಾಗ ಅಂಗೈಲಿ ಜೀವ ಹಿಡಿದುಕೊಂಡು, ಏನೂ ಅರ್ಥವಾಗದಂತೆ ಕುಳಿತಿದ್ದಿದ್ದಂತೂ ಸತ್ಯ!

ಈ ಅನುಭವವನ್ನು ಮೈಕೆಲ್ಲೆ ಪೊಟ್ಸ್ ಎಂಬ ಮಹಿಳೆ ತಮ್ಮ ಫೆಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

English summary
Long Flight Delay, Passanger Becomes Pilot!',
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X