ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ರೂಪಾಂತರ ಹೆಚ್ಚಳ: ಬ್ರಿಟನ್‌ ಪ್ರಧಾನಿ ಕಳವಳ

|
Google Oneindia Kannada News

ಲಂಡನ್, ಜೂ.13: ಕೊರೊನಾವೈರಸ್‌ನ ಡೆಲ್ಟಾ ರೂಪಾಂತರದ ಹೆಚ್ಚುತ್ತಿರುವ ಬಗ್ಗೆ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಶನಿವಾರ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. "ಇಂಗ್ಲೆಂಡ್‌ನಲ್ಲಿ ಕೊನೆಯ ಲಾಲ್‌ಡೌನ್‌ ನಿರ್ಬಂಧಗಳ ಸಡಿಲಿಕೆ ಮಾಡುವುದಕ್ಕೆ ಇನ್ನೂ ವಿಳಂಬ ಮಾಡುವುದು ಒಳಿತು" ಎಂದಿದ್ದಾರೆ.

ಸಾಮಾಜಿಕ ಸಂಪರ್ಕದ ಮಿತಿಗಳನ್ನು ಸಡಿಲಿಕೆ ಮಾಡುವ ಯೋಜಿತ ನಿರ್ಬಂಧಗಳನ್ನು ತೆಗೆದುಹಾಕುವ ಹಂತವು ಜೂನ್ 21 ರಂದು ಈ ಹಿಂದೆ ನಿಗದಿಪಡಿಸಿದಂತೆ ಮುಂದುವರಿಯಬಹುದೇ ಎಂದು ಪಿಎಂ ಜಾನ್ಸನ್ ಸೋಮವಾರ ಪ್ರಕಟಿಸಲಿದ್ದಾರೆ.

47ನೇ ಜಿ7 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ ಮೋದಿ47ನೇ ಜಿ7 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ ಮೋದಿ

ಲಸಿಕೆಗಳ ವೇಗದ ಯಶಸ್ಸು, ಒಳಾಂಗಣ ಕೂಟಗಳ ಮೇಲಿನ ಮಿತಿ ತೆಗೆದುಹಾಕಲು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸೇವೆಗೆ ಅವಕಾಶ ನೀಡುವ ಪರಿಸ್ಥಿತಿಗೆ ತರಬಹುದು ಎಂದು ಸರ್ಕಾರ ಆಶಿಸಿತ್ತು. ಆದರೆ ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ಕೊರೊನಾ ರೂಪಾಂತರದ ಶೀಘ್ರ ಹರಡುವಿಕೆಯು ಈಗ ಬ್ರಿಟನ್‌ನಲ್ಲಿ ಆತಂಕವನ್ನು ಉಂಟು ಮಾಡಿದೆ. ಸರ್ಕಾರವು ನಿರ್ಬಂಧಗಳನ್ನು ತೆಗೆದುಹಾಕವುದು ಒಂದು ತಿಂಗಳು ವಿಳಂಬವಾಗಬಹುದು ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

 Increasing Delta Variant: Britain Prime minister Concern

ನಾಲ್ಕು ವಾರಗಳ ವಿಳಂಬ ಮಾಡಿದರೆ ಜುಲೈ 19 ಕ್ಕೆ ನಿರ್ಬಂಧಗಳು ಕೊನೆಯಾಗಲಿದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಧಿಕಾರಿಗಳು ದತ್ತಾಂಶವನ್ನು ಅಧ್ಯಯನ ಮಾಡುವುದನ್ನು ಮುಂದುವರಿಸುತ್ತಾರೆ ಪಿಎಂ ಜಾನ್ಸನ್ ಹೇಳಿದ್ದರೂ, ಮೇ ತಿಂಗಳ ಕೊನೆಯಲ್ಲಿ ಪರಿಸ್ಥಿತಿ ಹತೋಟಿಗೆ ಬರುವ ಆಶಾವಾದವನ್ನು ಹೊಂದಿದ್ದರು.

ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

Recommended Video

Renukacharya ಅವರು ತಹಶೀಲ್ದಾರ್ ಅವರಿಗೆ ಉತ್ತರ ಕೊಟ್ಟಿದ್ದು ಹೀಗೆ | Oneindia Kannada

"ಭಾರತದಲ್ಲಿ ಮೊದಲು ಪತ್ತೆಯಾದ ರೂಪಾಂತರವು ಹೆಚ್ಚು ಹರಡಬಲ್ಲದು ಎಂಬುದು ಸ್ಪಷ್ಟವಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ಆಸ್ಪತ್ರೆಗೆ ದಾಖಲಾಗುವ ಮಟ್ಟಗಳು ಏರುತ್ತಿವೆ. ಎಷ್ಟು ಪ್ರಮಾಣದಲ್ಲಿ ಹೆಚ್ಚುವರಿ ಮರಣಕ್ಕೆ ಈ ರೂಪಾಂತರ ಕಾರಣವಾಗಲಿದೆ ಎಂದು ನಮಗೆ ನಿಖರವಾಗಿ ತಿಳಿದಿಲ್ಲ. ಆದರೆ ಸ್ಪಷ್ಟವಾಗಿ ಇದು ಗಂಭೀರವಾದ ವಿಚಾರ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Britain Prime minister Concerned over Increasing Delta Variant of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X