ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ಪ್ರಕಟಿಸಿದ ಬ್ರಿಟನ್ ಪ್ರಧಾನಿ ಥೆರೆಸಾ ಮೇ

|
Google Oneindia Kannada News

ಲಂಡನ್, ಮೇ 24: ಬ್ರೆಕ್ಸಿಟ್ ಜಾರಿಗೊಳಿಸುವ ವಿಚಾರದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಪರ್ಯಾಯ ನಾಯಕನ ಆಯ್ಕೆಯಾಗುವವರೆಗೂ ಜೂನ್ 7ರವರೆಗೆ ಮಾತ್ರ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.

'ಬ್ರಿಕ್ಸಿಟ್ ಜಾರಿಗೊಳಿಸಲು ನನ್ನಿಂದ ಸಾಧ್ಯವಾಗದೆ ಇರುವುದಕ್ಕೆ ತೀವ್ರ ಪಶ್ಚಾತ್ತಾಪ ಎಂದಿಗೂ ಉಳಿಯಲಿದೆ' ಎಂದು ತಮ್ಮ ಭಾವನಾತ್ಮಕ ಭಾಷಣದಲ್ಲಿ ಅವರು ಹೇಳಿದ್ದಾರೆ.

ಬ್ರೆಕ್ಸಿಟ್ ಪರಿಣಾಮ: ರಾಜೀನಾಮೆ ನೀಡಲು ಮುಂದಾದ ಥೆರೆಸಾ ಮೇ ಬ್ರೆಕ್ಸಿಟ್ ಪರಿಣಾಮ: ರಾಜೀನಾಮೆ ನೀಡಲು ಮುಂದಾದ ಥೆರೆಸಾ ಮೇ

'ಜೂನ್ 7ರಂದು ಕನ್ಸರ್ವೇಟಿವ್ ನಾಯಕತ್ವಕ್ಕೆ ಮತ್ತು ಯೂನಿಯನಿಸ್ಟ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಹೊಸ ನಾಯಕತ್ವವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮುಂದಿನ ವಾರದಲ್ಲಿ ಆರಂಭವಾಗಬೇಕಿದೆ' ಎಂದು ಹೇಳಿದ್ದಾರೆ.

Lok Sabha Election Results Theresa may announces resignation

ಭಾಷಣದ ವೇಳೆ ಅವರು ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ್ದು, ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸಿದ್ದು, ಮಾನಸಿಕ ಆರೋಗ್ಯದ ವೃದ್ಧಿಗೆ ನೆರವಾದದ್ದು ಸೇರಿದಂತೆ ವಿವಿಧ ಸಾಧನೆಗಳನ್ನು ಸರ್ಕಾರ ಮಾಡಿರುವುದಾಗಿ ಹೇಳಿಕೊಂಡರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ: ಮತ್ತೆ 'ವಿಷಾದ' ವ್ಯಕ್ತಪಡಿಸಿದ ಬ್ರಿಟನ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡ: ಮತ್ತೆ 'ವಿಷಾದ' ವ್ಯಕ್ತಪಡಿಸಿದ ಬ್ರಿಟನ್

'ಈ ಒಪ್ಪಂದದ ವಿಚಾರದಲ್ಲಿ ಸಂಸದರ ಮನವೊಲಿಸಲು ನನ್ನಿಂದ ಸಾಧ್ಯವಾದುದ್ದನ್ನೆಲ್ಲ ಮಾಡಿದ್ದೇನೆ. ಆದರೆ, ನನ್ನಿಂದ ಅದು ಸಾಧ್ಯವಾಗಲಿಲ್ಲ ಎನ್ನುವುದು ದುಃಖಕರ. ನಾನು ಮೂರು ಬಾರಿ ಪ್ರಯತ್ನಿಸಿದ್ದೇನೆ. ಇದನ್ನು ಇಲ್ಲಿಗೆ ಬಿಟ್ಟುವುದು ಸೂಕ್ತ ಎನಿಸಿದೆ. ಈ ಪ್ರಯತ್ನವನ್ನು ಹೊಸ ಪ್ರಧಾನಿ ಮುನ್ನಡೆಸುವುದು ದೇಶದ ಹಿತಾಸಕ್ತಿಯಿಂದ ಒಳ್ಳೆಯದು ಎನ್ನುವುದು ನನಗೆ ಸ್ಪಷ್ಟವಾಗಿದೆ' ಎಂದು ಗದ್ಗದಿತರಾಗಿ ಅವರು ನುಡಿದರು.

English summary
Lok Sabha Election Results: Theresa May to resign as Britain Prime Minister. She has decided to quit on June 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X