ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಸಂಸತ್ತಿನಲ್ಲಿ ಕಾಶ್ಮೀರದ ಚರ್ಚೆ: ಬೇಸರ ವ್ಯಕ್ತಪಡಿಸಿದ ಭಾರತ

|
Google Oneindia Kannada News

ಲಂಡನ್, ಜನವರಿ 14:ಬ್ರಿಟನ್‌ ಸಂಸತ್ತಿನಲ್ಲಿ ಕಾಶ್ಮೀರ ಕುರಿತು ಕೆಲವು ಸಂಸದರು ಮಂಡಿಸಿರುವ ಚರ್ಚೆಗೆ ಭಾರತ ಬೇಸರ ವ್ಯಕ್ತಪಡಿಸಿದೆ.

ಬುಧವಾರ ಸಂಜೆ ಹೌಸ್ ಆಫ್ ಕಾಮನ್ಸ್‌ನ ವೆಸ್ಟ್ ಮಿನಿಸ್ಟರ್ ಹಾಲ್‌ನಲ್ಲಿ ಬ್ರಿಟಿಷ್ ಸಂಸದರು ಆಯೋಜಿಸಿದ್ದ ಈ ಚರ್ಚೆಗೆ ಕಾಶ್ಮೀರದ ರಾಜಕೀಯ ಪರಿಸ್ಥಿತಿ ಎಂಬ ಶೀರ್ಷಿಕೆ ಇಡಲಾಗಿದ್ದು, ಈ ಶೀರ್ಷಿಕೆಯೇ ಸಮಸ್ಯಾತ್ಮಕವಾಗಿದೆ ಎಂದು ಲಂಡನ್‌ನಲ್ಲಿರುವ ಭಾರತ ಹೈಕಮಿಷನ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಬ್ರಿಟನ್ & ಯುರೋಪ್ ಭಾಯಿ, ಭಾಯಿ..! ಶ್ರೀಮಂತ ರಾಷ್ಟ್ರಗಳ ಶಾಂತಿ ಮಂತ್ರ..! ಬ್ರಿಟನ್ & ಯುರೋಪ್ ಭಾಯಿ, ಭಾಯಿ..! ಶ್ರೀಮಂತ ರಾಷ್ಟ್ರಗಳ ಶಾಂತಿ ಮಂತ್ರ..!

ಲಂಡನ್‌ನ ಸಂಸತ್ತಿನಲ್ಲಿ ನಡೆದ ಈ ಚರ್ಚೆಯಲ್ಲಿ ಆಧಾರರಹಿತವಾದ ಸುಳ್ಳುಗಳು ಕೇಳಿಬಂದಿದೆ ಎಂದು ಭಾರತ ಆರೋಪಿಸಿದೆ.ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿರುವ ವಾಸ್ತವ ಅಂಶಗಳನ್ನು ಕೈಬಿಟ್ಟು ಸುಳ್ಳು ವಿಚಾರಗಳನ್ನು ಬ್ರಿಟನ್ ಸಂಸದರು ಚರ್ಚೆಯಲ್ಲಿ ಪ್ರತಿಪಾದಿಸಿದ್ದಾರೆ.

India Deplores False Assertions In UK Parliament Kashmir Debate

ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಭಾರತೀಯ ಹೈಕಮಿಷನ್ ಹೇಳಿದೆ.

ಒಟ್ಟಿನಲ್ಲಿ ಬ್ರಿಟನ್ ಸಂಸತ್ತಿನಲ್ಲಿ ಜಮ್ಮು ಮತ್ತು ಕಶ್ಮೀರದ ಕುರಿತು ನಡೆಸಿರುವ ಚರ್ಚೆ ಯಿಂದ ಬೇಸರವಾಗಿದೆ ಎಂದಿದೆ.

English summary
India has expressed its dismay at some of the parliamentarians who participated in a debate on Kashmir in the Houses of Parliament complex in London relying on "false assertions" and unsubstantiated allegations propagated by a "third country" - an apparent reference to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X