ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಪ್ರತಿಭಟನೆ ಕುರಿತು ಯುಕೆ ಸಂಸದರ ಚರ್ಚೆಗೆ ಭಾರತ ತೀವ್ರ ಆಕ್ರೋಶ

|
Google Oneindia Kannada News

ಲಂಡನ್, ಮಾರ್ಚ್ 09: ಭಾರತದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಯುಕೆ ಸಂಸದರು ನಡೆಸಿರುವ ಚರ್ಚೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ವಿವಾದಾತ್ಮಕ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮಧ್ಯೆ ಭಾರತದಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ವಿಷಯ ಕುರಿತು ಬ್ರಿಟಿಷ್ ಸಂಸತ್ ಸದಸ್ಯರ ಗುಂಪಿನಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಏಕಪಕ್ಷೀಯ ಮತ್ತು ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗಿದೆ ಎಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಖಂಡಿಸಿದೆ.

100 ದಿನ ಅಲ್ಲ, 100 ತಿಂಗಳಾದರೂ ರೈತರಿಗೆ ಕಾಂಗ್ರೆಸ್ ಬೆಂಬಲ 100 ದಿನ ಅಲ್ಲ, 100 ತಿಂಗಳಾದರೂ ರೈತರಿಗೆ ಕಾಂಗ್ರೆಸ್ ಬೆಂಬಲ

ಕೃಷಿ ಸುಧಾರಣೆ ಭಾರತದ ಆಂತರಿಕ ವಿಚಾರ ಎಂದು ಪುನರುಚ್ಚರಿಸಿರುವ ಇಂಗ್ಲೆಂಡ್ ಸರ್ಕಾರದ ವಿದೇಶಾಂಗ, ಕಾಮನ್‌ವೆಲ್ತ್‌ ಮತ್ತು ಅಭಿವೃದ್ಧಿ ಇಲಾಖೆ ಸಚಿವ ನಿಗೆಲ್ ನಿಗೆಲ್ ಆಡಮ್ಸ್, ಭಾರತ ಮತ್ತು ಇಂಗ್ಲೆಂಡ್ ನಡುವೆ ಉತ್ತಮ ಸಂಬಂಧವಿದೆ.

ವ್ಯಾಪಾರ, ಹೂಡಿಕೆ, ಆರೋಗ್ಯ, ಸುಸ್ಥಿರತೆ, ಹವಾಮಾನ ವೈಪರಿತ್ಯ, ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಆದ್ಯತೆಯನ್ನು ಹೆಚ್ಚಿಸಲು ಉಭಯ ಸರ್ಕಾರಗಳು ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ಭಾರತದ ರೈತರ ಪ್ರತಿಭಟನೆಯಂತಹ ಸಂದರ್ಭದಲ್ಲಿ ಮುಂದಿನ ತಿಂಗಳು ಪ್ರಧಾನಿ ಬೊರಿಸ್ ಜಾನ್ಸನ್ ಭಾರತಕ್ಕೆ ಭೇಟಿ ನೀಡಲು ಯೋಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಇಳಿಯುತ್ತಿರುವ ರೈತರ ಸಂಖ್ಯೆ; ಹೊಸ ಕಾರ್ಯತಂತ್ರ ರಚನೆಪ್ರತಿಭಟನೆಯಲ್ಲಿ ಇಳಿಯುತ್ತಿರುವ ರೈತರ ಸಂಖ್ಯೆ; ಹೊಸ ಕಾರ್ಯತಂತ್ರ ರಚನೆ

ಉಭಯ ದೇಶಗಳು ಮಾತುಕತೆ ಮೂಲಕ ರೈತರ ಪ್ರತಿಭಟನೆ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸ ಇರುವುದಾಗಿ ಪಶ್ಚಿಮ ಲಂಡನ್ ಈಲಿಂಗ್ ಸೌತಲ್ ಕ್ಷೇತ್ರದ ಸಂಸದ ವಿರೇಂದ್ರ ಶರ್ಮಾ ಹೇಳಿದ್ದಾರೆ.

12 ಕ್ಕೂ ಹೆಚ್ಚಿನ ಬ್ರಿಟಿಷ್ ಸಂಸದರಿಂದ ಚರ್ಚೆ

12 ಕ್ಕೂ ಹೆಚ್ಚಿನ ಬ್ರಿಟಿಷ್ ಸಂಸದರಿಂದ ಚರ್ಚೆ

ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿ ಪ್ರದೇಶಗಳಲ್ಲಿ 100 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರ ವಿರುದ್ಧ ಪೊಲೀಸರ ಬಳಕೆ ಮತ್ತು ಪತ್ರಕರ್ತರನ್ನು ಟಾರ್ಗೆಟ್ ಮಾಡಿರುವುದರ ಹಿನ್ನೆಲೆಯಲ್ಲಿ ಪಕ್ಷ ಬೇಧ ಮರೆತು ಒಂದು ಡಜನ್‌ಗೂ ಹೆಚ್ಚು ಬ್ರಿಟಿಷ್ ಸಂಸದರು ಚರ್ಚೆ ನಡೆಸಿದ್ದಾರೆ.

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕೊರತೆ ಇಲ್ಲ

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕೊರತೆ ಇಲ್ಲ

ಭಾರತದಲ್ಲಿನ ರೈತರ ಪ್ರತಿಭಟನೆ ಸುತ್ತ ನಡೆದ ಘಟನೆಗಳಿಗೆ ಬ್ರಿಟಿಷ್ ಮಾಧ್ಯಮಗಳು ಸೇರಿದಂತೆ ವಿದೇಶಿ ಮಾಧ್ಯಮಗಳು ಖುದ್ದು ಹಾಜರಿದ್ದು, ಸಾಕ್ಷಿಯಾಗಿವೆ. ಆದ್ದರಿಂದ ಭಾರತದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ಕೊರತೆಯ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಸಮತೋಲಿತ ಚರ್ಚೆಯ ಬದಲು, ಸತ್ಯಗಳಿಲ್ಲದ ಸುಳ್ಳು ಪ್ರತಿಪಾದನೆ ಮಾಡಿರುವುದಕ್ಕೆ ವಿಷಾದಿಸುತ್ತೇವೆ ಎಂದು ಭಾರತೀಯ ಮಿಷನ್ ಹೇಳಿದೆ.

ಸಂಸತ್ ವೆಬ್‌ಸೈಟ್‌ನಲ್ಲಿ ಸಹಿ ಸಂಗ್ರಹ

ಸಂಸತ್ ವೆಬ್‌ಸೈಟ್‌ನಲ್ಲಿ ಸಹಿ ಸಂಗ್ರಹ

ಸಂಸತ್ ವೆಬ್ ಸೈಟ್ ನಲ್ಲಿ ಸಲ್ಲಿಸಲಾದ ಇ- ದೂರು 1 ಲಕ್ಷಕ್ಕೂ ಸಹಿಯನ್ನು ಸಂಗ್ರಹಿಸಿದ ನಂತರ ಚರ್ಚೆ ನಡೆದಿದೆ. ಇ- ದೂರಿಗೆ ಸಂಬಂಧಿಸಿದಂತೆ ಲಂಡನ್ ನ ಪೋರ್ಟ್‌ಕಲ್ಲಿಸ್ ಹೌಸ್ ನಲ್ಲಿ ನಡೆದ ಸಂಸದರ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪ್ರತಿಭಟನಾಕಾರರು ಮತ್ತು ಪತ್ರಕರ್ತರಿಗೆ ಸುರಕ್ಷತೆ ಒದಗಿಸುವಂತೆ ಭಾರತ ಸರ್ಕಾರವನ್ನು ಆಗ್ರಹಿಸಲಾಗಿದೆ.

ದಾಖಲೆಗಳ ಅವಶ್ಯಕತೆ ಇದೆ

ದಾಖಲೆಗಳ ಅವಶ್ಯಕತೆ ಇದೆ

ಸೀಮಿತ ಕೋರಂನಲ್ಲಿ ಸಂಸತ್ ಸದಸ್ಯರ ಚಿಕ್ಕ ಗುಂಪೊಂದು ಆಂತರಿಕ ವಿಚಾರದ ಬಗ್ಗೆ ಸಾಮಾನ್ಯವಾಗಿ ಪ್ರತಿಕ್ರಿಯೆಯಿಂದ ದೂರ ಉಳಿಯುತ್ತೇವೆ ಆದಾಗ್ಯೂ, ಯಾರಾದರೂ ಭಾರತದ ಮೇಲಿನ ಪ್ರೀತಿ ಅಥವಾ ದೇಶಿಯ ರಾಜಕೀಯ ಒತ್ತಾಯದಿಂದ ಅಭಿಪ್ರಾಯಗಳನ್ನು ಹೊರಹಾಕಿದಾಗ, ದಾಖಲೆಗಳ ಅವಶ್ಯಕತೆಯಿದೆ ಎಂದು ಮಿಷನ್ ಹೇಳಿದೆ.

English summary
The High Commission of India in London has condemned false assertions in a "distinctly one-sided discussion" among a group of British parliamentarians on Monday on the issue of peaceful protests and press freedoms in India, amidst the ongoing farmers' stir against three new laws on agricultural reforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X