ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೀಸೆಸ್ಟರ್‌ನಲ್ಲಿ ಹಿಂದೂ ದೇವಾಲಯ ಧ್ವಂಸ: ಭಾರತದ ಖಂಡನೆ

|
Google Oneindia Kannada News

ಲಂಡನ್‌, ಸೆಪ್ಟೆಂಬರ್‌ 19: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಇಂದು ಯುನೈಟೆಡ್ ಕಿಂಗ್‌ಡಮ್‌ನ ಲೀಸೆಸ್ಟರ್‌ನಲ್ಲಿರುವ ಹಿಂದೂ ದೇವಾಲಯದ ಧ್ವಂಸ ಮಾಡಿರುವ ಕ್ರಮವನ್ನು ಬಲವಾಗಿ ಪ್ರತಿಭಟಿಸಿದೆ.

ನಾವು ಈ ವಿಷಯವನ್ನು ಯುಕೆ ಅಧಿಕಾರಿಗಳೊಂದಿಗೆ ಮಾತನಾಡಿ ಬಲವಾಗಿ ಪ್ರತಿಭಟಿಸಿದ್ದೇವೆ. ಈ ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣದ ಕ್ರಮವನ್ನು ಕೋರಿದ್ದೇವೆ. ಸಂತ್ರಸ್ತ ಜನರಿಗೆ ರಕ್ಷಣೆ ನೀಡುವಂತೆ ನಾವು ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಭಾರತೀಯ ಹೈಕಮಿಷನ್ ಹೇಳಿಕೆ ತಿಳಿಸಿದೆ.

ಲಂಡನ್‌: ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತಲಂಡನ್‌: ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತ

ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಭಾರತೀಯ ಹೈಕಮಿಷನ್ ಕೂಡ ಅಧಿಕಾರಿಗಳನ್ನು ಒತ್ತಾಯಿಸಿದೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಇದುವರೆಗೆ ಹದಿನೈದು ಜನರನ್ನು ಬಂಧಿಸಲಾಗಿದೆ. ಮೆಲ್ಟನ್ ರಸ್ತೆಯಲ್ಲಿರುವ ದೇವಾಲಯದ ಹೊರಗಿರುವ ಧ್ವಜವನ್ನು ಕೆಳಗಿಳಿಸಿರುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಲೀಸೆಸ್ಟರ್ ಪೊಲೀಸರು ತಿಳಿಸಿದ್ದಾರೆ.

Hindu Temple Destruction in Leicester: Indias Condemnation

ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೊಗಳು ಹಿಂದೂ ಗುಂಪುಗಳು ಘಟನೆಯನ್ನು ಪ್ರತಿಭಟಿಸಿ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದವು. ಲೀಸೆಸ್ಟರ್‌ನಲ್ಲಿ ಮುಸ್ಲಿಮರ ಒಡೆತನದ ಆಸ್ತಿಗಳನ್ನು ಧ್ವಂಸಗೊಳಿಸಿದೆ ಎಂದು ಗುಂಪುಗಳು ಇನ್ನೊಂದು ಕಡೆಯಿಂದ ಆರೋಪಿಸಲ್ಪಟ್ಟವು. ಲೀಸೆಸ್ಟರ್ ಪೊಲೀಸರು ಶಾಂತವಾಗಿರಲು ಕರೆ ನೀಡಿದ್ದಾರೆ.

ಆಗಸ್ಟ್ 28 ರಂದು ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯದ ನಂತರ ಅಭಿಮಾನಿಗಳು ಘರ್ಷಣೆ ನಡೆದಿತ್ತು. ನಂತರ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿವಿಧ ವೀಡಿಯೊಗಳು ಮತ್ತು ವರದಿಗಳನ್ನು ಅನುಸರಿಸಿ ಇತ್ತೀಚಿನ ಹಿಂಸಾಚಾರದ ಘಟನೆ ನಡೆದಿವೆ.

ಈ ಬಗೆಯ ಘಟನೆಗಳು ನಮ್ಮ ಸ್ಥಳೀಯ ಸಮುದಾಯಗಳ ಮೇಲೆ ಬೀರುತ್ತಿರುವ ಪರಿಣಾಮವು ಸ್ವೀಕಾರಾರ್ಹವಲ್ಲ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. "ನಾವು ಲೀಸೆಸ್ಟರ್‌ನಲ್ಲಿ ಹಿಂಸಾಚಾರ, ಅಸ್ವಸ್ಥತೆ ಅಥವಾ ಬೆದರಿಕೆಯನ್ನು ಸಹಿಸುವುದಿಲ್ಲ. ನಾವು ಶಾಂತ ಮತ್ತು ಸಂವಾದಕ್ಕೆ ಕರೆ ನೀಡುವುದನ್ನು ಮುಂದುವರಿಸುತ್ತೇವೆ. ನಮ್ಮ ಪೊಲೀಸ್ ಕಾರ್ಯಾಚರಣೆಗಳು ಮತ್ತು ತನಿಖೆಗಳು ತ್ವರಿತ ಪ್ರಮಾಣದಲ್ಲಿ ಮುಂದುವರಿಯುತ್ತವೆ ಎಂದು ಅದು ಹೇಳಿದೆ.

ಘಟನೆ ಬಳಿಕ ವಿಷಯಗಳನ್ನು ನಿಯಂತ್ರಣಕ್ಕೆ ತರಲು ಮೌಂಟೆಡ್ ಪೊಲೀಸ್ ಘಟಕ ಸೇರಿದಂತೆ ಹಲವಾರು ನೆರೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸ್ಟಾಪ್- ಅಂಡ್- ಸರ್ಚ್ ಅಧಿಕಾರಗಳನ್ನು ಸಹ ಶಾಂತಿ ಕಾಪಾಡುವಂತೆ ನಿಯೋಜಿಸಲಾಗಿದೆ. ನಗರದ ನಾರ್ತ್ ಎವಿಂಗ್‌ಟನ್ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಯುವಕರ ಗುಂಪುಗಳು ಸೇರುತ್ತಿದ್ದರು. ಅಧಿಕಾರಿಗಳು ಅವರೊಂದಿಗೆ ಮಾತನಾಡಿದರು. ಸಮುದಾಯಗಳಿಗೆ ಹಾನಿ ಮತ್ತು ತೊಂದರೆಯನ್ನು ಕಡಿಮೆ ಮಾಡಲು ತಾತ್ಕಾಲಿಕ ಪೊಲೀಸ್ ಸರ್ಪಗಾವಲು ಹಾಕುವುದು ಸೇರಿದಂತೆ ಕ್ರಮಗಳನ್ನು ತೆಗೆದುಕೊಂಡರು ಎಂದು ಪೊಲೀಸರು ಹೇಳಿದರು.

English summary
The Indian High Commission in London today strongly protested the demolition of a Hindu temple in Leicester, United Kingdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X