• search
 • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಹಿ ಸುದ್ದಿ: ಚಮತ್ಕಾರ ಮಾಡದ ಕೋವಿಡ್-19 ಆಕ್ಸ್ ಫರ್ಡ್ ಲಸಿಕೆ.!

|

ಮಾರಣಾಂತಿಕ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವದಾದ್ಯಂತ ಇಲ್ಲಿಯವರೆಗೂ 53,06,496 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 340,055 ಜನರು ಈಗಾಗಲೇ ಕೋವಿಡ್-19 ನಿಂದ ಪ್ರಾಣ ಬಿಟ್ಟಿದ್ದಾರೆ. 44,581 ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

   ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

   ನೋವೆಲ್ ಕೊರೊನಾ ವೈರಸ್ ಅಬ್ಬರ ಅದ್ಯಾವಾಗ ಕಮ್ಮಿ ಆಗುತ್ತೋ ಅಂತ ಜನ ಆತಂಕದಲ್ಲಿ ದಿನಗಳನ್ನು ದೂಡುತ್ತಿರುವಾಗಲೇ ಒಂದು ಕಹಿ ಸುದ್ದಿ ವರದಿಯಾಗಿದೆ. ಕೋವಿಡ್-19 ಗೆ ಲಸಿಕೆ ತಯಾರಿಸುತ್ತಿದ್ದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಒಂದು ಬೇಸರದ ಸುದ್ದಿ ಹೊರಬಿದ್ದಿದೆ.

   ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

   ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಯಾರಿಸಿದ್ದ ಲಸಿಕೆಯಿಂದ ಮಂಗಗಳಲ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಯಲು ಸಾಧ್ಯವಾಗಿಲ್ಲ. ಇದರಿಂದ ಲಸಿಕೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಆಕ್ಸ್ ಫರ್ಡ್ ಲಸಿಕೆ 'ChAdOx1 nCoV-19' ಗೆ ತೀವ್ರ ಹಿನ್ನಡೆಯಾಗಿದೆ.

   ಕ್ಲಿನಿಕಲ್ ಪ್ರಯೋಗದಲ್ಲಿ ಕಂಡಬಂದ ಪ್ರಮುಖ ಅಂಶಗಳು

   ಕ್ಲಿನಿಕಲ್ ಪ್ರಯೋಗದಲ್ಲಿ ಕಂಡಬಂದ ಪ್ರಮುಖ ಅಂಶಗಳು

   Rhesus Macaque ಮಂಗಗಳಲ್ಲಿ ಕೊರೊನಾ ವೈರಸ್ ಸೋಂಕನ್ನು ಕಟ್ಟಿಹಾಕಲು ಆಕ್ಸ್ ಫರ್ಡ್ ಲಸಿಕೆ 'ChAdOx1 nCoV-19' ನಿಂದ ಸಾಧ್ಯವಾಗಿಲ್ಲ.

   ಇತರೆ ಮಂಗಗಳಿಗೆ ಸೋಂಕು ಹರಡುವುದನ್ನೂ 'ChAdOx1 nCoV-19' ಲಸಿಕೆ ತಪ್ಪಿಸಿಲ್ಲ.

   ವೈರಲ್ ನ್ಯುಮೋನಿಯಾದಿಂದ ಮಂಗಗಳನ್ನು 'ChAdOx1 nCoV-19' ಲಸಿಕೆ ರಕ್ಷಿಸಿದೆ.

   ಲಸಿಕೆ ಪಡೆದ ಮಂಗಗಳಲ್ಲಿ ಕಡಿಮೆ ವೈರಲ್ ಲೋಡ್ ಇರುವುದು ಕಂಡುಬಂದಿದೆ.

   ಲಸಿಕೆ ಪಡೆದ ಮಂಗಗಳಿಗೆ ಸೋಂಕು

   ಲಸಿಕೆ ಪಡೆದ ಮಂಗಗಳಿಗೆ ಸೋಂಕು

   ಯು.ಕೆ ನಲ್ಲಿನ ದಿನಪತ್ರಿಕೆ 'ದಿ ಡೈಲಿ ಎಕ್ಸ್ ಪ್ರೆಸ್' ವರದಿಯ ಪ್ರಕಾರ, '''ChAdOx1 nCoV-19' ಲಸಿಕೆ ಪಡೆದ ಮಂಗಗಳನ್ನು ವೈರಸ್ ಗೆ ಎಕ್ಸ್ ಪೋಸ್ ಮಾಡಿದಾಗ, ಎಲ್ಲಾ ಮಂಗಗಳು ಸೋಂಕಿಗೆ ತುತ್ತಾದವು'' ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಮಾಜಿ ಪ್ರಾಧ್ಯಾಪಕ ಡಾ.ವಿಲಿಯಂ ಹ್ಯಾಸೆಲ್ಟೈನ್ ಹೇಳಿದ್ದಾರೆ.

   ''ಮಂಗಗಳ ಮೇಲೆ ಲಸಿಕೆ ಪರಿಣಾಮಕಾರಿಯಾಗಿದೆ'' ಎಂದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದರು.

   ಕೋವಿಡ್-19 ಲಸಿಕೆ: ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬಂತು ಗುಡ್ ನ್ಯೂಸ್!

   ಬೋರಿಸ್ ಜಾನ್ಸನ್ ಹೇಳುವುದೇನು.?

   ಬೋರಿಸ್ ಜಾನ್ಸನ್ ಹೇಳುವುದೇನು.?

   ''ಜಾಗತಿಕ ಪ್ರಯತ್ನದ ಹೊರತಾಗಿಯೂ ನೋವೆಲ್ ಕೊರೊನಾ ವೈರಸ್ ಗೆ ಎಂದೂ ಔಷಧಿ ಸಿಗದೆ ಇರಬಹುದು. ವೈರಾಣುವನ್ನು ನಿಯಂತ್ರಿಸಲು ನಾವು ಹೊಸ ಮಾರ್ಗಗಳನ್ನು ಹುಡುಕಬೇಕಾಗಿದೆ'' ಎಂದು ಕೊರೊನಾ ವೈರಸ್ ವಿರುದ್ಧ ಹೋರಾಡಿ, ಸಂಪೂರ್ಣವಾಗಿ ಗುಣಮುಖರಾಗಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

   ಮನುಷ್ಯರ ಮೇಲೆ ಪ್ರಯೋಗ

   ಮನುಷ್ಯರ ಮೇಲೆ ಪ್ರಯೋಗ

   ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸದ್ಯ ಮನುಷ್ಯರ ಮೇಲೆ ಲಸಿಕೆ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಮೊದಲ ಹಂತದ ಹ್ಯೂಮನ್ ಟ್ರಯಲ್ ನಲ್ಲಿ 1000 ಆರೋಗ್ಯವಂತ ವಯಸ್ಕ ಮಂದಿ ಭಾಗವಹಿಸಿದ್ದು, ಎರಡನೇ ಹಂತದ ಪ್ರಯೋಗಗಳಿಗಾಗಿ 56-70 ವರ್ಷ ವಯಸ್ಸಿನ ಹಿರಿಯ ನಾಗರೀಕರು, 5-12 ವರ್ಷ ವಯಸ್ಸಿನ ಮಕ್ಕಳು ಸೇರಿದಂತೆ ಒಟ್ಟು 10,260 ಮಂದಿಯ ಅವಶ್ಯಕತೆ ಇದೆ.

   ಸೆಪ್ಟೆಂಬರ್ ನಲ್ಲಿ ಪ್ರಯೋಗದ ಫಲಿತಾಂಶ

   ಸೆಪ್ಟೆಂಬರ್ ನಲ್ಲಿ ಪ್ರಯೋಗದ ಫಲಿತಾಂಶ

   ''ಕ್ಲಿನಿಕಲ್ ಅಧ್ಯಯನ ಉತ್ತಮ ಪ್ರಗತಿಯಲ್ಲಿ ಸಾಗುತ್ತಿದೆ. ಲಸಿಕೆಯಿಂದ ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತಾ ಮತ್ತು ಕೊರೊನಾ ವೈರಸ್ ನಿಂದ ರಕ್ಷಣೆ ನೀಡುತ್ತಾ ಎಂಬುದನ್ನು ತಿಳಿಯಲು ಈ ಪ್ರಯೋಗ ಸಹಕಾರಿ ಅಗಲಿದೆ. ಇದರ ಫಲಿತಾಂಶ ಸೆಪ್ಟೆಂಬರ್ ನಲ್ಲಿ ಲಭ್ಯವಾಗಲಿದೆ'' ಎಂದು ಆಕ್ಸ್ ಫರ್ಡ್ ವ್ಯಾಕ್ಸಿನ್ ಗ್ರೂಪ್ ನ ಆಂಡ್ರ್ಯೂ ಪೊಲ್ಲಾರ್ಡ್ ಹೇಳಿದ್ದಾರೆ.

   English summary
   Covid-19: Oxford Vaccine Fails To Stop Infection In Animal Trials.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more