ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿಗೇ ಸಿಹಿಸುದ್ದಿ! ಇದೀಗ HIV ಸೋಂಕು ಮಂಗಮಾಯ ಮಾಡೋಕೂ ಸಾಧ್ಯ!

|
Google Oneindia Kannada News

ಲಂಡನ್, ಮಾರ್ಚ್ 05: ಇಡೀ ಜಗತ್ತಿಗೂ ಶಾಪವೆನ್ನಿಸಿದ ಎಚ್ ಐವಿ ಎಂಬ ಮಾರಿಗೂ ವೈದ್ಯರು ಪರಿಣಾಮಕಾರಿ ಚಿಕಿತ್ಸೆ ಹುಡುಕಿದ್ದಾರೆ. ಇಷ್ಟು ಕಾಲ ಎಚ್ ಐವಿ ಸೋಂಕು ನಿಯಂತ್ರಣಕ್ಕೆ, ಮತ್ತು ರೋಗವನ್ನು ಹತೋಟಿಗೆ ತರುವುದಕ್ಕೆ ಚಿಕಿತ್ಸೆಗಳಿದ್ದವಾದರೂ ಎಚ್ ಐವಿ ವೈರಸ್ ಅನ್ನೇ ದೇಹದಿಂದ ಆಚೆ ಹಾಕುವಂಥ ಪರಿಣಾಮಕಾರಿ ಚಿಕಿತ್ಸೆ ಇರಲಿಲ್ಲ. ಆದರೆ ಲಂಡನ್ನಿನಲ್ಲಿ ಎಚ್ ಐವಿ ಪೀಡಿತ ವ್ಯಕ್ತಿಯೊಬ್ಬ ಚಿಕಿತ್ಸೆಯ ನಂತರ ಸೋಂಕಿನಿಂದ ಸಂಪೂರ್ಣ ಹೊರಬಂದಿದ್ದಾರೆ.

ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೋನ್ ಮ್ಯಾರೋ(ಅಸ್ತಿಮಜ್ಜೆ) ಕಸಿ ಚಿಕಿತ್ಸೆಯ ಮೂಲಕ ರೋಗಿಯನ್ನು ಎಚ್ ಐವಿ ಮುಕ್ತಗೊಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ!ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ!

ಹೀಗೆ ಎಚ್ ಐವಿ ಪೀಡಿತನಾಗಿ, ನಂತರ ಅದರಿಂದ ಸಂಪೂರ್ಣ ಹೊರಬಂದ ಎರಡನೇ ವ್ಯಕ್ತಿ ಇವರಾಗಿದ್ದಾರೆ.

HIV patient from London becomes worlds 2nd to be cleared of AIDS virus

ಇದಕ್ಕೂ ಮುನ್ನ 2007 ರಲ್ಲಿ ಅಮೆರಿಕದ ಟೊಮೋಥಿ ಬ್ರೌನ್ ಎಂಬುವವರಿಗೂ ಇದೇ ರೀತಿ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆಯ ನಂತರ ಅವರೂ ಎಚ್ ಐವಿ ಸೋಂಕಿನಿಂದ ಮುಕ್ತಿ ಪಡೆದಿದ್ದರು. ಅವರು ಇಂದಿಗೂ ಆರೋಗ್ಯವಂತರಾಗಿಯೇ ಇದ್ದು, ಯಾವುದೇ ರೀತಿಯ ಎಚ್ ಐವಿ ಸೋಂಕೂ ಅವರಿಗಿಲ್ಲ.

ಒಂದೇ ಸಿರಿಂಜು ಚುಚ್ಚಿ, ಹಲವರಿಗೆ HIV ತಗುಲಿಸಿದ ನಕಲಿ ವೈದ್ಯಒಂದೇ ಸಿರಿಂಜು ಚುಚ್ಚಿ, ಹಲವರಿಗೆ HIV ತಗುಲಿಸಿದ ನಕಲಿ ವೈದ್ಯ

ಜಗತ್ತಿನಲ್ಲಿ ಸುಮಾರು 37 ದಶಲಕ್ಷ ಜನರು ಎಚ್ ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. 1980 ರಿಂದ ಆರಂಭವಾದ ಈ ಸೋಂಕು, ಸುಮಾರು 35 ದಶಲಕ್ಷಕ್ಕೂ ಹೆಚ್ಚು ಜನರನ್ನು ಇದುವರೆಗೂ ಬಲಿ ತೆಗೆದುಕೊಂಡಿದೆ.

ಅಸುರಕ್ಷಿತ ಲೈಂಗಿಕ ಸಂಪರ್ಕ ಅಥವಾ ಎಚ್ ಐವಿ ಸೋಂಕಿತ ವ್ಯಕ್ತಿಗಳ ರಕ್ತದ ಸಂಪರ್ಕದಿಂದ ಆರಂಭವಾಗುವ ಎಚ್ ಐವಿ ಸಂಕು ಒಮ್ಮೆ ದೇಹವನ್ನು ಹೊಕ್ಕರೆ ಅದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದುವರೆಗೂ ಇರಲಿಲ್ಲ. ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣ ಕಡಿಮೆ ಮಾಡುವ ಮೂಲಕ ವ್ಯಕ್ತಿಯ ದೇಹವನ್ನು ರೋಗಗಳ ಗೂಡನ್ನಾಗಿ ಮಾಡುವ ಭಯಾನಕ ಕಾಯಿಲೆ ಇದು.

English summary
An HIV positive man cleared of the AIDS virus after he recieved a bone marrow transplant. He has become the 2nd kown adult worldwide to be cleared of the IDS virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X