ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಲಸಿಕೆ: ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬಂತು ಗುಡ್ ನ್ಯೂಸ್!

|
Google Oneindia Kannada News

ಬ್ರಿಟನ್, ಮೇ 16: ಮಾರಣಾಂತಿಕ ಕೊರೊನಾ ವೈರಸ್ ಅನ್ನು ಬಗ್ಗುಬಡಿಯಲು ಯುನೈಟೆಡ್ ಕಿಂಗ್ಡಮ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮುಂದಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಶೋಧಕರು ಹಗಲಿರುಳು ಶ್ರಮ ಪಡುತ್ತಿದ್ದಾರೆ.

Recommended Video

Muthappa Rai ಅಪರೂಪದ ಚಿತ್ರಗಳು | unseen photos | Oneindia Kannada

ಲಸಿಕೆಗೆ ChAdOx1 nCoV-19 ಅಂತ ನಾಮಕರಣ ಮಾಡಿರುವ ವಿಜ್ಞಾನಿಗಳು, ಅದನ್ನ Rhesus Macaque Monkey ಗಳ ಮೇಲೆ ಪ್ರಯೋಗ ಮಾಡಿದ್ದರು. ಪ್ರಯೋಗದಲ್ಲಿ ಅಚ್ಚರಿಯ ಫಲಿತಾಂಶ ಲಭ್ಯವಾಗಿದ್ದು, ಲಸಿಕೆಯ ಮೇಲೆ ವಿಜ್ಞಾನಿಗಳಿಗೆ ಭರವಸೆ ಮೂಡಿದೆ.

ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

ಕ್ಲಿನಿಕಲ್ ಪ್ರಯೋಗದಲ್ಲಿ ಮಂಗಗಳ ಮೇಲೆ ಲಸಿಕೆ ಮಾಡಿರುವ ಪ್ರಭಾವ ಎಂಥದ್ದು.? ಸಂಪೂರ್ಣ ವರದಿ ಇಲ್ಲಿದೆ, ಓದಿರಿ...

antibodies ಉತ್ಪತ್ತಿ

antibodies ಉತ್ಪತ್ತಿ

ಆರು Rhesus Macaque Monkey ಗಳ ಮೇಲೆ ChAdOx1 nCoV-19 ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಸಿಂಗಲ್ ಶಾಟ್ ಲಸಿಕೆ ಪಡೆದ ಮಂಗಗಳಲ್ಲಿ 14 ದಿನಗಳ ಒಳಗೆ antibodies ಉತ್ಪತ್ತಿಯಾಗಿದೆ ಎಂಬುದು ಕ್ಲಿನಿಕಲ್ ಪ್ರಯೋಗದ ವೇಳೆ ತಿಳಿದುಬಂದಿದೆ.

ಶ್ವಾಸಕೋಶಕ್ಕೆ ಹಾನಿಯಾಗಿಲ್ಲ

ಶ್ವಾಸಕೋಶಕ್ಕೆ ಹಾನಿಯಾಗಿಲ್ಲ

ಲಸಿಕೆ ಪಡೆದು, antibodies ಉತ್ಪತ್ತಿಯಾದ ಬಳಿಕ ಮಂಗಗಳನ್ನು ಕೊರೊನಾ ವೈರಸ್ ಗೆ ಎಕ್ಸ್ ಪೋಸ್ ಮಾಡಲಾಗಿದೆ. ಈ ವೇಳೆ ಶ್ವಾಸಕೋಶಕ್ಕೆ ಹಾನಿಯಾಗದಂತೆ ಮತ್ತು ವೈರಸ್ ರೆಪ್ಲಿಕೇಟ್ ಆಗದ ಹಾಗೆ ನಿರ್ಬಂಧಿಸುವಲ್ಲಿ ಲಸಿಕೆ ಶಕ್ತವಾಗಿರುವುದು ಕಂಡುಬಂದಿದೆ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

ಇದು ಗುಡ್ ನ್ಯೂಸ್

ಇದು ಗುಡ್ ನ್ಯೂಸ್

''ಒಂದು ಕಠಿಣ ಹಂತವನ್ನು ಆಕ್ಸ್ ಫರ್ಡ್ ಲಸಿಕೆ ಪಾಸ್ ಮಾಡಿದೆ. ಇದು ಗುಡ್ ನ್ಯೂಸ್' ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಫಾರ್ಮಾಕೊಪಿಡೆಮಿಯಾಲಜಿ ಪ್ರೊಫೆಸರ್ ಸ್ಟೀಫನ್ ಇವಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದಿನ ತಿಂಗಳು ಫಲಿತಾಂಶ

ಮುಂದಿನ ತಿಂಗಳು ಫಲಿತಾಂಶ

ಆಕ್ಸ್ ಫರ್ಡ್ ನ ಈ ಲಸಿಕೆಯನ್ನು ಮನುಷ್ಯರ ಮೇಲೆಯೂ ಪ್ರಯೋಗ ಮಾಡಲಾಗಿದೆ. ಮನುಷ್ಯರ ಮೇಲಿನ ಪ್ರಯೋಗದ ಫಲಿತಾಂಶ ಮುಂದಿನ ತಿಂಗಳು ಲಭ್ಯವಾಗಲಿದೆ. ಕೋವಿಡ್-19 ಗೆ ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿ ಅಮೇರಿಕಾ, ಚೀನಾ ಮತ್ತು ಇಸ್ರೇಲ್ ಕೂಡ ಇದೆ.

English summary
Covid-19: Oxford Vaccine shows promising data in Animal Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X