ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸೀರಮ್ ಸಂಸ್ಥೆಯ ಹಿನ್ನಡೆ: ಕೋವಿಡ್‌ ಲಸಿಕೆಗಾಗಿ ಹಲವು ರಾಷ್ಟ್ರಗಳ ಪರದಾಟ

|
Google Oneindia Kannada News

ಲಂಡನ್‌, ಜೂ. 09: ವಿಶ್ವದಾದ್ಯಂತ, ಬಾಂಗ್ಲಾದೇಶದಿಂದ ನೇಪಾಳದವರೆಗೆ ಪ್ರಮುಖ ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಕೊರೊನಾ ಲಸಿಕೆ ಕೊರತೆ ಹಿನ್ನೆಲೆ ಕೋವಿಡ್‌ ಲಸಿಕೆ ಅಭಿಯಾನಗಳು ಸ್ಥಗಿತಗೊಂಡಿದೆ. ಇವೆಲ್ಲ ದೇಶಗಳಲ್ಲಿ ಕಾಣಿಸಿಕೊಂಡಿರುವ ಲಸಿಕೆ ಕೊರತೆಯು ಒಂದೇ ಕಂಪನಿಯಿಂದಾಗಿ ಉಂಟಾಗಿದೆ, ಅದುವೇ ದಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಎಂದು ವರದಿಯಾಗಿದೆ.

ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾದ ಸೀರಮ್‌ ಕಳೆದ ವರ್ಷ ಕೋವಾಕ್ಸ್‌ ಸರಬರಾಜಿನಲ್ಲಿ ಉನ್ನತ ಪೂರೈಕೆದಾರರು ಎಂಬ ಹೆಸರು ಪಡೆದಿತ್ತು. ಆದರೆ ಈಗ ರಫ್ತು ನಿಷೇಧದಿಂದಾಗಿ ಈಗಾಗಲೇ ಲಸಿಕೆಗಾಗಿ ಬೇಡಿಕೆ ಸಲ್ಲಿಸಿದ್ದ ವಿದೇಶಗಳಿಗೆ ಲಸಿಕೆ ಪೂರೈಸುವಲ್ಲಿ ಭಾರತೀಯ ಕಂಪನಿಯು ಹಿನ್ನಡೆ ಅನುಭವಿಸಿದೆ.

 ಕೋವಿಡ್-19 ಲಸಿಕೆ ಕುರಿತು FAQs, ಡಾ. ವಿಕೆ ಪಾಲ್ ಸಲಹೆಗಳು ಕೋವಿಡ್-19 ಲಸಿಕೆ ಕುರಿತು FAQs, ಡಾ. ವಿಕೆ ಪಾಲ್ ಸಲಹೆಗಳು

ಭಾರತದಲ್ಲಿ ವಿನಾಶಕಾರಿ ಎರಡನೇ ಅಲೆಯ ಮಧ್ಯೆ ಏಪ್ರಿಲ್‌ನಿಂದ ಭಾರತ ಸರ್ಕಾರವು ಕೋವಿಡ್ ಲಸಿಕೆ ರಫ್ತು ನಿಷೇಧಿಸಿದ್ದು ಕಂಪನಿಯು ಯಾವುದೇ ಡೋಸೆಜ್‌ಗಳನ್ನು ವಿದೇಶಕ್ಕೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸೀರಮ್‌ಗೆ ಲಸಿಕೆ ಸರಬರಾಜಿನಸ ಸಮಸ್ಯೆಗಳು ಬಹಳ ಹಿಂದೆಯೇ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.

 ಸುಮಾರು 92 ದೇಶಗಳಿಗೆ ಕೊವಾಕ್ಸ್ ಲಸಿಕೆ ಒದಗಿಸುವ ವಾಗ್ದಾನ

ಸುಮಾರು 92 ದೇಶಗಳಿಗೆ ಕೊವಾಕ್ಸ್ ಲಸಿಕೆ ಒದಗಿಸುವ ವಾಗ್ದಾನ

ದಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ಕೊವಾಕ್ಸ್ ಲಸಿಕೆಯನ್ನು ಸುಮಾರು 92 ದೇಶಗಳಿಗೆ ಕಳುಹಿಸುವುದಾಗಿ ವಾಗ್ದಾನ ಮಾಡಿದೆ. ಇದುವರೆಗೆ ಸೀರಮ್‌ಗೆ ಕನಿಷ್ಠ 200 ಮಿಲಿಯನ್ ಡೋಸ್‌ಗಳ ಬೇಡಿಕೆ ಬಂದಿದ್ದು, ಸಂಸ್ಥೆಯು ಕೇವಲ 30 ಮಿಲಿಯನ್ ಅನ್ನಯ ಮಾತ್ರ ಸರಬರಾಜು ಮಾಡಿದೆ.
ಕೋವಿಡ್ ವಿರುದ್ಧ ಲಸಿಕೆ ನೀಡುವ ಅಭಿವೃದ್ಧಿಶೀಲ ರಾಷ್ಟ್ರಗಳು ಈಗ ಹೇಗೆ ವಿಫಲಗೊಳಿಸಿದೆ ಎಂಬುದಕ್ಕೆ ಸೀರಮ್‌ ಒಂದು ಪ್ರಮುಖ ಉದಾಹರಣೆಯಾಗಿದೆ.

 ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಲಸಿಕೆ ಭರವಸೆ

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಲಸಿಕೆ ಭರವಸೆ

ಕಳೆದ ವರ್ಷ, ಸೀರಮ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆದಾರ್‌ ಪೂನವಾಲ್ಲಾ, 2020 ರ ಅಂತ್ಯದ ವೇಳೆಗೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಅಸ್ಟ್ರಾಜೆನೆಕಾ ಪಿಎಲ್‌ಸಿಯ ಕೊರೊನಾ ಲಸಿಕೆಯನ್ನು ನೀಡುವ ಭರವಸೆ ನೀಡಿದ್ದರು. 400 ಮಿಲಿಯನ್ ಡೋಸ್‌ ಲಸಿಕೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. 2021 ರೊಳಗೆ ಒಂದು ತಿಂಗಳು ಭಾರತದಿಂದ ಯಾವಾಗ ಪರವಾನಗಿ ಪಡೆಯುತ್ತದೆ ಎಂಬ ಬಗ್ಗೆ ಕಂಪನಿಯು ಅನಿಶ್ಚಿತತೆ ಹೊಂದಿದ್ದರಿಂದ ಮತ್ತು ಸಾಕಷ್ಟು ಗೋದಾಮಿನ ಸ್ಥಳವನ್ನು ಹೊಂದಿರದ ಕಾರಣ ಕೇವಲ 70 ಮಿಲಿಯನ್ ಡೋಸ್‌ಗಳನ್ನು ಮಾತ್ರ ಸಂಸ್ಥೆ ಉತ್ಪಾದಿಸಿದೆ ಎಂದು ಹೇಳಿದೆ.

ವಾಷಿಂಗ್ಟನ್‌ನಲ್ಲಿ ಕೋವಿಡ್‌ ಲಸಿಕೆ ಪಡೆದ ವಯಸ್ಕರಿಗೆ ಉಚಿತ ಗಾಂಜಾ!ವಾಷಿಂಗ್ಟನ್‌ನಲ್ಲಿ ಕೋವಿಡ್‌ ಲಸಿಕೆ ಪಡೆದ ವಯಸ್ಕರಿಗೆ ಉಚಿತ ಗಾಂಜಾ!

 ನೇರ ಒಪ್ಪಂದ ಮಾಡಿಕೊಂಡಿದ್ದ ನೇಪಾಳದಲ್ಲಿ ಲಸಿಕೆ ಕೊರತೆ

ನೇರ ಒಪ್ಪಂದ ಮಾಡಿಕೊಂಡಿದ್ದ ನೇಪಾಳದಲ್ಲಿ ಲಸಿಕೆ ಕೊರತೆ

ಹಲವು ರಾಷ್ಟ್ರಗಳು ಸೀರಮ್‌ನೊಂದಿಗೆ ನೇರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ ಹೊಸ ಪೂರೈಕೆದಾರರನ್ನು ಹುಡುಕುವ ಓಟದಲ್ಲಿದೆ. ನೇಪಾಳ ಸರ್ಕಾರವು ಸೀರಮ್‌ನಿಂದ ನೇರವಾಗಿ ಬೇಡಿಕೆ ಸಲ್ಲಿಸಿದ್ದ 2 ಮಿಲಿಯನ್‌ ಡೋಸ್‌ಗಳಲ್ಲಿ ಅರ್ಧದಷ್ಟು ಮಾತ್ರ ಲಭಿಸಿದೆ. ಉಳಿದವು ಮಾರ್ಚ್ ವೇಳೆಗೆ ಬರಬೇಕಿತ್ತು ಎಂದು ಸರ್ಕಾರ ಹೇಳಿದೆ. "ನಾವು ಲಸಿಕೆಗಳ ಕೊರತೆಯೊಂದಿಗೆ ಹೋರಾಡುತ್ತಿದ್ದೇವೆ" ಎಂದು ನೇಪಾಳದ ಆರೋಗ್ಯ ಸಚಿವಾಲಯದ ಕುಟುಂಬ ಕಲ್ಯಾಣ ವಿಭಾಗದ ನಿರ್ದೇಶಕಿ ತಾರಾ ನಾಥ್ ಪೊಖ್ರೆಲ್ ಹೇಳಿದ್ದಾರೆ. ಒಟ್ಟಾರೆಯಾಗಿ, 28 ಮಿಲಿಯನ್ ಜನರ ರಾಷ್ಟ್ರವು ಕೇವಲ 2.38 ಮಿಲಿಯನ್ ಡೋಸ್‌ಗಳನ್ನು ಮಾತ್ರ ಪಡೆದುಕೊಂಡಿದೆ.

ಮೊದಲು ಓದಿ: ಭಾರತದಲ್ಲಿ ಉಚಿತ ಕೊರೊನಾ ಲಸಿಕೆ ತೆಗೆದುಕೊಳ್ಳುವ ಮುನ್ನ ತಿಳಿಯಿರಿಮೊದಲು ಓದಿ: ಭಾರತದಲ್ಲಿ ಉಚಿತ ಕೊರೊನಾ ಲಸಿಕೆ ತೆಗೆದುಕೊಳ್ಳುವ ಮುನ್ನ ತಿಳಿಯಿರಿ

 ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಭಾರತಕ್ಕೆ ಮಾತ್ರ ಉಪಯುಕ್ತ

ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಭಾರತಕ್ಕೆ ಮಾತ್ರ ಉಪಯುಕ್ತ

ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಸೀರಮ್‌ ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ಭಾರತಕ್ಕೆ ಹೆಚ್ಚಿನ ಸಹಾಯವಾಗಲಿದೆ ಎಂದಿರುವ ಲಸಿಕೆ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇಥ್ ಬರ್ಕ್ಲಿ, ಆದರೆ ಅನೇಕ ರಾಷ್ಟ್ರಗಳು ಲಸಿಕೆಗಾಗಿ ಪರದಾಡುತ್ತಿವೆ. ಇತ್ತೀಚಿಗೆ ಸೀರಮ್ ಹೇಳಿದಂತೆ ರಫ್ತು ಪುನರಾರಂಭಗೊಳ್ಳುವ ಸಾಧ್ಯತೆಯಿಲ್ಲ ಎಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
India's serum Institute setback: many countries scourge for the covid vaccine,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X