• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಪ್ರಿಯಕರ'ನ ವರಿಸಲು ಪತ್ನಿಯ ಕೊಂದ ಪತಿ! ಹಳೆ ಪ್ರಕರಣಕ್ಕೆ ಹೊಸ ತಿರುವು!

|

ಲಂಡನ್, ಡಿಸೆಂಬರ್ 05 : ಲಂಡನ್ನಿನಲ್ಲಿ ಹತ್ಯೆಯಾದ ಭಾರತೀಯ ಮೂಲದ ಜಸ್ಸಿಕಾ ಪಟೇಲ್ (34) ಪ್ರಕರಣ ಹೊಸ ತಿರುವು ಪಡೆದಿದ್ದು, ಪತ್ನಿಯನ್ನು ಸ್ವತಃ ಪತಿ ಮಿತೇಶ್ ಪಟೇಲ್ ಕೊಂದಿದ್ದಾನೆ ಎಂಬುದು ಸಾಬೀತಾಗಿದೆ.

ಈ ವರ್ಷದ ಆರಂಭದಲ್ಲಿ ನಡೆದ ಈ ಪ್ರಕರಣದ ವಿಚಾರಣೆ ಲಂಡನ್ನಿನ ನ್ಯಾಯಾಲಯವೊಂದರಲ್ಲಿ ಇತ್ತೀಚೆಗೆ ನಡೆದಿತ್ತು. ಪ್ರಕರಣದಲ್ಲಿ ಪತಿಯೇ ಅಪರಾಧಿ ಎಂಬುದು ಮಂಗಳವಾರ ದೃಢವಾಗಿದೆ.

ಲಂಡನ್ನಿನಲ್ಲಿ ಭಾರತೀಯ ಮೂಲದ ಗರ್ಭಿಣಿ ಹತ್ಯೆ,ಪವಾಡದಂತೆ ಬದುಕಿದ ಶಿಶು!

ಇನ್ನೂ ಅಚ್ಚರಿಯ ವಿಷಯವೆಂದರೆ ಸಲಿಂಗಕಾಮಿಯಾಗಿದ್ದ ಮಿತೇಶ್ ಪಟೇಲ್ ಆಸ್ಟ್ರೇಲಿಯಾದಲ್ಲಿದ್ದ ತನ್ನ ಸ್ನೇಹಿತ ಡಾ. ಅಮಿತ್ ಪಟೇಲ್ ಎಂಬುವವರನ್ನು ಪ್ರೇಮಿಸುತ್ತಿದ್ದ! ಪತ್ನಿಯನ್ನು ಕೊಂದು ಅಮಿತ್ ಪಟೇಲ್ ಜೊತೆ 'ಸಂಸಾರ' ನಡೆಸುವ ಮಹದಾಸೆ ಮಿತೇಶ್ ನದ್ದಾಗಿತ್ತು.

'ಪ್ರಿನ್ಸ್' ಎಂಬ ಪುರುಷರ ಡೇಟಿಂಗ್ ಆಪ್ ಮುಖಾಂತರ ತನ್ನ 'ಆತ್ಮ ಸಂಗಾತಿ'ಯನ್ನು ಸಂಪರ್ಕಿಸಿದ್ದ ಮಿತೇಶ್ ಪಟೇಲ್, ಬಾಳ ಸಂಗಾತಿಯನ್ನು ಮದುವೆಯಾಗಿ ಆಸ್ಟ್ರೇಲಿಯಾಗೆ ಹೋಗಿ ನೆಲೆಸಲು ನಿರ್ಧರಿಸಿದ್ದ. ತನ್ನ ಆಕಾಂಕ್ಷೆಯನ್ನೂ ಪೂರೈಸಿಕೊಳ್ಳಲು ಆತ ಆರಿಸಿಕೊಂಡ ಮಾರ್ಗ ಮಾತ್ರ ಕೆಟ್ಟದಾಗಿತ್ತು. ಮಿತೇಶ್ ಪಟೇಲ್ ತನ್ನ ಸ್ವಂತ ಹೆಂಡತಿಯನ್ನೇ ಮುಗಿಸಲು ನಿರ್ಧರಿಸಿದ್ದ.

ಇಮೈಲ್ ನಲ್ಲಿ ಸಂಚಿನ ವಿವರ!

ಇಮೈಲ್ ನಲ್ಲಿ ಸಂಚಿನ ವಿವರ!

2015 ರಲ್ಲೇ ಪತ್ನಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಮಿತೇಶ್ ನ ಇಮೈಲ್, ಫೋನ್ ಗಳ ವಿವರಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಆತ ತನ್ನ 'ಪ್ರಿಯಕರ' ಅಮಿತ್ ಜೊತೆ 'Her days are marked' ಎಂದು 2015 ರಲ್ಲೇ ಹೇಳಿರುವುದು ದಾಖಲಾಗಿದೆ!

ಅನುಮಾನ ಹುಟ್ಟಿಸಿದ ಸಂವಹನ

ಜೊತೆಗೆ 'ನಾನು ನನ್ನ ಪತ್ನಿಯನ್ನು ಕೊಲ್ಲಲು ಬಯಸಿದ್ದೇನೆ', 'ಇನ್ಸುಲಿನ್ ಓವರ್ ಡೋಸ್ ಕೊಡಿ' 'ನಾನು ನನ್ನ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದೇನೆ.ನನಗೆ ಯಾರಾದರೂ ಪಾಲುದಾರರು ಬೇಕು..' ಎಂಬಿತ್ಯಾದಿ ಸಂವಹನಗಳು ಆತನ ಫೋನಿನ ಮೂಲಕ ನಡೆದಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದಿದೆ.

ಸಾಯುವ ಕೆಲವೇ ಕ್ಷಣ ಮೊದಲು ತೆಗೆದ 'ಮೀನಾಕ್ಷಿ'ಯ ಕಟ್ಟಕಡೆಯ ಚಿತ್ರ!

ದರೋಡೆಯ ಸನ್ನಿವೇಶ ಸೃಷ್ಟಿಸಿದ್ದ!

ಭಾರತೀಯ ಮೂಲದ ಫಾರ್ಮಾಸಿಸಿಸ್ಟ್ ಆಗಿದ್ದ ಜೆಸ್ಸಿಕಾ ಪಟೇಲ್ ಅವರು ಪತಿಯೊಂದಿಗೆ ಔಷದಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಲಂಡನ್ನಿನ ಮಿಡ್ಲ್ಸ್ ಬೊರಫ್ ನಲ್ಲಿ ವಾಸವಿದ್ದ, ಸಲಿಂಗಕಾಮಿಯಾಗಿದ್ದ ಆಕೆಯ ಪತಿ ಮಿತೇಶ್ ಪಟೇಲ್, ಆಕೆಯನ್ನು ಹೊಡೆದು, ನಂತರ ಸೂಪರ್ ಮಾರ್ಕೆಟ್ ನಿಂದ ತಂದ ಕವರ್ ಒಂದರಿಂದ ಉಸಿರುಗಟ್ಟಿಸಿ ಕೊಂದಿದ್ದ. ನಂತರ ಮನೆಯನ್ನು ಪೂರ್ತಿ ಚಲ್ಲಾಪಿಲ್ಲಿ ಮಾಡಿ, ಹಣ, ಒಡವೆಗಳನ್ನು ಮುಚ್ಚಿಟ್ಟು ದರೋಡೆಯಾಗಿದೆ ಎಂಬಂಥ ದೃಶ್ಯ ಸೃಷ್ಟಿಸಿದ್ದ. ಆದರೆ ಅನುಮಾನಗೊಂದ ಪೊಲೀಸರು ತನಿಖೆ ಮಾಡಿದಾಗ ಆತನೇ ಕೊಲೆಗಾರ ಎಂಬುದು ಬಯಲಾಗಿದೆ.

ಅವಳಿಗಿದ್ದಿದ್ದು ಸಣ್ಣ-ಪುಟ್ಟ ಕನಸು!

"ನಮ್ಮ ಮಗಳಿಗಿದ್ದಿದ್ದು ಸಣ್ಣ ಪುಟ್ಟ ಕನಸುಗಳು. ಆಕೆಗೆ ಪ್ರೀತಿಯೇ ಮುಖ್ಯವಾಗಿತ್ತು. ತನ್ನ ಕುಟುಂಬ ಅಂದ್ರೆ ಜೀವ ಬಿಡುತ್ತಿದ್ದಳು. ಆಕೆ ಬಹಳ ಸಂತೋಷವಾಗಿದ್ದಳು. ಆದರೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ನಂಬಿಸಿದ ಆ ಪುರುಷನೇ ಆಕೆಯ ಬದುಕನ್ನು ಕಿತ್ತುಕೊಂಡ. ಆಕೆಯೆ ಕನಸುಗಳಿಗೆ ಮೋಸ ಮಾಡಿದ. ನಮ್ಮನ್ನು ಆಕೆಯಿಂದ ಮತ್ತು ಆಕೆಯನ್ನು ನಮ್ಮಿಂದ ಕಿತ್ತುಕೊಂಡ" ಎಂದು ಜೆಸ್ಸಿಕಾ ಪಾಲಕರು ಕಣ್ಣೀರಿಟ್ಟಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಸೆಲ್ಫಿ ಹುಚ್ಚಿಗೆ ಬಲಿಯಾದರೇ ಭಾರತದ ದಂಪತಿ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The husband of an Indian-origin woman Jessica Patel has been found guilty of her murder. The couple were staying in United Kingdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more