ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕಂಪನಿ ಹ್ಯುವೈ ಮೇಲೆ ನಿಷೇಧ ಹೇರಿದ ಯುಕೆ

|
Google Oneindia Kannada News

ಲಂಡನ್, ಜುಲೈ 15: ಬ್ರಿಟನ್ನಿನಲ್ಲಿ 5ಜಿ ಟೆಂಡರ್ ನಿಂದ ಚೀನಾ ಕಂಪನಿ ಹ್ಯುವೈ ಹೊರಗಿಡಲಾಗಿದೆ. ಯುಕೆಯಲ್ಲಿ 5ಜಿ ನೆಟ್ವರ್ಕ್ ಟೆಂಡರ್ ಪ್ರಕ್ರಿಯೆಯಿಂದ ಚೀನಾದ ಹ್ಯುವೈ ಕಂಪನಿಯನ್ನು ನಿಷೇಧಿಸಲು ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ನಿರ್ಧರಿಸಿದ್ದಾರೆ.

ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ ನೀಡಿದ ವರದಿ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ 31, 2020 ನಂತರ ಹ್ಯುವೈ 5ಜಿ ಕಿಟ್ ಖರೀದಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ. ಯುಕೆಯ ಟೆಲಿಕಾಂ ಜಾಲದಿಂದ ಹ್ಯುವೈ ತಂತಿಗಳನ್ನು ಕಟ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಚೀನಾಗೆ ಸಾವಿರಾರು ಕೋಟಿ ರು ನಷ್ಟ, ಭಾರತದಿಂದ 4ಜಿ ಅಸ್ತ್ರ!ಚೀನಾಗೆ ಸಾವಿರಾರು ಕೋಟಿ ರು ನಷ್ಟ, ಭಾರತದಿಂದ 4ಜಿ ಅಸ್ತ್ರ!

ಯುಎಸ್ ಸೆಮಿಕಂಡೆಕ್ಟರ್ ತಂತ್ರಜ್ಞಾನ ಮೇಲೆ ನಿರ್ಮಾಣಗೊಂಡಿರುವ ಉತ್ಪನ್ನಗಳನ್ನು ಬಳಸಲು ಹ್ಯುವೈ ಸಂಸ್ಥೆಗೆ ಅಮೆರಿಕವು ಮೇ ತಿಂಗಳಿನಲ್ಲಿ ನಿರ್ಬಂಧ ಹೇರಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಯುಕೆಯ ಸೈಬರ್ ಸೆಕ್ಯುರಿಟಿ, ಬ್ರಿಟನ್ ನ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡುವುದು ಸರಿಯಲ್ಲ ಎಂದು ವರದಿ ನೀಡಿತ್ತು. ಹೀಗಾಗಿ, ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಯುಕೆ ಕಾರ್ಯದರ್ಶಿ ಒಲಿವರ್ ಡೌಡೆನ್ ಹೇಳಿದ್ದಾರೆ.

Its Official: UK imposes ban on China’s Huawei

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ (ಬಿಎಸ್ ಎನ್ ಎಲ್) 4ಜಿ ಟೆಲಿಕಾಂ ನೆಟ್ವರ್ಕ್ ಅಪ್ ಗ್ರೇಡ್ ಟೆಂಡರ್ ಪ್ರಕ್ರಿಯೆಯಲ್ಲಿ ಚೀನಾ ಕಂಪನಿಗಳಿಗೆ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗಿದೆ. ಇದರಿಂದ ಸುಮಾರು 7000-8000 ಕೋಟಿ ರೂ. ವೆಚ್ಚದ ಪ್ರಕ್ರಿಯೆಯಿಂದ ಹೊರಗುಳಿಯಲಿದೆ.

ಚೀನಾದ ತಂತ್ರಜ್ಞಾನ, ಹ್ಯುವೈ ಬಳಸುತ್ತಿರುವ ವಿಧಾನ ಎಲ್ಲವೂ ಸುರಕ್ಷಿತವಾಗಿಲ್ಲ ಎಂದು ಜಿಸಿಎಚ್ ಕ್ಯೂ ವರದಿ ಮಾಡಿದೆ. ಯುಕೆಯಲ್ಲಿ 5 ಜಿ ನೆಟ್ವರ್ಕ್ ಹೆಣೆಯಲು ಹ್ಯುವೈಗೆ ಟೆಂಡರ್ ನೀಡಲು ಪ್ರಧಾನಿ ಬೋರಿಸ್ ಜಾನ್ಸನ್ ಜನವರಿ ತಿಂಗಳಿನಲ್ಲಿ ನಿರ್ಧರಿಸಿದ್ದರು. ಆದರೆ, ಈಗ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

English summary
the UK Government announced on Tuesday Huawei will be completely removed from the UK’s 5G networks by the end of 2027.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X