ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕ್ಕೇ ಆವರಿಸಬಹುದು 'ಕೆಂಟ್' ಕೋವಿಡ್ ವೈರಸ್: ವಿಜ್ಞಾನಿಯ ಎಚ್ಚರಿಕೆ

|
Google Oneindia Kannada News

ಲಂಡನ್, ಫೆಬ್ರವರಿ 11: ಬ್ರಿಟನ್‌ನ ಕೆಂಟ್ ಭಾಗದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ರೂಪಾಂತರ ತಳಿ ಈಗಾಗಲೇ ಬ್ರಿಟನ್‌ಅನ್ನು ಆವರಿಸಿದ್ದು, ಇಡೀ ಜಗತ್ತಿಗೆ ವ್ಯಾಪಿಸಲಿದೆ. ಇದರ ವಿರುದ್ಧದ ಹೋರಾಟ ಕನಿಷ್ಠ ಒಂದು ದಶಕದವರೆಗೂ ನಡೆಯಲಿದೆ ಎಂದು ಬ್ರಿಟನ್‌ನ ಜೆನೆಟಿಕ್ ಸರ್ವೈವಲೆನ್ಸ್ ಕಾರ್ಯಕ್ರಮದ ಮುಖ್ಯಸ್ಥರು ಹೇಳಿದ್ದಾರೆ.

ಕೋವಿಡ್-19ರ ವಿರುದ್ಧ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆಗಳ ತನ್ನ ಮೇಲೆ ಪ್ರಭಾವಬೀರದಷ್ಟು ಈ ರೂಪಾಂತರಿ ವೈರಸ್ ಪ್ರಬಲವಾಗಿವೆ. ಇದು ಈಗಾಗಲೇ ದೇಶವನ್ನು ಗುಡಿಸಿ ಹಾಕಿದೆ. ಮುಂದೆ ಎಲ್ಲ ಸಂಭಾವ್ಯತೆಗಳಲ್ಲಿಯೂ ಜಗತ್ತನ್ನು ಕೂಡ ಆವರಿಸಲಿದೆ ಎಂದು ಶಾರೋನ್ ಪಿಕಾಕ್ ತಿಳಿಸಿದ್ದಾರೆ.

20 ದೇಶಗಳ ಜನರಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ20 ದೇಶಗಳ ಜನರಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಇದುವರೆಗೂ ಬ್ರಿಟನ್‌ನಲ್ಲಿ ರೂಪಾಂತರಿಗಳ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಾಗಿವೆ. ಆದರೆ ರೂಪಾಂತರವು ಈ ಲಸಿಕೆಗಳ ಶಕ್ತಿಯನ್ನು ಕಡೆಗಣಿಸುವಷ್ಟು ಶಕ್ತಿಶಾಲಿಯಾಗಬಹುದು. ಕಳವಳದ ಸಂಗತಿಯೆಂದರೆ 1.1.7. ರೂಪಾಂತರವು ಕೆಲವು ವಾರಗಳು ಮತ್ತು ತಿಂಗಳಿನಿಂದ ಹರಡುತ್ತಿದ್ದು, ಮತ್ತೆ ರೂಪಾಂತರ ಹೊಂದಲು ಆರಂಭಿಸಿದೆ. ಮತ್ತೊಮ್ಮೆ ಹೊಸ ರೂಪಾಂತರ ಹೊಂದುವುದು ನಾವು ಪ್ರತಿರಕ್ಷಣೆ ಹಾಗೂ ಲಸಿಕೆಯ ಪರಿಣಾಮಕಾರಿತನದ ನಿಟ್ಟಿನಲ್ಲಿ ವೈರಸ್ ಅನ್ನು ನಿಭಾಯಿಸುತ್ತಿರುವ ಸ್ವರೂಪದ ಮೇಲೆ ಪ್ರಭಾವ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Kent Covid Variant Will Likely Sweep The World: UK Genetic Surveillance Chief

'1.1.7. ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ. ಇದು ದೇಶವನ್ನು ಈಗಾಗಲೇ ಆವರಿಸಿದೆ. ಈಗ ಹೊಸ ರೂಪಾಂತರ ಪಡೆದುಕೊಳ್ಳಲು ಆರಂಭಿಸಿದೆ. ಇದರಿಂದ ಲಸಿಕೆ ಕಾರ್ಯಕ್ರಮಕ್ಕೆ ಬೆದರಿಕೆ ಉಂಟಾಗಬಹುದು. ಈ ರೂಪಾಂತರವು ಒಮ್ಮೆ ಕಾಯಿಲೆಗೆ ಕಾರಣವಾಗುವ ವಿಷಕಾರಿ ಸ್ವರೂಪದಿಂದ ತಾನಾಗಿಯೇ ಹೊರಬಂದರೆ ನಾವು ಅದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಬಹುದು. ಆದರೆ ಭವಿಷ್ಯದತ್ತ ನೋಡಿದರೆ ನಾವು ಇದನ್ನು ಹಲವು ವರ್ಷಗಳ ಕಾಲ ಮಾಡಬೇಕಾಗಬಹುದು. ನನ್ನ ಅಭಿಪ್ರಾಯದ ಬಳಿಕ ಇನ್ನೂ ಹತ್ತು ವರ್ಷ ಈ ಶ್ರಮ ನಮಗೆ ಇರಲಿದೆ' ಎಂದಿದ್ದಾರೆ.

English summary
UK Genetic Surveillance Chief Sharon Peacock said the variant fount first in Kent could sweep the world after swept the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X