ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

65 ವರ್ಷ ಮೇಲ್ಪಟ್ಟವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ಬರುವ ಸಾಧ್ಯತೆ

|
Google Oneindia Kannada News

ಲಂಡನ್, ಮಾರ್ಚ್ 19: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಶುರುವಾಗಿದೆ. 65 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ಮತ್ತೊಮ್ಮೆ ತಗುಲುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.

ಕೋವಿಡ್‌ನಿಂದ ಬಳಲಿ ಗುಣಮುಖರಾದವರ ಪೈಕಿ 65 ವರ್ಷ ಮೇಲ್ಪಟ್ಟವರು ಪುನಃ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಡನ್ಮಾರ್ಕ್ ವಿಜ್ಞಾನಿಗಳು ನಡೆಸಿರುವ ಅಧ್ಯಯನ ಹೇಳಿದೆ.

ಬೆಂಗಳೂರು: ಯಲಹಂಕದಲ್ಲಿ ಒಂದೇ ದಿನ 3 ಕೊರೊನಾ ಕ್ಲಸ್ಟರ್‌ಗಳು ಪತ್ತೆಬೆಂಗಳೂರು: ಯಲಹಂಕದಲ್ಲಿ ಒಂದೇ ದಿನ 3 ಕೊರೊನಾ ಕ್ಲಸ್ಟರ್‌ಗಳು ಪತ್ತೆ

ಕಳೆದ ವರ್ಷ 40 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 65 ವರ್ಷಕ್ಕಿಂತ ಕೆಳಗಿನವರಲ್ಲಿ ಮತ್ತೊಮ್ಮೆ ಸೋಂಕು ತಗುಲುವುದರ ವಿರುದ್ಧ ಶೇ.80 ರಷ್ಟು ರಕ್ಷಣೆ ಕಂಡುಬಂದಿತ್ತು.

COVID-19 Patients Above 65 Years Of Age More Prone To Reinfection, Says Study

ಅಧ್ಯಯನದ ಭಾಗವಾಗಿದ್ದವರ ವಯಸ್ಸು, ಲಿಂಗ ಹಾಗೂ ಎಷ್ಟು ದಿನಗಳವರೆಗೆ ಸೋಂಕು ಇತ್ತು ಎಂಬ ಅಂಶಗಳನ್ನು ಬಳಸಿ ವಿಶ್ಲೇಷಣೆ ಮಾಡಲಾಗಿದೆ.ಈ ವಿಶ್ಲೇಷಣೆ ಆಧಾರಾದಲ್ಲಿ ಮರು ಸೋಂಕಿನ ಸಾಧ್ಯತೆ ಎಷ್ಟು ಎಂಬುದನ್ನು ವಿಜ್ಞಾನಿಗಳು ಅಂದಾಜಿಸಿದ್ದಾರೆ.

65 ವರ್ಷ ಮೇಲ್ಪಟ್ಟವರಲ್ಲಿ ಶೇ.47ರಷ್ಟು ರಕ್ಷಣೆ ಗೋಚರಿಸಿತ್ತು. ಹೀಗಾಗಿ 65 ವರ್ಷ ಮೇಲ್ಪಟ್ಟವರು ಮತ್ತೊಮ್ಮೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಮೊದಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ನೌಕರರಿಗೆ ಕೊರೊನಾ ಲಸಿಕೆ ನೀಡಲಾಯಿತು. ಬಳಿಕ ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ 40 ವರ್ಷ ಮೇಲ್ಪಟ್ಟ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆದ್ಯತೆ ನೀಡಲಾಯಿತು.

English summary
While most people who have had COVID-19 are protected from catching it again for at least six months, elderly patients above 65 years of age are more prone to reinfection, says a new study published in The Lancet journal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X