ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ಗೆ ಮಾರಕವಾಗುತ್ತಿದೆ ಕೋವಿಡ್-19 ಡೆಲ್ಟಾ ರೂಪಾಂತರಿ

|
Google Oneindia Kannada News

ಭಾರತದಲ್ಲಿ ಮೊದಲು ಪತ್ತೆಯಾಗಿದೆ ಎನ್ನಲಾದ ಕೋವಿಡ್-19 ಡೆಲ್ಟಾ ರೂಪಾಂತರಿ ಬ್ರಿಟನ್‌ಗೆ ಹೆಚ್ಚು ಮಾರಣಾಂತಿಕವಾಗುತ್ತಿದೆ. ಅಲ್ಲಿ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಡೆಲ್ಟಾ ರೂಪಂತರಿ ತಳಿಯಿಂದಾಗಿ ಒಂದೇ ವಾರದಲ್ಲಿ 278 ಮಂದಿ ಸೋಂಕಿತರು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಇದೇ ಸಂಖ್ಯೆ ಕಳೆದ ವಾರ 201ರಷ್ಟಿತ್ತು. ಎಂದು ಪಿಎಚ್ ಇ ಮಾಹಿತಿ ನೀಡಿದೆ.

ಆದರೆ ಈ ಕುರಿತು ಈಗಲೇ ನಿರ್ಧಿಷ್ಠ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಇದಕ್ಕಾಗಿ ಹೆಚ್ಚಿನ ದತ್ತಾಂಶಗಳು ಬೇಕಾಗುತ್ತದೆ. ಡೆಲ್ಟಾ ವಿರುದ್ಧದ ಹೋರಾಡಲು ಕೋವಿಡ್ ಲಸಿಕೆ ಎರಡೂ ಡೋಸ್ ಗಳನ್ನು ಹಾಕಿಸಿಕೊಳ್ಳುವುದು ಅನಿವಾರ್ಯ ಎಂದು ಹೇಳಲಾಗಿದೆ.

 'ಡೆಲ್ಟಾ' ರೂಪಾಂತರಿಯಿಂದ ಕೋವಿಡ್ 19 ಪ್ರಸರಣ ಪ್ರಮಾಣ ಅಧಿಕ 'ಡೆಲ್ಟಾ' ರೂಪಾಂತರಿಯಿಂದ ಕೋವಿಡ್ 19 ಪ್ರಸರಣ ಪ್ರಮಾಣ ಅಧಿಕ

ಬೋಲ್ಟನ್‌ನಲ್ಲಿ, ಸ್ಥಳೀಯ ತಂಡಗಳು ಪರೀಕ್ಷೆಗಳನ್ನು ಹೆಚ್ಚಿಸಿದ್ದು, ಪರೀಕ್ಷಾ ಕಿಟ್ ಗಳನ್ನು ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಿದ್ದಾರೆ. ಮೊಬೈಲ್ ಪರೀಕ್ಷಾ ಘಟಕಗಳನ್ನು ನಿಯೋಜಿಸಲಾಗಿದ್ದು, ರೂಪಾಂತರದ ಹರಡುವಿಕೆಯನ್ನು ಪತ್ತೆಹಚ್ಚಲು ತ್ಯಾಜ್ಯನೀರಿನ ಮಾದರಿ ಪರೀಕ್ಷೆಗಳನ್ನು ಮುಂದುವರಿಸಲಾಗುತ್ತಿದೆ. ಪಿಎಚ್ ಇ ಮಾಹಿತಿ ನೀಡಿದೆ.

 ಬ್ರಿಟನ್ ಆರೋಗ್ಯಾಧಿಕಾರಿಗಳು

ಬ್ರಿಟನ್ ಆರೋಗ್ಯಾಧಿಕಾರಿಗಳು

ಈ ಬಗ್ಗೆ ಬ್ರಿಟನ್ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರ ವೈರಸ್ ಸೋಂಕಿನಿಂದಾಗಿ ಕಳೆದೊಂದು ವಾರದಲ್ಲಿ 5,472 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಮೂಲಕ ಈ ರೂಪಾಂತರಿ ವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆ 12,431 ಕ್ಕೆ ತಲುಪಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕ ಡಾ. ಜೆನ್ನಿ ಹ್ಯಾರಿಸ್ ಅವರು, ಈ ರೂಪಾಂತರವು ಈಗ ಬ್ರಿಟನ್ ನಾದ್ಯಂತ ಪ್ರಬಲವಾಗಿ ಪ್ರಸರಣವಾಗುತ್ತಿದೆ. ನಾವೆಲ್ಲರೂ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

 ಮನೆಯಿಂದಲೇ ಕೆಲಸ ಮಾಡಿ

ಮನೆಯಿಂದಲೇ ಕೆಲಸ ಮಾಡಿ

ಸಾಧ್ಯವಾದಷ್ಟೂ ಮನೆಯಿಂದಲೇ ಕೆಲಸ ಮಾಡಿ.. ಅತಿ ಅನಿವಾರ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಎಲ್ಲ ಸಮಯದಲ್ಲೂ ಕೈ ಮುಖ ತೊಳೆಯುತ್ತಿರೆ. ಮನೆಯಲ್ಲಿ ಶುದ್ಧವಾದ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳಿ..

 ಉತ್ತಮ ಆಹಾರದ ಸಲಹೆ

ಉತ್ತಮ ಆಹಾರದ ಸಲಹೆ

ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರವನ್ನು ಬಿಸಿಯಾಗಿ ತಿನ್ನಿ ಎಂದು ಸಲಹೆ ನೀಡಿದ್ದಾರೆ. ಅಂತೆಯೇ ಅರ್ಹರು ಕೂಡಲೇ ಲಸಿಕೆ ಹಾಕಿಸಿಕೊಳ್ಳಿ. ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಿ. ಇದು ಜೀವಗಳನ್ನುಉಳಿಸುತ್ತದೆ ಎಂದು ಮನವಿ ಮಾಡಿದ್ದಾರೆ.

 ಡೆಲ್ಟಾ ಪ್ರಕರಣಗಳ ಸಂಖ್ಯೆ ಎಷ್ಟಿದೆ?

ಡೆಲ್ಟಾ ಪ್ರಕರಣಗಳ ಸಂಖ್ಯೆ ಎಷ್ಟಿದೆ?

ಇನ್ನು ಡೆಲ್ಟಾ ರೂಪಂತರ ವೈರಸ್ ತಳಿಗೆ ಬ್ರಿಟನ್‌ನ ಬೋಲ್ಟನ್ ಹಾಟ್ ಸ್ಪಾಟ್ ಪರಿಣಮಿಸಿದ್ದು, ಅಲ್ಲಿ ಡೆಲ್ಟಾ ಸೋಂಕು ಪ್ರಕರಣಗಳ ಸಂಖ್ಯೆ 795 ರಿಂದ 2149 ಕ್ಕೆ ಏರಿಕೆಯಾಗಿದೆ. ಅದಾಗ್ಯೂ ಬೋಲ್ಟನ್‌ನಲ್ಲಿ ಕೋವಿಡ್ ಸೋಂಕು ಪ್ರಸರಣ ದರ ಕುಸಿಯುತ್ತಿದ್ದು, ಸ್ಥಳೀಯ ಪ್ರಾಧಿಕಾರದ ತಂಡಗಳು ಕೈಗೊಂಡ ಕ್ರಮಗಳು ಸೋಂಕು ಹರಡುವಿಕೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಪಿಎಚ್ ಇ ಹೇಳಿದೆ.

English summary
The Delta variant of COVID-19, or the B1.617.2 highly transmissible variant of concern (VOC) first identified in India, has now become the dominant VOC in the UK and may also come with an increased risk of hospitalisation, health officials in Britain have said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X