ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಯುಕೆ ಸಂಸದ ಕೀತ್ 6 ತಿಂಗಳು ಸಂಸತ್ತಿನಿಂದ ಸಸ್ಪೆಂಡ್

|
Google Oneindia Kannada News

ಲಂಡನ್, ಅಕ್ಟೋಬರ್ 29: ಬ್ರಿಟನ್ನಿನ ಹಿರಿಯ ಸಂಸದ, ಲೇಬರ್ ಪಕ್ಷದ ಭಾರತೀಯ ಮೂಲದ ಕೀತ್ ವಾಜ್ ಅವರನ್ನು 6 ತಿಂಗಳ ಅವಧಿಗೆ ಸಂಸತ್ತಿನಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಾನೂನು ಉಲ್ಲಂಘನೆ ಆರೋಪದ ಮೇಲೆ ಹೌಸ್ ಆಫ್ ಕಾಮನ್ಸ್ ಗುಣಮಟ್ಟದ ಬಗ್ಗೆ ಎಚ್ಚರಿಸುವ ವಾಚ್ ಡಾಗ್ ಸಮಿತಿ ನೀಡಿದ ಶಿಫಾರಸ್ಸಿನ ಅನ್ವಯ ಕ್ರಮ ಜರುಗಿಸಲಾಗಿದೆ.

ಗೋವಾ ಮೂಲದ ಕೀತ್ ಅವರು ಲೀಸ್ಟೆಸ್ಟರ್ ಪೂರ್ವ ಕ್ಷೇತ್ರದ ಸಂಸದರಾಗಿದ್ದು, 2016ರಲ್ಲಿ ಪುರುಷ ವಿಟರ ಜೊತೆ ಸಂಪರ್ಕಹೊಂದಿದ್ದ ಹಗರಣದಲ್ಲಿ ಸಿಲುಕಿ ಮಾಧ್ಯಮಗಳ ಸುದ್ದಿಗೆ ಆಹಾರವಾಗಿದ್ದರು. ಆಗ ಬಹಿರಂಗವಾಗಿ ಕ್ಷಮೆಯಾಚಿಸಿ, ಹೌಸ್ ಆಫ್ ಕಾಮನ್ಸ್ ನ ಗೃಹ ವ್ಯವಹಾರ ಸಮಿತಿಗೆ ರಾಜೀನಾಮೆ ನೀಡಿದ್ದರು. ಆದರೆ ಕೀತ್ ವಿರುದ್ಧ ಸಮಿತಿಯೊಂದು ತನಿಖೆ ಮುಂದುವರೆಸಿ, ಇತ್ತೀಚಿಗೆ ವರದಿ ನೀಡಿದೆ.

ಬ್ರೆಕ್ಸಿಟ್ ಗೆ ಜ. 31ರ ತನಕ ಕಾಲಾವಕಾಶ ನೀಡಿದ ಯುರೋಪಿಯನ್ ಒಕ್ಕೂಟಬ್ರೆಕ್ಸಿಟ್ ಗೆ ಜ. 31ರ ತನಕ ಕಾಲಾವಕಾಶ ನೀಡಿದ ಯುರೋಪಿಯನ್ ಒಕ್ಕೂಟ

ವರದಿ ಪ್ರಕಾರ, 62 ವರ್ಷ ವಯಸ್ಸಿನ ಕೀತ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿರುವವರಿಗೆ ಕೊಕೈನ್ ಮಾದಕ ದ್ರವ್ಯ ಪೂರೈಕೆ ಮಾಡಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ ಕೀತ್ ಸಮರ್ಪಕವಾಗಿ ಸ್ಪಷ್ಟನೆ ನೀಡಿಲ್ಲ, ಅರ್ಧಂಬರ್ಧ ಉತ್ತರ ನೀಡಿದ್ದಾರೆ, ಸಾಕ್ಷಿಗಳು ಅವರ ವಿರುದ್ಧವಿದ್ದು, ಸಂಸತ್ತಿನಿಂದ ಅಮಾನತುಗೊಳಿಸಬಹುದಾಗಿದೆ.

Indian-origin MP Keith Vaz faces 6-month suspension in UK

1987ರಿಂದ ಲಿಸ್ಟೆಸ್ಟರ್ ಪೂರ್ವ ಕ್ಷೇತ್ರದ ಸಂಸದರಾಗಿರುವ ವಾಜ್ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಬ್ರೆಕ್ಸಿಟ್ ಒಪ್ಪಂದ ಅವಧಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದು, ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಂಥ ಪರಿಸ್ಥಿತಿಯಿದೆ.

English summary
One of Britain's longest-serving Indian-origin MPs Keith Vaz faces a six-month suspension from Parliament after a House of Commons standards watchdog found he had "disregarded" the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X