ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UK ತಾಪಮಾನ: ಲಂಡನ್ ರೈಲು ಹಳಿಗೆ ಬೆಂಕಿ

|
Google Oneindia Kannada News

ಜುಲೈ 11 ರಂದು ಲಂಡನ್‌ನ ಸೇತುವೆಯೊಂದರ ಬಳಿ ರೈಲು ಹಳಿಗಳು ಬೆಂಕಿಗೆ ಆಹುತಿಯಾಗಿದ್ದು, ನಗರದಲ್ಲಿ ತಾಪಮಾನ ಏರಿಕೆಯ ನಡುವೆ ಮರದಿಂದಾಗಿ ಟ್ರ್ಯಾಕ್‌ಗೆ ಬೆಂಕಿ ಹೊತ್ತಿಕೊಂಡಿರುವುದು ವರದಿಯಾಗಿದೆ.

ಎಕ್ಸ್‌ಪ್ರೆಸ್ ಪ್ರಕಾರ, ವಾಂಡ್ಸ್‌ವರ್ತ್ ರಸ್ತೆ ಮತ್ತು ಲಂಡನ್ ವಿಕ್ಟೋರಿಯಾ ನಡುವಿನ ಟ್ರ್ಯಾಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಟ್ವಿಟರ್‌ನಲ್ಲಿ ಘನಟೆಯ ವಿಡಿಯೋ ವೈರಲ್ ಆಗಿವೆ. ಆಗ್ನೇಯ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಸ್ಟೀವ್ ವೈಟ್ ಟ್ವೀಟ್ ಮೂಲಕ, ಬೆಂಕಿ ಹೊತ್ತುಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬೆಂಕಿಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ರೈಲು ಕಂಪನಿ ಮತ್ತು ಲಂಡನ್ ಅಗ್ನಿಶಾಮಕ ದಳಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು.

ನೆಟ್ವರ್ಕ್ ರೈಲ್ ಸೌತ್ ಈಸ್ಟ್ ಕೂಡ ಬೆಂಕಿಯ ಚಿತ್ರವನ್ನು ಹಂಚಿಕೊಂಡಿದೆ ಮತ್ತು ಮುಂಬರುವ ವಾರದಲ್ಲಿ ಶಾಖ ಗಂಭೀರ ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಿದೆ. ಪ್ರತ್ಯೇಕ ಪೋಸ್ಟ್‌ನಲ್ಲಿ, ಟ್ರ್ಯಾಕ್‌ಗಳು ಹೇಗೆ ಉರಿಯುತ್ತವೆ ಎಂಬುದನ್ನು ಸಂಸ್ಥೆ ವಿವರಿಸಿದೆ. ಸೇತುವೆಯ ಮೇಲಿನ ಮರಗಳು ತುಂಬಾ ಒಣಗಿದ್ದರಿಂದ ಅದರ ಕಟ್ಟಿಗೆ ಟ್ರ್ಯಾಕ್ ಮೇಲೆ ಬಿದ್ದು ಕಾದಿದ್ದ ಹಳಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಅದು ಹೇಳಿದೆ. ಜೊತೆಗೆ ಸಂಸ್ಥೆಯು "ಬೆಂಕಿಯ ಬಗ್ಗೆ ಮುಂಚಿತವಾಗಿ ತಿಳಿಯಿತು. ಅದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು" ಎಂದು ಹೇಳಿದೆ.

Extreme heat in UK: Fire on London train track

ಇದಲ್ಲದೆ ತಪಾಸಣೆಯಿಂದ "ರೈಲು ಸುರಕ್ಷಿತವಾಗಿ ಮಾರ್ಗ ದಾಟಲು ಸಾಧ್ಯವಾಗಿದೆ" ಎಂದು ನೆಟ್ವರ್ಕ್ ರೈಲ್ ಭರವಸೆ ನೀಡಿದೆ. ಘಟನೆಯ ಹಿನ್ನೆಲೆಯಲ್ಲಿ ಟ್ರ್ಯಾಕ್‌ಗಳನ್ನು ಬದಲಾಯಿಸುವ ಅಗತ್ಯವಿದೆಯೇ ಎಂದು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ರಾಷ್ಟ್ರವು ಸಾಮಾನ್ಯವಾಗಿ ಹೆಚ್ಚಿನ ತಾಪಮಾನವನ್ನು ಅನುಭವಿಸುತ್ತಿರುವಾಗ ಈ ಘಟನೆ ಸಂಭವಿಸಿದೆ. BBC ಪ್ರಕಾರ, ಯುನೈಟೆಡ್ ಕಿಂಗ್‌ಡಂನಲ್ಲಿ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ಗೆ ಏರುವ ನಿರೀಕ್ಷೆಯಿದೆ. ಶಾಖದಿಂದ ಉಂಟಾಗುವ ಸಂಭಾವ್ಯ ಆರೋಗ್ಯ ಮತ್ತು ಸಾರಿಗೆ ಸಮಸ್ಯೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವ ಸಲುವಾಗಿ ಹವಾಮಾನ ಕಚೇರಿಯು ವಿಪರೀತ ತಾಪಮಾನದ ಎಚ್ಚರಿಕೆಯನ್ನು ನೀಡಿದೆ.

ಮೂರನೇ ಹಂತದ ಶಾಖದ ಎಚ್ಚರಿಕೆಗಳು ದಕ್ಷಿಣ, ಮಿಡ್‌ಲ್ಯಾಂಡ್ಸ್ ಮತ್ತು ಇಂಗ್ಲೆಂಡ್‌ನ ಪೂರ್ವ ಭಾಗದಾದ್ಯಂತ ವರದಿಯಾಗಿದೆ. ಶಾಖವನ್ನು ನಿಭಾಯಿಸಲು ಜನರು ಸಾಧ್ಯವಾದಷ್ಟು ಮನೆಯೊಳಗೆ ಇರಲು ಮತ್ತು ಸಾಕಷ್ಟು ದ್ರವವನ್ನು ಕುಡಿಯಲು ಅಧಿಕಾರಿಗಳು ಸಲಹೆ ನೀಡಿದರು. ಮುಂದಿನ ವಾರಾಂತ್ಯದವರೆಗೆ ಶಾಖದ ಎಚ್ಚರಿಕೆಗಳು ಸ್ಥಳದಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

Recommended Video

Narendra Modi ಹೊಸ ಸಂಸತ್ ಭವನದ ಮೇಲೆ ಲಾಂಛನವನ್ನು ಅನಾವರಣಗೊಳಿಸಿದರು | *India | OneIndia Kannada

English summary
Train tracks caught fire near a bridge in London on July 11, with reports of wood burning on the track amid rising temperatures in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X