ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ಜೀವನಶೈಲಿಗೆ ಕೊಂಚ ಬ್ರೇಕ್ ಹಾಕಿದ ದುಬೈ ರಾಜಕುಮಾರ

|
Google Oneindia Kannada News

ಲಂಡನ್ ಆಗಸ್ಟ್ 17: ರಾಜಮನೆತನದ ಸದಸ್ಯರು ಮೆಟ್ರೋದಲ್ಲಿ ಪ್ರಯಾಣಿಸುವುದು ತುಂಬಾ ವಿರಳ. ಆದರೆ ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ರಾಜಮನೆತನದವರೂ ಸಾಮಾನ್ಯ ವ್ಯಕ್ತಿಯಂತೆ ಬದುಕಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಫಜ್ಜಾ ಎಂದು ಜನಪ್ರಿಯವಾಗಿರುವ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಇತ್ತೀಚೆಗೆ ಲಂಡನ್ ಟ್ಯೂಬ್‌ನಲ್ಲಿ(ಅಂಡರ್ ಗ್ರೌಂಡ್ ರೈಲು) ತನ್ನ ಸ್ನೇಹಿತನೊಂದಿಗೆ ಪ್ರಯಾಣಿಸುವ ಫೋಟೋಗಳು ಸಾಮಾಜಿಕ ಮಾಧ್ಯಮದ ಗಮನ ಸೆಳೆದರು. ಜನನಿಬಿಡ ಲಂಡನ್ ಮೆಟ್ರೋ ರೈಲಿನೊಳಗೆ ರಾಜಮನೆತನದ ಸದಸ್ಯರು ತಮ್ಮ ಸ್ನೇಹಿತನೊಂದಿಗೆ ಪ್ರಯಾಣ ಮಾಡುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ಸದ್ಯ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ರಜೆಗಾಗಿ ಲಂಡನ್‌ನಲ್ಲಿದ್ದರು.

UK ತಾಪಮಾನ: ಲಂಡನ್ ರೈಲು ಹಳಿಗೆ ಬೆಂಕಿ UK ತಾಪಮಾನ: ಲಂಡನ್ ರೈಲು ಹಳಿಗೆ ಬೆಂಕಿ

ಫಜ್ಜಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಲಂಡನ್‌ನಲ್ಲಿ ಪ್ರಯಾಣಿಸುವ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಒಂದು ಚಿತ್ರವು ಹೆಚ್ಚಾಗಿ ಸಾಮಾನ್ಯರು ಬಳಸುವ ಲಂಡನ್ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮತ್ತೊಂದು ವಿಡಿಯೊದಲ್ಲಿ ಫಜ್ಜಾ ಲಂಡನ್‌ನಲ್ಲಿ ವಾಸಿಸುವ ದುಬೈ ನಿವಾಸಿಗಳೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡುತ್ತಿರುವುದು ಕಂಡುಬಂದಿದೆ.

14.5 ಮಿಲಿಯನ್ ಅನುಯಾಯಿಗಳು

14.5 ಮಿಲಿಯನ್ ಅನುಯಾಯಿಗಳು

ಇದೀಗ ವೈರಲ್ ಆಗಿರುವ ಫೋಟೋದಲ್ಲಿ, ಕ್ರೌನ್ ಪ್ರಿನ್ಸ್ ತನ್ನ ಸ್ನೇಹಿತನೊಂದಿಗೆ ಕಿಕ್ಕಿರಿದ ಲಂಡನ್ ಟ್ಯೂಬ್ ಕಂಪಾರ್ಟ್‌ಮೆಂಟ್‌ನ ಮಧ್ಯದಲ್ಲಿ ರೈಲಿನ ಸಹ ಪ್ರಯಾಣಿಕರಿಗೆ ತಿಳಿಯದಂತೆ ನಿಂತಿರುವುದನ್ನು ಕಾಣಬಹುದು. ದುಬೈ ಆಡಳಿತಗಾರ ದುಬೈ ಕ್ರೌನ್ ಪ್ರಿನ್ಸ್ 14.5 ಮಿಲಿಯನ್ Instagram ಅನುಯಾಯಿಗಳನ್ನು ಹೊಂದಿದ್ದಾರೆ.

"ನಾವು ಹೋಗುವ ದಾರಿ ಬಹಳ ದೂರವಿದೆ ಮತ್ತು ಬದ್ರ್ ಈಗಾಗಲೇ ಬೇಸರಗೊಂಡಿದೆ" ಎಂದು ದುಬೈ ರಾಜಕುಮಾರ ಸುಮಾರು ಒಂದು ವಾರದ ಹಿಂದೆ ಹಂಚಿಕೊಂಡ ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಿದರು.

ಗಫೂರ್ ಎಲ್ಲರಿಗೂ ಮಾದರಿ- ಫಜ್ಜಾ

ಗಫೂರ್ ಎಲ್ಲರಿಗೂ ಮಾದರಿ- ಫಜ್ಜಾ

ಕಳೆದ ವಾರ ಯುಕೆಯಿಂದ ಹಿಂದಿರುಗಿದ ನಂತರ, ಫಜ್ಜಾ ಅವರು ಡೆಲಿವರಿ ಡ್ರೈವರ್ ಅಬ್ದುಲ್ ಗಫೂರ್ ಅಬ್ದುಲ್ ಹಕೀಮ್ ಅವರನ್ನು ಭೇಟಿಯಾದರು. ಅವರು ರಸ್ತೆಯಿಂದ ಕಾಂಕ್ರೀಟ್ ಬ್ಲಾಕ್‌ಗಳನ್ನು ತೆಗೆದುಹಾಕುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ವೈರಲ್ ಆಗಿತ್ತು. ಗಫೂರ್ ಎಲ್ಲರಿಗೂ ಮಾದರಿ ಎಂದು ಫಜ್ಜಾ ಹೇಳಿದ್ದರು.

ಹಮ್ದಾನ್ ಬಿನ್ ಯಾರು?

ಹಮ್ದಾನ್ ಬಿನ್ ಯಾರು?

ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮತ್ತು ಅವರ ಹಿರಿಯ ಪತ್ನಿ ಹಿಂದ್ ಬಿಂತ್ ಮಕ್ತೂಮ್ ಬಿನ್ ಜುಮಾ ಅಲ್ ಮಕ್ತೌಮ್ ಅವರ ಪುತ್ರ. ಇವರ 12 ಜನ ಮಕ್ಕಳಲ್ಲಿ ಎರಡನೆಯವರಾಗಿರುವ ಇವರಿಗೆ 39 ವರ್ಷ ವಯಸ್ಸಾಗಿದೆ. ಅಲ್ಲದೆ ಇವರನ್ನು "ಫಜ್ಜಾ" ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. 2008 ರಿಂದ ದುಬೈನ ಕ್ರೌನ್ ಪ್ರಿನ್ಸ್ ಆಗಿದ್ದಾರೆ. ಅವರು ಈ ಹಿಂದೆ 2006 ರಿಂದ 2008 ರವರೆಗೆ ದುಬೈನ ಉಪ ಆಡಳಿತಗಾರರಾಗಿ ಸೇವೆ ಸಲ್ಲಿಸಿದರು.ಅವರು ದುಬೈನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ.

ಉತ್ತಮ ಕ್ರೀಡಾಪಟು

ಉತ್ತಮ ಕ್ರೀಡಾಪಟು

ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ರಾಜಮನೆತನದ ಕರ್ತವ್ಯಗಳ ಜೊತೆಜೊತೆಗೆ, ದುಬೈ ಬಿಲಿಯನೇರ್ ಸ್ಕೈಡೈವಿಂಗ್, ಕುದುರೆ ಸವಾರಿ, ಸೈಕ್ಲಿಂಗ್ ಮತ್ತು ಛಾಯಾಗ್ರಹಣ ಮುಂತಾದ ಸಾಕಷ್ಟು ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಾರೆ. ಜೊತೆಗೆ ಉತ್ತಮ ಕವಿ ಕೂಡ ಹೌದು.

ರಾಜಮನೆತನಕ್ಕೆ ತಕ್ಕಂತೆ ದುಬಾರಿ ಜೀವನ ಶೈಲಿಯಲ್ಲಿ ಬದುಕುತ್ತಿರುವ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಪ್ರಪಂಚ ಪರ್ಯಟನೆ ಮಾಡುವುದರಲ್ಲಿ ಸಿದ್ಧಹಸ್ತರು. ಜೊತೆಗೆ ವಿಶ್ವದ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿ ಮಾಡುವುದು ಇವರ ಹವ್ಯಾಸಗಳಲ್ಲಿ ಒಂದು.ಈಕ್ವೆಸ್ಟ್ರಿಯನ್ ಆಗಿರುವ ಶೇಖ್ ಹಮ್ದಾನ್ ಅವರು ನಾರ್ಮಂಡಿಯಲ್ಲಿ ನಡೆದ ಆಲ್ಟೆಕ್ ಎಫ್‌ಇಐ ವರ್ಲ್ಡ್ ಇಕ್ವೆಸ್ಟ್ರಿಯನ್ ಗೇಮ್ಸ್ 2014 ರಲ್ಲಿ ಚಿನ್ನದ ಪದಕ, 2012 ರಲ್ಲಿ ಚಿನ್ನ ಮತ್ತು 2010 ರಲ್ಲಿ ಕಂಚಿನ ಪದಕ ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ.

English summary
Sheikh Hamdan, who is popularly known as Fazza, caught the attention of social media after photos of him traveling with his friend in the London tube went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X