ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೆಲ ನಗರಗಳಲ್ಲಿ ಉಸಿರಾಡಿಸಲೂ ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ವ್ಯಂಗ್ಯ

|
Google Oneindia Kannada News

ಲಂಡನ್, ಜೂನ್ 06: ಆದ್ಯತಾ ವಹಿವಾಟಿನಲ್ಲಿ ಭಾರತಕ್ಕೆ ಸುಂಕರಹಿತ ಸೌಲಭ್ಯ ನೀಡುವುದನ್ನು ಮುಂದುವರಿಸುವುದಿಲ್ಲ ಎನ್ನುವ ಮೂಲಕ ಭಾರತಕ್ಕೆ ಆಘಾತ ನೀಡಿರುವ ಟ್ರಂಪ್ ಇದೀಗ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಭಾರತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲಂಡನ್ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್ ಬ್ರಿಟಿಶ್ ಮಾಧ್ಯಮವೊಂದಕ್ಕೆ ಸಂದರ್ಶನ ನೀದುವ ಸಂದರ್ಭದಲ್ಲಿ, "ಪರಿಸರ ಮಾಲಿನ್ಯದ ಬಗ್ಗೆ ಭಾರತ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ" ಎಂದರು. "ಉತ್ತಮ ಗಾಳಿ, ಶುದ್ಧ ನೀರಿನ ಬಗ್ಗೆ ಭಾರತಕ್ಕಾಗಲೀ, ಚೀನಾ, ರಷ್ಯಾಕ್ಕಾಗಲಿ ಕಾಳಜಿ ಇಲ್ಲ" ಎಂದು ಅವರು ಸಂದರ್ಶನದಲ್ಲಿ ಹೇಳಿದರು.

'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ

ಕೆಲವರಿಗೆ ಪರಿಸರ ಪ್ರಜ್ಞೆ ಎಂಬುದಿಲ್ಲ ಎಂದ ಟ್ರಂಪ್, ಭಾರತ, ಚೀನಾ ಮತ್ತು ರಷ್ಯಾ ಹೆಸರನ್ನು ನೇರವಾಗಿಯೇ ಹೇಳಿ, ಈ ಮೂರು ದೇಶಗಳನ್ನು ದೂರಿದರು.

ಮೂರು ದಿನಗಳ ಲಂಡನ್ ಪ್ರವಾಸದಲ್ಲಿರುವ ಅವರು ಕ್ವೀನ್ ಎಲೆಜಬೆತ್ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.

ಭಾರತಕ್ಕೆ ಪರಿಸರ ಪ್ರಜ್ಞೆ ಇಲ್ಲ!

ಭಾರತಕ್ಕೆ ಪರಿಸರ ಪ್ರಜ್ಞೆ ಇಲ್ಲ!

ಬ್ರಿಟಿಶ್ ಚಾನೆಲ್ ಐಟಿವಿಗೆ ಟ್ರಂಪ್ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಜೂನ್ ಐದರಂದು ಪರಿಸರ ದಿನವಾದ ಕಾರಣ, ಪರಿಸರದ ಉಳಿವಿಗೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಗತ್ತಿನ ರಾಷ್ಟ್ರಗಳು ನಡೆಸುತ್ತಿರುವ ಪ್ರಯತ್ನವೇನು ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಉತ್ತರಿಸಿದ ಟ್ರಂಪ್, ಜಗತ್ತಿನ ಕೆಲವು ರಾಷಹ್ಟ್ರಗಳಿಗೆ ಪರಿಸರ ಪ್ರಜ್ಞೆಯೇ ಇಲ್ಲ ಎಂದರು. ಆ ಸಂದರ್ಭದಲ್ಲಿ ಭಾರತ, ಚೀನಾ ಮತ್ತು ರಷ್ಯಾ ಹೆಸರನ್ನು ಉಲ್ಲೇಖಿಸಿದರು.

ಅಮೆರಿಕದ್ದು ಸ್ವಚ್ಛ ಪರಿಸರ

ಅಮೆರಿಕದ್ದು ಸ್ವಚ್ಛ ಪರಿಸರ

"ನಾನು ಸಂತಸದಿಂದ ಹೇಳುತ್ತೇನೆ, ಜಗತ್ತಿನ ಅತ್ಯಂತ ಸ್ವಚ್ಛ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನ ಪಡೆಯುತ್ತದೆ. ಎಲ್ಲಾ ಅಂಕಿ-ಸಂಖ್ಯೆಗಳನ್ನು ನೋಡಿಯೇ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ಆಘಾತ ನೀಡಿದ ಅಮೆರಿಕದ ನಡೆಯನ್ನು 'ದುರದೃಷ್ಟಕರ' ಎಂದ ಭಾರತಆಘಾತ ನೀಡಿದ ಅಮೆರಿಕದ ನಡೆಯನ್ನು 'ದುರದೃಷ್ಟಕರ' ಎಂದ ಭಾರತ

ಗಾಳಿ, ನೀರಿನ ಬಗ್ಗೆ ಕಾಳಜಿ ಇಲ್ಲ!

ಗಾಳಿ, ನೀರಿನ ಬಗ್ಗೆ ಕಾಳಜಿ ಇಲ್ಲ!

"ಚೀನಾ, ಭಾರತ ಮತ್ತು ರಷ್ಯಾ, ಇನ್ನಿತರ ದೇಶಗಳಲ್ಲಿ ಉತ್ತಮ ಗಾಳಿ ಇಲ್ಲ, ಉತ್ತಮ ನೀರೂ ಇಲ್ಲ. ಅವನ್ನು ಉತ್ತಮವಾಗಿ ಉಳಿಸಿಕೊಳ್ಳುವ ಬಗ್ಗೆ ಆ ದೇಶಗಳಿಗೆ ಕಾಳಜಿಯೂ ಇಲ್ಲ" ಎಂದು ಟ್ರಂಪ್ ದೂರಿದರು.

ಉಸಿರಾಡುವುದಕ್ಕೂ ಸಾಧ್ಯವಿಲ್ಲ!

ಉಸಿರಾಡುವುದಕ್ಕೂ ಸಾಧ್ಯವಿಲ್ಲ!

ಭಾರತ, ಚೀನಾ, ರಷ್ಯಾ ಹೆಸರನ್ನು ಹೇಳಿದ ನಂತರ, "ಕೆಲವು ನಗರಗಳಿಗೆ ನೀವು ತೆರಳಿದರೆ ಉಸಿರಾಡುವುದಕ್ಕೂ ಸಾಧ್ಯವಿಲ್ಲ. ಅಷ್ಟು ಕೊಳಕಾಗಿರುತ್ತದೆ. ಆ ನಗರಗಳು ಯಾವವು ಎಂಬುದನ್ನು ನಾನಿಲ್ಲಿ ಉಲ್ಲೇಖಿಸುವುದಿಲ್ಲ" ಎಂದು ಟ್ರಂಪ್ ಒಗಟಾಗಿ ಮಾತನಾಡಿದರು.

English summary
America President Donald Trump attacked India, China and Russia over environmental pollution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X