• search
 • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಬಲ್ಲರಾ? ಆಗಲ್ಲ ಎನ್ನುತ್ತದೆ ಸಮೀಕ್ಷೆ

|
Google Oneindia Kannada News

ಲಂಡನ್, ಆಗಸ್ಟ್ 1: ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ ಏಕಪಕ್ಷೀಯವಾಗಿ ಬದಲಾಗುತ್ತಿರುವಂತಿದೆ. ಲಿಜ್ ಟ್ರುಸ್ ಮತ್ತು ರಿಷಿ ಸುನಕ್ ನಡುವಿನ ಸ್ಪರ್ಧೆಯಲ್ಲಿ ಭಾರತ ಮೂಲದ ರಿಷಿಗೆ ಸೋಲಾಗುವ ಸಾಧ್ಯತೆ ದಟ್ಟವಾಗಿದೆ.

ಬ್ರಿಟನ್ ವಿದೇಶಾಂಗ ಸಚಿವೆ ಲಿಜ್ ಟ್ರುಸ್ ಮುಂದಿನ ಪ್ರಧಾನಿಯಾಗಬಹುದು ಎಂದು ಬೆಟ್ಟಿಂಗ್ ಟ್ರೆಂಡ್‌ಗಳು ಹೇಳುತ್ತಿವೆ. ಸ್ಮಾರ್ಕೆಟ್ಸ್ ಎಂಬ ಬೆಟಿಂಗ್ ಎಕ್ಸ್‌ಚೇಂಜ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಲಿಜ್ ಟ್ರುಸ್ ಗೆಲುವಿನ ಸಾಧ್ಯತೆ ಶೇ. 90ರಷ್ಟು ಇದ್ದರೆ, ರಿಷಿ ಸುನಕ್ ಪರ ಇರುವುದು ಶೇ. 10ಕ್ಕಿಂತ ಕಡಿಮೆ ಎನ್ನಲಾಗಿದೆ.

ಭಾರತ ಮೂಲದ ರಿಷಿ ಸುನಕ್ ಗೆಲುವು ಸುಲಭವಲ್ಲ ಎಂಬುದು ಹೌದು. ಹಲವು ಸಂಗತಿಗಳು ರಿಷಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ಲಿಜ್ ಟ್ರುಸ್ ಬಹಳ ಜಾಣ್ಮೆಯಿಂದ ರಿಷಿ ವಿರುದ್ಧದ ಅಲೆಯನ್ನು ತನ್ನ ಪರವಾಗಿ ಬರುವಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ.

ಐದು ಸುತ್ತು ಗೆದ್ದರೂ ರಿಷಿ ಸುನಕ್‌ಗೆ ಒಲಿಯಲ್ಲವಾ ಪ್ರಧಾನಿ ಪಟ್ಟ? ಏನು ಕಾರಣ?ಐದು ಸುತ್ತು ಗೆದ್ದರೂ ರಿಷಿ ಸುನಕ್‌ಗೆ ಒಲಿಯಲ್ಲವಾ ಪ್ರಧಾನಿ ಪಟ್ಟ? ಏನು ಕಾರಣ?

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸದಸ್ಯರಲ್ಲಿ ಲಿಜ್ ಟ್ರುಸ್ ಪರವಾಗಿ ನಿಲುವು ಹೊಂದಿರುವವರಿಗಿಂತ ಹೆಚ್ಚಾಗಿ ರಿಷಿ ಸುನಕ್‌ಗೆ ವಿರುದ್ಧವಾಗಿ ಭಾವನೆಗಳನ್ನು ಹೊಂದಿರುವವರೇ ಹೆಚ್ಚು. ಹೀಗಾಗಿ, ರಿಷಿ ಸುನಕ್‌ಗೆ ಬ್ರಿಟನ್ ಪ್ರಧಾನಿ ಪಟ್ಟ ಸಿಗುತ್ತದೆಂದು ನಿರೀಕ್ಷಿಸುವುದು ಕಷ್ಟ.

ಪ್ರಧಾನಿ ಆಯ್ಕೆಗೆ ಚುನಾವಣೆ ಹೇಗೆ?

ಪ್ರಧಾನಿ ಆಯ್ಕೆಗೆ ಚುನಾವಣೆ ಹೇಗೆ?

ಪ್ರಧಾನಿ ಸ್ಥಾನಕ್ಕೆ ಆಯ್ಕೆ ಎನ್ನುವುದಕ್ಕಿಂತ ಹೆಚ್ಚಾಗಿ ಇದು ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ. ಬ್ರಿಟನ್‌ನಲ್ಲಿ ಕನ್ಸರ್ವೇಟಿವ್ ಪಕ್ಷದ ಆಡಳಿತವೇ ಇರುವುದು. ಪಕ್ಷದ ನಾಯಕರಾದವರೇ ಪ್ರಧಾನಿ ಆಗುತ್ತಾರೆ. ಕನ್ಸರ್ವೇಟಿವ್ ಪಕ್ಷವನ್ನು ಟೋರಿ ಪಕ್ಷವೆಂದೂ ಕರೆಯಲಾಗುತ್ತದೆ.

ಎರಡು ಹಂತದಲ್ಲಿ ಟೋರಿ ಪಕ್ಷದ ನಾಯಕತ್ವಕ್ಕೆ ಚುನಾವಣೆ ನಡೆಯುತ್ತದೆ. ಮೊದಲ ಹಂತ ಮುಗಿದು ಈಗ ಎರಡನೇ ಹಂತದ ಚುನಾವಣೆ ಇದೆ. ಮೊದಲ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಎಲ್ಲಾ ಸದಸ್ಯರೂ ಸೇರಿ ಇಬ್ಬರನ್ನು ಅಂತಿಮವಾಗಿ ಆಯ್ಕೆ ಮಾಡುತ್ತಾರೆ. ಈ ಚುನಾವಣೆಯಲ್ಲಿ 7 ಸ್ಪರ್ಧಾಳುಗಳ ಪೈಕಿ ಪ್ರತೀ ಸುತ್ತಿನಲ್ಲೂ ಅತಿ ಕಡಿಮೆ ಮತ ಪಡೆದ ಒಬ್ಬೊಬ್ಬರೇ ನಿರ್ಗಮಿಸಿ ಅಂತಿಮವಾಗಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಮಾತ್ರವೇ ಉಳಿದುಕೊಂಡಿದ್ದಾರೆ.

ಕುತೂಹಲವೆಂದರೆ ಈ ಎಲ್ಲಾ ಐದು ಸುತ್ತುಗಳಲ್ಲಿ ರಿಷಿ ಸುನಕ್ ಅವರೇ ನಂಬರ್ ಒನ್ ಸ್ಥಾನ ಪಡೆದಿದ್ದು. ಇವರೇ ಬ್ರಿಟನ್ ಪ್ರಧಾನಿ ಆಗುತ್ತಾರೆ ಎಂದು ಕೆಲವರು ನಂಬಿಬಿಟ್ಟಿದ್ದರು. ಆದರೆ, ಎರಡನೇ ಹಂತದ ಚುನಾವಣೆಯ ಸ್ವರೂಪವೇ ಭಿನ್ನ.

ಎರಡನೇ ಹಂತದಲ್ಲಿ ಹೇಗೆ?

ಎರಡನೇ ಹಂತದಲ್ಲಿ ಹೇಗೆ?

ಮೊದಲ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರು ಮತ ಚಲಾಯಿಸಿದ್ದರು. ಎರಡನೇ ಹಂತದಲ್ಲಿ ಪಕ್ಷದ ಸರ್ವಸದಸ್ಯರೂ ಮತ ಚಲಾಯಿಸುತ್ತಾರೆ.

ಇಲ್ಲಿ ಇಂತಿಷ್ಟು ಶುಲ್ಕ ಪಾವತಿಸಿದರೆ ಯಾರು ಬೇಕಾದರೂ ಟೋರಿ ಪಕ್ಷದ ಸದಸ್ಯರಾಗಬಹುದು. 2 ಲಕ್ಷ ಮಂದಿ ಈ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಹೀಗಾಗಿ, ಕನ್ಸರ್ವೇಟಿವ್ ಪಕ್ಷದ ಸದಸ್ಯರಲ್ಲಿ ಜನಸಾಮಾನ್ಯರೂ ಹೆಚ್ಚೇ ಇದ್ದಾರೆ. ಸಮೀಕ್ಷೆಗಳ ಪ್ರಕಾರ, ಪಕ್ಷದ ಸಾಮಾನ್ಯ ಸದಸ್ಯರಲ್ಲಿ ರಿಷಿ ಸುನಕ್ ಪರ ಒಲವು ಹೊಂದಿರುವವರು ಕಡಿಮೆಯೇ.

ಮೊದಲು ಚರ್ಚೆ, ನಂತರ ಮತ

ಮೊದಲು ಚರ್ಚೆ, ನಂತರ ಮತ

ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲೇ ಬ್ರಿಟನ್‌ನಲ್ಲೂ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸ್ಪರ್ಧಿಗಳ ಮಧ್ಯೆ ಚರ್ಚಾ ವೇದಿಕೆ ಏರ್ಪಡಿಸಲಾಗುತ್ತದೆ. ಅಲ್ಲಿ ವಿವಿಧ ವಿಚಾರಗಳ ಬಗ್ಗೆ ಇವರು ತಮ್ಮ ಅಭಿಪ್ರಾಯ ಮಂಡನೆ ಮಾಡಬೇಕು, ವಾದ ಪ್ರತಿವಾದಗಳು ಆಗಬೇಕು.

ಈಗ ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕತ್ವವನ್ನು ಸೆಪ್ಟೆಂಬರ್ 5ರಂದು ಘೋಷಣೆ ಮಾಡುವ ಸಾಧ್ಯತೆ ಇದೆ. ಅಷ್ಟರೊಳಗೆ ಬ್ರಿಟನ್‌ನ 12 ಕಡೆ ಈ ರೀತಿಯ ಚರ್ಚಾ ಕಾರ್ಯಕ್ರಮಗಳಲ್ಲಿ ಇವರಿಬ್ಬರು ಪಾಲ್ಗೊಳ್ಳಬೇಕಾಗುತ್ತದೆ. ಈಗ ಉತ್ತರ ಇಂಗ್ಲೆಂಡ್‌ನ ಲೀಡ್ಸ್ ನಗರದಲ್ಲಿ ಮೊದಲ ಕಾರ್ಯಕ್ರಮ ನಡೆದಿದೆ. ಚರ್ಚಾ ಕಾರ್ಯಕ್ರಮಗಳ ಬಳಿಕ ಪಕ್ಷದ ಸದಸ್ಯರು ಮತ ಚಲಾಯಿಸಿ ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ.

ರಿಷಿ ಸುನಕ್‌ಗೆ ಯಾಕೆ ವಿರೋಧ?

ರಿಷಿ ಸುನಕ್‌ಗೆ ಯಾಕೆ ವಿರೋಧ?

ರಿಷಿ ಸುನಕ್ ಬೋರಿಸ್ ಜಾನ್ಸನ್ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದವರು. ಬಹಳ ಕ್ಷಿಪ್ರಗತಿಯಲ್ಲಿ ಆ ಸ್ಥಾನಕ್ಕೆ ಏರಿದವರು. ಕೋವಿಡ್ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿದ್ದರು. ಆದರೆ, ತೆರಿಗೆ ಏರಿಕೆಯ ಬರೆ ಹಾಕುವ ಮೂಲಕ ಅವರು ತಮ್ಮ ಜನಪ್ರಿಯತೆಯನ್ನು ತಾವೇ ಕುಗ್ಗಿಸಿಕೊಂಡಿದ್ದರು. ತೆರಿಗೆ ಏರಿಕೆಯ ಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಂದು ಖುದ್ದು ಪ್ರಧಾನಿ ಹೇಳಿದರೂ ಕೇಳದೇ ತೆರಿಗೆಯನ್ನು ಹೆಚ್ಚಿಸಿದ್ದರು ರಿಷಿ ಸುನಕ್.

ಅಷ್ಟೇ ಅಲ್ಲ, ಬೋರಿಸ್ ಜಾನ್ಸನ್ ಸರಕಾರದಲ್ಲಿ ರಾಜೀನಾಮೆ ನೀಡಿದ ಮೊದಲಿಗರಲ್ಲಿ ರಿಷಿನ್ ಸುನಕ್ ಒಬ್ಬರು. ಬೋರಿಸ್ ಜಾನ್ಸನ್ ಬೆನ್ನಿಗೆ ಚೂರಿ ಹಾಕಿದವರು ಎಂಬ ಕಳಂಕ ರಿಷಿಗೆ ಅಂಟಿಕೊಂಡಿದೆ. ಕನ್ಸರ್ವೇಟಿವ್ ಪಕ್ಷದ ಸದಸ್ಯರಲ್ಲಿ ರಿಷಿ ವಿರುದ್ಧ ಭಾವನೆ ಗಟ್ಟಿಯಾಗಿದೆ ಎಂದು ಸಮೀಕ್ಷೆಗಳೂ ಹೇಳುತ್ತವೆ.

Recommended Video

  ಕ್ಯಾಪ್ಟನ್ ಕೂಲ್ ದಾಖಲೆ ಮುರಿದ ಕೌರ್ | OneIndia Kannada
  ತೆರಿಗೆ ಇಳಿಸುತ್ತೇನೆಂದ ಲಿಜ್

  ತೆರಿಗೆ ಇಳಿಸುತ್ತೇನೆಂದ ಲಿಜ್

  ರಿಷಿ ಸುನಕ್ ತೆರಿಗೆ ಏರಿಸಿ ಹೇಗೆ ಜನಪ್ರಿಯತೆ ಕಳೆದುಕೊಂಡರು ಎಂಬುದರ ಅರಿವು ಪ್ರತಿಸ್ಪರ್ಧಿ ಲಿಜ್ ಟ್ರುಸ್ ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ತಾನು ಪ್ರಧಾನಿಯಾದರೆ ತೆರಿಗೆಯ ಹೊರೆ ಇಳಿಸುವುದಾಗಿ ಅವರು ಬಾರಿ ಬಾರಿ ಹೇಳುತ್ತಲೇ ಬಂದಿದ್ದಾರೆ. ಲೀಡ್ಸ್ ನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲೂ ಅವರು ಇದೇ ವಾಗ್ದಾನ ನೀಡಿದರು.

  ಇದಕ್ಕೆ ಪ್ರತಿವಾದ ಮಂಡಿಸಿದ ರಿಷಿ ಸುನಕ್, ತೆರಿಗೆ ಕಡಿತದಿಂದ ಸಮಸ್ಯೆ ಪರಿಹಾರವಾಗಲ್ಲ ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದರು.

  "ಸಮಸ್ಯೆಗಳು ಇರುವಾಗ ಹಣದುಬ್ಬರ ಮತ್ತು ಸಾಲದ ಬಗ್ಗೆ ಮೊದಲು ನಿಗಾ ವಹಿಸಬೇಕು. ಕಾರ್ಪೊರೇಟ್ ತೆರಿಗೆಯನ್ನು ಕಡಿಮೆಗೊಳಿಸಿ ಉದ್ಯಮಕ್ಕೆ ಪುಷ್ಟಿ ಕೊಡಲು ಈ ಹಿಂದೆಯೇ ಸರಕಾರ ಯತ್ನಿಸಿ ವಿಫಲವಾಗಿತ್ತು. ಈಗ ತೆರಿಗೆ ಕಡಿತದಿಂದ ಏನೂ ಪ್ರಯೋಜನ ಇಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು" ಎಂದು ರಿಷಿ ಸುನಕ್ ಅಭಿಪ್ರಾಯಪಟ್ಟರು.

  ಆದರೆ, ಸಾಮಾನ್ಯ ಜನರಿಗೆ ಆರ್ಥಿಕ ಶಿಸ್ತಿಗಿಂತ ಹೆಚ್ಚಾಗಿ ಸಣ್ಣ ಪುಟ್ಟ ಉಡುಗೊರೆಗಳೇ ಮೌಲ್ಯಯುತ ಎನಿಸಬಹುದು. ಮೇಲಾಗಿ ರಿಷಿ ಸುನಕ್ ತೆರಿಗೆ ಹೆಚ್ಚಿಸುತ್ತಾರೆಂಬ ಸಿಟ್ಟಿನ ಜೊತೆಗೆ ಬೋರಿಸ್ ಜಾನ್ಸನ್‌ರನ್ನು ಪ್ರಧಾನಿ ಪಟ್ಟದಿಂದ ಕೆಳಗಿಸಿಳಿಸಿದ ವಿಲನ್ ರೀತಿಯಲ್ಲಿ ನೋಡುತ್ತಾರೆ.

  ಯಾಕೆಂದರೆ ಬೋರಿಸ್ ಜಾನ್ಸನ್ ಹಲವು ಹಗರಣಗಳ ನಡುವೆಯೂ ಬ್ರಿಟನ್‌ನಲ್ಲಿ ಬಹಳಷ್ಟು ಜನಪ್ರಿಯತೆ ಹೊಂದಿದ್ದವರು. ಅವರ ಸಂಪುಟ ಸದಸ್ಯರೇ ದ್ರೋಹ ಬಗೆದರೆಂದು ರಿಷಿ ಸುನಕ್ ಹಾಗೂ ಇತರ ಹಲವು ನಾಯಕರ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನ ಇದೆ ಎಂದು ಹೇಳಲಾಗುತ್ತದೆ.

  (ಒನ್ಇಂಡಿಯಾ ಸುದ್ದಿ)

  English summary
  Liz Truss may have easy win over Rishi Sunak in the elections for Conservative party leadership, according to the survey on party members.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X