ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಾಜ್ ಷರೀಫ್ ವೀಸಾ ಅವಧಿ ವಿಸ್ತರಣೆ ಅರ್ಜಿ ತಿರಸ್ಕರಿಸಿದ ಬ್ರಿಟನ್

|
Google Oneindia Kannada News

ಲಂಡನ್, ಆಗಸ್ಟ್ 06: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ವೀಸಾ ಅವಧಿ ವಿಸ್ತರಣೆ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಗೃಹ ಸಚಿವಾಲಯ ತಿರಸ್ಕರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನವಾಜ್ ಷರೀಫ್ ಅವರ ವೀಸಾ ಅವಧಿ ವಿಸ್ತರಿಸಲಾಗದು ಎಂದು ಬ್ರಿಟನ್ ಗೃಹ ಸಚಿವಾಲಯ ತಿಳಿಸಿದೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ನ್ಯೂಸ್ ವರದಿ ಮಾಡಿದೆ.

ಪಾಕ್ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರನ್ನು ನರಿಗೆ ಹೋಲಿಸಿದ ಇಮ್ರಾನ್ ಖಾನ್ಪಾಕ್ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರನ್ನು ನರಿಗೆ ಹೋಲಿಸಿದ ಇಮ್ರಾನ್ ಖಾನ್

ಗೃಹ ಸಚಿವಾಲಯ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ, ಅದು ಇತ್ಯರ್ಥವಾಗುವವರೆಗೂ ಷರೀಫ್ ಅವರು ಲಂಡನ್‌ನಲ್ಲೇ ಇರಲಿದ್ದಾರೆ ಎಂದು ಪಿಎಂಎಲ್ ಎನ್ ವಕ್ತಾರ ಔರಂಗಜೇಬ್ ತಿಳಿಸಿದ್ದಾರೆ.

Former Pakistan PM Nawaz Sharifs Application For Visa Extension In UK Rejected: Reports

71 ವರ್ಷದ ನವಾಜ್ ಷರೀಫ್ ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ಬಳಿಕ ನವೆಂಬರ್ 2019ರಿಂದಲೂ ಲಂಡನ್‌ನಲ್ಲೇ ನೆಲೆಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಲಂಡನ್‌ನಿಂದ ಗಡಿಪಾರು ಮಾಡಬೇಕೆಂದು ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರ ಬ್ರಿಟನ್‌ ಸರಕಾರಕ್ಕೆ ಮನವಿ ಮಾಡಿತ್ತು .

ಇಮ್ರಾನ್‌ ಖಾನ್‌ ಸರಕಾರದ ಮನವಿ ಪತ್ರವನ್ನು ಬ್ರಿಟನ್‌ನಲ್ಲಿನ ಪಾಕ್‌ ರಾಯಭಾರಿ ಖುದ್ದಾಗಿ ಬ್ರಿಟನ್‌ ವಿದೇಶಾಂಗ ಆಯುಕ್ತರಿಗೆ ನೀಡಿದ್ದರು. '' 2019ರ ನವೆಂಬರ್‌ನಿಂದಲೂ ವೈದ್ಯಕೀಯ ಚಿಕಿತ್ಸೆ ಅಡಿಯಲ್ಲಿ ನವಾಜ್‌ ಅವರಿಗೆ ಲಂಡನ್‌ನಲ್ಲಿ ವಾಸಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ವೀಸಾವನ್ನು ಕೂಡಲೇ ರದ್ದುಗೊಳಿಸಬೇಕು.
ನಾಲ್ಕು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನು ಅವರ ಮೂಲ ದೇಶಕ್ಕೆ ಗಡೀಪಾರು ಮಾಡಬೇಕು ಎಂಬುದಾಗಿ 1974ರ ಬ್ರಿಟನ್‌ನ ವಲಸೆ ಕಾನೂನು ಕೂಡ ಹೇಳುತ್ತದೆ," ಎಂದು ಪಾಕ್‌ ಸರಕಾರ ತನ್ನ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆಂತರಿಕ ವಿಚಾರಗಳ ಸಲಹೆಗಾರ ಶೆಹಜಾದ್‌ ಅಕ್ಬರ್‌ ಅವರು, "2020ರ ಸೆಪ್ಟೆಂಬರ್‌ನಲ್ಲಿ ಇಸ್ಲಾಮಾಬಾದ್‌ ಹೈಕೋರ್ಟ್‌ ಷರೀಫ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದರ ಬಳಿಕ ಇದುವರೆಗೂ ಒಟ್ಟು ಮೂರು ಬಾರಿ ನವಾಜ್‌ ಅವರ ಗಡಿಪಾರಿಗೆ ಲಂಡನ್‌ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ," ಎಂದಿದ್ದಾರೆ.

ಅಲ್‌ ಅಜಿಜಿಯಾ ಭ್ರಷ್ಟಾಚಾರ ಪ್ರಕರಣ ಸಂಬಂಧ ಇಸ್ಲಾಮಾಬಾದ್‌ ಹೈಕೋರ್ಟ್‌ ಕಳೆದ ಸೆ. 15ರಂದು ನವಾಜ್‌ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದೆ.
ದೇಶದಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪ್ರಧಾನಿ ಇಮ್ರಾನ್ ಖಾನ್ ಕಾರಣ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಪಿಸಿದ್ದರು.

ವಿಪಕ್ಷಗಳ ಒಕ್ಕೂಟ ಪಾಕಿಸ್ತಾನ್ ಡೆಮಾಕ್ರಾಟಿಕ್ ಅಲಯನ್ಸ್ (ಪಿಡಿಎಂ) ವತಿಯಿಂದ ಲಾಹೋರ್‌ನಲ್ಲಿ ನಡೆದ ಸರ್ಕಾರದ ವಿರುದ್ಧದ ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ಅವರು ಮಾತನಾಡಿದ್ದರು.

ಕೋವಿಡ್​ ಹಿನ್ನೆಲೆ ನಗರದಲ್ಲಿ ಸಾರ್ವಜನಿಕ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ. ಆದರೂ ನಗರದ ಮಿನಾರ್​-ಎ- ಪಾಕಿಸ್ತಾನ್ ಬಳಿ ವಿಪಕ್ಷಗಳ ಒಕ್ಕೂಟ ಶಕ್ತಿ ಪ್ರದರ್ಶನ ಸಮಾವೇಶ ನಡೆಸಿದೆ ಎಂದು ಎಕ್ಸ್​ಪ್ರೆಸ್​ ಟ್ರಿಬ್ಯೂನ್ ವರದಿ ಮಾಡಿತ್ತು.

ಕಳೆದ ಒಂದು ವರ್ಷದಿಂದ ಲಂಡನ್​​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಜ್ ಷರೀಫ್, ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದರು.

ಇಮ್ರಾನ್ ಖಾನ್ ದೇಶವನ್ನು ಹಣದುಬ್ಬರ ಮತ್ತು ನಿರೋದ್ಯೋಗ ಸಮಸ್ಯೆಗೆ ತಳ್ಳಿದ್ದಾರೆ. ದೇಶದಲ್ಲಿ ಗೋದಿ ಮತ್ತು ಸಕ್ಕರೆ ಸಮಸ್ಯೆ ಇದ್ದರೂ, ಖಾನ್ ಬೆಂಬಲಿಗರು ಹಣ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ಉಚ್ಚಾಟಿತ ಪ್ರಧಾನಿ ವಾಗ್ದಾಳಿ ನಡೆಸಿದ್ದರು.

English summary
Former Pakistani prime minister Nawaz Sharif's application for visa extension has been turned down by the UK Home Office with the right to appeal, according to media reports on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X