• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್ ಎಫೆಕ್ಟ್: ಕೊರೊನಾ ಸೋಂಕಿನಿಂದ ಬ್ರಿಟನ್ ಬಚಾವ್..?

|
Google Oneindia Kannada News

ಚಳಿಗಾಲ ಬಂದಿದ್ದೇ ಬಂದಿದ್ದು ಜಗತ್ತಿನಾದ್ಯಂತ ಕೊರೊನಾ ಸೋಂಕು ಮತ್ತೆ ಬಾಲಬಿಚ್ಚಿದೆ. ಅದರಲ್ಲೂ ಡೆಡ್ಲಿ ವೈರಸ್ ಅಬ್ಬರಕ್ಕೆ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ತತ್ತರಿಸಿವೆ. ಈ ಸಂದರ್ಭದಲ್ಲೇ ಬ್ರಿಟನ್‌ಗೆ ಸಿಹಿಸುದ್ದಿ ಸಿಕ್ಕಿದೆ. ಮೊದಲೇ ಕೊರೊನಾ ಅವಾಂತರಗಳನ್ನು ಊಹಿಸಿ ಲಾಕ್‌ಡೌನ್ ಘೋಷಿಸಿದ್ದ ಪರಿಣಾಮ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಲಾಕ್‌ಡೌನ್ ಪರಿಣಾಮ ಸೋಂಕು ಹರಡುವ ಪ್ರಮಾಣ ಶೇಕಡ 30ರಷ್ಟು ಕಡಿಮೆಯಾಗಿದೆ. ಯುರೋಪ್ ರಾಷ್ಟ್ರಗಳಿಗೆ ಉತ್ತರ ಧ್ರುವ ಪ್ರದೇಶ ಸಾಕಷ್ಟು ಹತ್ತಿರವಾಗುತ್ತದೆ.

ಈ ಕಾರಣಕ್ಕೆ ಚಳಿಗಾಲದಲ್ಲಿ ಯುರೋಪ್‌ನ ಬಹುಪಾಲು ಪ್ರದೇಶಗಳು ಮಂಜುಗಡ್ಡೆಯಾಗಿ ಬದಲಾಗುತ್ತವೆ. ಈಗಲೂ ಅಷ್ಟೇ ಭಾರಿ ಪ್ರಮಾಣದ ಚಳಿ ಇದೆ. ನಿತ್ಯ ಮಂಜು ಬೀಳುವ ಮುನ್ಸೂಚನೆ ನೀಡಲಾಗುತ್ತಿದೆ. ಇಂತಹ ವಾತಾವರಣ ಎಂದರೆ ಕೊರೊನಾ ವೈರಸ್‌ಗೆ ತುಂಬಾ ಇಷ್ಟ. ಹೀಗಾಗಿ ಲಕ್ಷಾಂತರ ಯುರೋಪ್ ನಿವಾಸಿಗಳಿಗೆ ಸೋಂಕು ವಕ್ಕರಿಸಿದೆ.

ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ? ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?

ಆದರೆ ಇದನ್ನು ಮೊದಲೇ ಅಂದಾಜು ಮಾಡಿದ್ದು ಬ್ರಿಟನ್ ಮಾತ್ರ. ಮುಂದೆ ಎದುರಾಗುವ ಅನಾಹುತ ಮನಗಂಡು ಲಾಕ್‌ಡೌನ್ ಘೋಷಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಅಕ್ಟೋಬರ್ 16ರಿಂದ ನವೆಂಬರ್ 2ರವರೆಗೂ 1 ಲಕ್ಷ ಜನರ ಪೈಕಿ 1320 ಜನರಿಗೆ ಸೋಂಕು ವಕ್ಕರಿಸಿದ್ದರೆ. ಲಾಕ್‌ಡೌನ್ ಘೋಷಣೆ ಬಳಿಕ ಅಂದರೆ ನವೆಂಬರ್ 14ರಿಂದ ನವೆಂಬರ್ 24ರವರೆಗೂ 1 ಲಕ್ಷ ಜನರಲ್ಲಿ 960 ಮಂದಿಗೆ ಸೋಂಕು ಆವರಿಸಿದೆ. ಹೀಗೆ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ.

ಯುರೋಪ್ ಪಾಡು ದೇವರಿಗೆ ಪ್ರೀತಿ

ಯುರೋಪ್ ಪಾಡು ದೇವರಿಗೆ ಪ್ರೀತಿ

ಶತಮಾನಗಳ ಕಾಲ ಜಗತ್ತನ್ನು ಆಳಿದ್ದ ಯುರೋಪ್ ರಾಷ್ಟ್ರಗಳ ಪಾಡು ಹೀನಾಯವಾಗಿದೆ. ಚೀನಿ ವೈರಸ್ ಕೊರೊನಾ ಕೊಟ್ಟ ಏಟಿಗೆ ಇಡೀ ಯುರೋಪ್ ತತ್ತರಿಸಿದೆ. ಇದನ್ನು ಸುಧಾರಿಸಿಕೊಳ್ಳಲು ಇನ್ನೆಷ್ಟು ವರ್ಷಗಳು ಬೇಕೋ ಎಂಬ ಭಯ ಆವರಿಸಿದೆ. ಮೊದಲನೇ ಅಲೆಯ ಏಟಿನಿಂದ ಚೇತರಿಕೆ ಕಾಣುವ ಹೊತ್ತಿನಲ್ಲೇ ಮತ್ತೆ ಯುರೋಪ್ ರಾಷ್ಟ್ರಗಳಿಗೆ ಕಂಟಕ ಎದುರಾಗಿದೆ. ಲಕ್ಷ ಲಕ್ಷ ಜನರಿಗೆ ಹೊಸದಾಗಿ ಕೊರೊನಾ ಆವರಿಸಿದೆ. ಪರಿಸ್ಥಿತಿ ಮತ್ತೆ ಕೈಮೀರಿ ಹೋಗಿದ್ದು, ಅಲ್ಲಿನ ಆಡಳಿತವನ್ನು ಕಂಗೆಡಿಸಿದೆ. ಜನರು ಹೊರಗೆ ಬರುವುದಕ್ಕೂ ಭಯಪಡುವ ಪರಿಸ್ಥಿತಿ ಇದೆ. ಇದೆಲ್ಲಾ ಯುರೋಪ್‌ನ ಆರ್ಥಿಕತೆಗೆ ಬಲವಾದ ಪೆಟ್ಟು ನೀಡುತ್ತಿದೆ.

ಅಮೆರಿಕ ಸರಿಹೋಗಲು ಸಾಧ್ಯವೇ..?

ಅಮೆರಿಕ ಸರಿಹೋಗಲು ಸಾಧ್ಯವೇ..?

ಕೊರೊನಾ ಹಾವಳಿ ಯುರೋಪ್‌ಗೆ ಸೀಮಿತವಾಗಿಲ್ಲ, ಉತ್ತರ ಅಮೆರಿಕದಲ್ಲೂ ಡೆಡ್ಲಿ ಕೊರೊನಾ ಅಬ್ಬರ ಜೋರಾಗಿದೆ. ಅದರಲ್ಲೂ ಅಮೆರಿಕ ಸಂಯುಕ್ತ ಸಂಸ್ಥಾನ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದೆ. ನಿತ್ಯ 1 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಕನ್ಫರ್ಮ್ ಆಗುತ್ತಿದೆ. ಪ್ರತಿದಿನ ಸರಾಸರಿ 1 ಸಾವಿರಕ್ಕೂ ಹೆಚ್ಚು ಜನ ಈ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಟ್ರಂಪ್ ಆಡಳಿತದ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಇದರ ನಡುವೆ ಚಳಿ ಕೂಡ ಹೆಚ್ಚಾಗುತ್ತಿರುವುದು ಸೋಂಕು ಹರಡುವಿಕೆಗೆ ಬಲ ನೀಡಿದೆ. ಇಂತಹ ವಾತಾವರಣದಲ್ಲಿ ಕೊರೊನಾ ಅಬ್ಬರಿಸುವುದು ಸುಲಭ. ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞರ ಎಚ್ಚರಿಕೆ ಪ್ರಕಾರ ಮುಂದಿನ ಕೆಲವು ವಾರಗಳಲ್ಲಿ ಪರಿಸ್ಥಿತಿ ಇನ್ನೂ ಭಯಾನಕ ಸ್ವರೂಪ ಪಡೆಯಲಿದೆ.

ಆಸ್ಪಿರಿನ್ ಕೊವಿಡ್ 19ಗೆ ಸಂಭಾವ್ಯ ಔಷಧ: ಯುಕೆಯಲ್ಲಿ ಅಧ್ಯಯನಆಸ್ಪಿರಿನ್ ಕೊವಿಡ್ 19ಗೆ ಸಂಭಾವ್ಯ ಔಷಧ: ಯುಕೆಯಲ್ಲಿ ಅಧ್ಯಯನ

ವ್ಯಾಕ್ಸಿನ್ ಯಾವಾಗ ಸಿಗುತ್ತೆ ಸ್ವಾಮಿ..?

ವ್ಯಾಕ್ಸಿನ್ ಯಾವಾಗ ಸಿಗುತ್ತೆ ಸ್ವಾಮಿ..?

ಹೌದು, ಇದು ಯುರೋಪ್ ಹಾಗೂ ಅಮೆರಿಕದ ಬಹುಪಾಲು ಜನರ ಮಾತಾಗಿದೆ. ಸಾಕು ಸಾಕು ಕೊರೊನಾ ಹಾವಳಿಯಿಂದ ಬೇಸತ್ತಿದ್ದೇವೆ. ಈಗಲಾದರೂ ನಮಗೆ ಕೊರೊನಾ ವ್ಯಾಕ್ಸಿನ್ ಸಿಗಬಹುದಾ..? ಎಂಬ ಪ್ರಶ್ನೆ ಅವರನ್ನು ಆವರಿಸಿದೆ. ಏಕೆಂದರೆ ಈಗಿನ ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆಯ ಹೊರತಾಗಿ ಬೇರೆ ಯಾವುದೇ ಮದ್ದು ಡೆಡ್ಲಿ ವೈರಸ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಈಗಾಗಲೇ ಜಗತ್ತಿನ ದೈತ್ಯ ಕಂಪನಿಗಳು ವ್ಯಾಕ್ಸಿನ್ ಸಕ್ಸಸ್ ಆಗಿದೆ ಅಂತಾ ಹೇಳಿದ್ದರೂ, ಅದನ್ನ ಮಾರುಕಟ್ಟೆಗೆ ಯಾವಾಗ ತರುತ್ತವೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದು ಅಮೆರಿಕನ್ನರು ಹಾಗೂ ಯುರೋಪಿಯನ್ನರ ಚಿಂತೆಗೆ ಕಾರಣವಾಗಿದೆ.

 ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

ಡಿಸೆಂಬರ್ 01ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 63,747,750ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,477,144ಕ್ಕೇರಿದೆ. ಒಟ್ಟಾರೆ, 44,143,939ಮಂದಿ ಗುಣಮುಖರಾಗಿದ್ದಾರೆ. ಒಟ್ಟು 18,126,667ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 105,918 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 45,621,083 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

English summary
Covid 19: After the Lockdown in England, the new cases of corona has fell down 30 percent of there population. This is show huge success of Britain’s 2nd lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X