• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಂಡನ್ನಿನಲ್ಲಿ 'ಸಿಕ್ಕಿಬಿದ್ದ' ಡೈಮಂಡ್ ವ್ಯಾಪಾರಿ ನೀರವ್ ಮೋದಿ!

|

ಲಂಡನ್, ಮಾರ್ಚ್ 09 : ಭಾರತದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಡೈಮಂಡ್ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ಪತ್ತೆಯಾಗಿದ್ದು, ಬಹುಕೋಟಿ ಬಾಳುವ ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ.

ಭಾರತದ ಬ್ಯಾಂಕ್ ಗಳಿಗೆ 13 ಸಾವಿರ ಕೋಟಿ ರುಪಾಯಿಯಷ್ಟು ವಂಚನೆ ಮಾಡಿ ಪರಾರಿಯಾಗಿದ್ದ ನೀರವ್ ಮೋದಿಯನ್ನು ದಿ ಟೆಲಿಗ್ರಾಫ್ ಪತ್ರಿಕೆ ಪತ್ತೆ ಹಚ್ಚಿದೆ. ಅಲ್ಲಿ ಆತ ಮತ್ತೊಂದು ಡೈಮಂಡ್ ವ್ಯಾಪಾರ ಶುರು ಮಾಡಿದ್ದಾನೆ ಎಂದು ತಿಳಿದುಬಂದಿದೆ.

ನೀರವ್ ಮೋದಿಗೆ ಸೇರಿದ 100 ಕೋಟಿ ಬಂಗಲೆ ನೆಲಸಮ!

ಪಿಂಕ್ ಅಂಗಿ ತೊಟ್ಟು, ಕಪ್ಪು ಜಾಕೆಟ್ ಧರಿಸಿ, ಗಡ್ಡ ಬಿಟ್ಟು ಆತ ಲಂಡನ್ ನ ಬೀದಿಯಲ್ಲಿ ನಡೆದುಹೋಗುತ್ತಿದ್ದಾಗ ದಿ ಟೆಲಿಗ್ರಾಫ್ ಪತ್ರಿಕೆಯ ವರದಿಗಾರನಿಗೆ ಆ ಸಿಕ್ಕಿಬಿದ್ದಿದ್ದಾನೆ. ವರದಿಗಾರ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡದೆ ಅಲ್ಲಿಂದ ಕಾಲುಕಿತ್ತಿದ್ದಾನೆ.

ಭಾರತದಲ್ಲಿ ಅಕ್ರಮ ಅವ್ಯವಹಾರ ನಡೆಸಿ ದೇಶಭ್ರಷ್ಟನಾಗಿದ್ದರೂ, ಲಂಡನ್ ನಲ್ಲಿ ಆತ 'ಕಾನೂನುಬದ್ಧ'ವಾಗಿಯೇ ಮತ್ತೆ ವಜ್ರದ ವ್ಯಾಪಾರಕ್ಕೆ ಕೈ ಹಾಕಿದ್ದಾನೆ. ಮಹಾರಾಷ್ಟ್ರದ ರಾಯಗಢದಲ್ಲಿ 100 ಕೋಟಿ ರುಪಾಯಿ ಬೆಲೆಬಾಳುವ ಆತನ ಮನೆಯನ್ನು ನೆಲಸಮಗೊಳಿಸಲಾಗಿದೆ.

ಎಲ್ಲ ಪ್ರಶ್ನೆಗಳಿಗೂ ಉತ್ತರ ನೋ ಕಾಮೆಂಟ್ಸ್

ದಿ ಟೆಲಿಗ್ರಾಫ್ ಪತ್ರಿಕೆ ಶನಿವಾರ ಈ ಕುರಿತು ಒಂದು ವರದಿ ಪ್ರಕಟಿಸಿದ್ದು, ಅದರಲ್ಲಿ ಆತನ ವಿಡಿಯೋವನ್ನು ಕೂಡ ಹಾಕಿದೆ. ನಿಮ್ಮನ್ನು ಗಡಿಪಾರಿಗೆ ಭಾರತ ಅರ್ಜಿ ಹಾಕಿದೆ, ನೀವು ಜನರ ಹಣವನ್ನು ಲೂಟಿ ಮಾಡಿದ್ದೀರಿ, ನಿಮ್ಮನ್ನು ಜನ ಕೇಳುತ್ತಿದ್ದಾರೆ, ನಿಮ್ಮ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿದೆ, ನೀವು ರಾಜಕೀಯ ಆಶ್ರಯ ನೀಡಬೇಕೆಂದು ಅರ್ಜಿ ಹಾಕಿದ್ದೀರಿ, ನೀವು ಲಂಡನ್ನಿನಲ್ಲಿ ಎಲ್ಲಿ ವಾಸಿಸುತ್ತಿದ್ದೀರಿ, ಇನ್ನೆಷ್ಟು ದಿನ ವಾಸಿಸುತ್ತೀರಿ, ನೀವಿನ್ನೂ ಡೈಮಂಡ್ ವ್ಯಾಪಾರ ಮಾಡುತ್ತಿದ್ದೀರಾ.... ಮುಂತಾದ ಪ್ರಶ್ನೆಗಳಿಗೆ ಮೀಸೆಯನ್ನು ಹುರಿ ಮಾಡಿಕೊಂಡಿರುವ 48 ವರ್ಷದ ನೀರವ್ ಮೋದಿಯದು ಒಂದು ಉತ್ತರ 'ನೋ ಕಾಮೆಂಟ್ಸ್'!

8 ಮಿಲಿಯನ್ ಪೌಂಡ್ ಮನೆಯಲ್ಲಿ ವಾಸ

8 ಮಿಲಿಯನ್ ಪೌಂಡ್ ಮನೆಯಲ್ಲಿ ವಾಸ

ಇಷ್ಟಕ್ಕೇ ಬಿಡದ ದಿ ಟೆಲಿಗ್ರಾಫ್ ಪತ್ರಿಕೆ ಆತನ ಬೆನ್ನತ್ತಿದ್ದು, ಸೆಂಟರ್ ಪಾಯಿಂಟ್ ಆಫ್ ಟಾಟೆನ್‌ಹ್ಯಾಮ್ ಕೋರ್ಟ್ ರೋಡ್ ಎಂಬಲ್ಲಿ 8 ಮಿಲಿಯನ್ ಪೌಂಡ್ ಬೆಲೆಬಾಳುವ ಅಪಾರ್ಟ್ಮೆಂಟ್ ನಲ್ಲಿ ಐಷಾರಾಮಿ ಜೀವನ ಕಳೆಯುತ್ತಿದ್ದಾನೆ ನೀರವ್ ಮೋದಿ. ಒಂದು ಅಂದಾಜಿನ ಪ್ರಕಾರ ಅಲ್ಲಿ ಪ್ರತಿ ತಿಂಗಳ ಮನೆ ಬಾಡಿಗೆಯೇ 17 ಸಾವಿರ ಪೌಂಡ್ಸ್. ಆತ ತನ್ನ ಅಪಾರ್ಟ್ಮೆಂಟಿನಿಂದ ಕೂಗಳತೆ ದೂರದಲ್ಲಿ ಹೊರ ವಜ್ರದ ವ್ಯಾಪಾರ ಆರಂಭಿಸಿದ್ದಾನೆ ಎಂದು ಪತ್ರಿಕೆ ಹೇಳಿದೆ. ಆದರೆ, ಬೀದಿಯಲ್ಲಿ ಸಿಕ್ಕಾಗ ವಜ್ರದ ವ್ಯಾಪಾರ ನಡೆಸುತ್ತಿದ್ದರ ಬಗ್ಗೆ ನೋ ಕಾಮೆಂಟ್ಸ್ ಅಂತ ಮಾತ್ರ ಹೇಳಿದ್ದ.

ಮಲ್ಯ, ನೀರವ್ ಮೋದಿ ಪರಾರಿಗೆ ಅಲೋಕ್ ವರ್ಮಾ ನೆರವು?

ಲಂಡನ್ನಿನಲ್ಲಿ ಬಿಂದಾಸ್ ಜೀವನ

ಲಂಡನ್ನಿನಲ್ಲಿ ಬಿಂದಾಸ್ ಜೀವನ

ಭಾರತದಲ್ಲಿ ಆತನ ವಿರುದ್ಧ ಹಾಕಲಾಗಿರುವ ಕೇಸುಗಳು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರೂ ತಲೆಕೆಡಿಸಿಕೊಳ್ಳದ ನೀರವ್, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸುಖದ ಲೋಲುಪತೆಯಲ್ಲಿ ತೇಲಾಡುವಂಥ ಜೀವನ ನಡೆಸುತ್ತಿದ್ದಾನೆ. ಇಲ್ಲಿ ಭಾರತದ ಅಧಿಕಾರಿಗಳು ಆತನ ಹುಡುಕಾಟದಲ್ಲಿ ತೊಡಗಿದ್ದರೆ, ಅಲ್ಲಿ ಯುಕೆಯಲ್ಲಿ ಆತ ನ್ಯಾಷನಲ್ ಇನ್ಶೂರನ್ಸ್ ನಂಬರ್ ಕೂಡ ಪಡೆದಿದ್ದು, ಆನ್ ಲೈನ್ ನಲ್ಲಿ ಬ್ಯಾಂಕ್ ಖಾತೆಗಳನ್ನು ಬಿಂದಾಸ್ ಆಗಿ ನಿಭಾಯಿಸುತ್ತಿದ್ದಾನೆ. ಆತ ವಿದೇಶಿಯರಿಗೆ ಸಲಹೆ ನೀಡುವ ವೆಲ್ತ್ ಮ್ಯಾನೇಜ್ಮೆಂಟ್ ಕಂಪನಿಯೊಂದಿಗೆ ಕೂಡ ಸಂಪರ್ಕದಲ್ಲಿದ್ದಾನೆ ಎಂದು ದಿ ಟೆಲಿಗ್ರಾಫ್ ಪತ್ರಿಕೆ ಹೇಳಿದೆ.

ವ್ಯಾಪಾರ ಮಾಡಲು ಹೇಗೆ ಬಿಟ್ಟಿತು ಯುಕೆ?

ವ್ಯಾಪಾರ ಮಾಡಲು ಹೇಗೆ ಬಿಟ್ಟಿತು ಯುಕೆ?

ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ನೀಡಲಾಗಿದ್ದರೂ ಯುಕೆ ಅಧಿಕಾರಿಗಳೇಕೆ ಅದನ್ನು ನಿರ್ಲಕ್ಷಿಸಿದ್ದಾರೆ ಮತ್ತು ಆತನಿಗೆ ಆನ್ ಲೈನ್ ನಲ್ಲಿ ಬ್ಯಾಂಕ್ ವ್ಯವಹಾರ ಮಾಡಲು ನ್ಯಾಷನಲ್ ಇನ್ಶೂರನ್ಸ್ ನಂಬರ್ ಹೇಗೆ ನೀಡಿದ್ದಾರೆ ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ. ಯುನೈಟೆಡ್ ಕಿಂಗಡಂನಲ್ಲಿ ಕಾನೂನುಬದ್ಧವಾಗಿ ವ್ಯವಹಾರ ಮಾಡುವವರಿಗೆ ಮಾತ್ರ ನ್ಯಾಷನಲ್ ಇನ್ಶೂರನ್ಸ್ ನಂಬರ್ ನೀಡಲಾಗುತ್ತದೆ. ಒಂದು ಮಾಹಿತಿಯ ಪ್ರಕಾರ, ಆತ ತನ್ನ ಗುರುತು ಸಿಗಬಾರದೆಂದು ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಿಸಿಕೊಂಡಿದ್ದಾನೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಗಡಿಪಾರು ಮಾಡಲು ಭಾರತದ ಅರ್ಜಿ

ಗಡಿಪಾರು ಮಾಡಲು ಭಾರತದ ಅರ್ಜಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ತನ್ನ ಕಂಪನಿಯ ಮೂಲಕ 6,498 ಕೋಟಿ ರುಪಾಯಿ ಪಂಗನಾಮ ಹಾಕಿದ್ದಕ್ಕಾಗಿ 2018ರ ಫಬ್ರವರಿಯಲ್ಲಿಯೇ ಆತನ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ ಆತ ಅಷ್ಟರಲ್ಲಾಗಲೇ ಭಾರತದಿಂದ ಪರಾರಿಯಾಗಿದ್ದ. ಅದೇ ತಿಂಗಳು ಆತನ ಪಾಸ್ಪೋರ್ಟನ್ನು ಮುಟ್ಟುಗೋಲು ಮಾಡಿಕೊಳ್ಳಲಾಗಿದೆ. ನೀರವ್ ಸೋದರ ಸಂಬಂಧಿ ಮೆಹುಲ್ ಚೋಕ್ಸಿ ಕೂಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಮೋಸ ಮಾಡಿ ದೇಶಭ್ರಷ್ಟನಾಗಿದ್ದಾನೆ. ನೀರವ್ ನನ್ನು ಗಡಿಪಾರು ಮಾಡಬೇಕೆಂದು ಭಾರತ ಸರಕಾರ ಅರ್ಜಿ ಹಾಕಿದೆ. ಆದರೆ ಅದನ್ನು ಲಂಡನ್ ಕೋರ್ಟ್ ಗೆ ಇನ್ನೂ ಸಲ್ಲಿಸಲಾಗಿಲ್ಲ.

ಭಾರತದಲ್ಲಿ ಸುರಕ್ಷತೆಯಿಲ್ಲ, ನಾನು ಬರಲಾರೆ: ನೀರವ್ ಮೋದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fugitive diamond merchant Nirav Modi has been tracked down in London by The Telegraph reporter. Though the most wanted person, who has been duped Punjab National Bank and other banks of thousands of crores, he has been given National Insurance Number to operate online by UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more