ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮೊದಲು ಕಾಣಿಸಿಕೊಂಡಿದ್ದು ಯಾವಾಗ? ಅಧ್ಯಯನದಿಂದ ಸಿಕ್ತು ಉತ್ತರ!

|
Google Oneindia Kannada News

ಲಂಡನ್: ಡೆಡ್ಲಿ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಅದು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಎಂಬುದು ನಿಮಗೆಲ್ಲ ಗೊತ್ತಿರುವ ವಿಚಾರವೇ.

Recommended Video

ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸಿ ಎಂದ ನಾರಾಯಣ ಮೂರ್ತಿ ದಂಪತಿಗಳು | Infosys | Narayan & Sudha Murthy

ಆದರೆ, ಮಾರಣಾಂತಿಕ ನೋವೆಲ್ ಕೊರೊನಾ ವೈರಸ್ ಚೀನಾದಲ್ಲಿ ಕಳೆದ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆಯೇ ಹೊರಹೊಮ್ಮಿದ್ದು, ಈಗ ವಿಶ್ವದಾದ್ಯಂತ ಹರಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

7,500 ಕ್ಕೂ ಹೆಚ್ಚು ಕೋವಿಡ್-19 ಸೋಂಕಿತರ ಸ್ಯಾಂಪಲ್ ಗಳನ್ನು ಆಧರಿಸಿ ಅನುವಂಶಿಕ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ ನೋವೆಲ್ ಕೊರೊನಾ ವೈರಸ್ ಕಳೆದ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಚೀನಾದಲ್ಲಿ ಕಾಣಿಸಿಕೊಂಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

200 ಪುನರಾವರ್ತಿತ ರೂಪಾಂತರ

200 ಪುನರಾವರ್ತಿತ ರೂಪಾಂತರ

ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ನಲ್ಲಿನ ಜೆನೆಟಿಕ್ಸ್ ಇನ್ಸ್ಟಿಟ್ಯೂಟ್ ನ ವಿಜ್ಞಾನಿಗಳು ಈ ಹೊಸ ಕೊರೊನಾ ವೈರಸ್ - SARS-CoV2 ನ ಸುಮಾರು 200 ಪುನರಾವರ್ತಿತ ರೂಪಾಂತರಗಳನ್ನು ಗಮನಿಸಿದ್ದಾರೆ. ಜೊತೆಗೆ ವೈರಾಣು ಹರಡುವಾಗ ಮಾನವನ ದೇಹದಲ್ಲಿ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಿದ್ದಾರೆ.

ರೋಗ ಆರಂಭವಾಗಿದ್ದು ಯಾವಾಗ.?

ರೋಗ ಆರಂಭವಾಗಿದ್ದು ಯಾವಾಗ.?

''ಅಕ್ಟೋಬರ್ 6, 2019 ರಿಂದ ಡಿಸೆಂಬರ್ 11, 2019 ರ ಮಧ್ಯೆ ಕೋವಿಡ್-19 ಶುರುವಾಗಿದೆ ಎಂಬುದು ಫೈಲೋಜೆನೆಟಿಕ್ ಅಧ್ಯಯನದಿಂದ ತಿಳಿದುಬಂದಿದೆ. ಈ ಸಮಯದಲ್ಲಿ ವೈರಾಣು ಮನುಷ್ಯನ ದೇಹ ಸೇರಿಕೊಂಡಿದೆ'' ಎಂದು ಜರ್ನಲ್ ಇನ್ಫೆಕ್ಷನ್, ಜೆನೆಟಿಕ್ಸ್ ಅಂಡ್ ಎವೊಲ್ಯೂಷನ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ.

ಫ್ರಾನ್ಸ್ ನಲ್ಲೂ ಡಿಸೆಂಬರ್ ನಲ್ಲೇ ಕೊರೊನಾ

ಫ್ರಾನ್ಸ್ ನಲ್ಲೂ ಡಿಸೆಂಬರ್ ನಲ್ಲೇ ಕೊರೊನಾ

ಫ್ರಾನ್ಸ್ ನಲ್ಲಿ ಒಬ್ಬ ವ್ಯಕ್ತಿಗೆ ಡಿಸೆಂಬರ್ 27 ರಂದು ಕೋವಿಡ್-19 ಸೋಂಕು ತಗುಲಿರುವುದು ಫ್ರೆಂಚ್ ವಿಜ್ಞಾನಿಗಳ ಅಧ್ಯಯನದಲ್ಲಿ ಕಂಡುಬಂದಿದೆ. ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸದ ವಿಶ್ವ ಆರೋಗ್ಯ ಸಂಸ್ಥೆ, ಆರಂಭಿಕ ಅನುಮಾನಾಸ್ಪದ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಎಲ್ಲಾ ದೇಶಗಳನ್ನೂ ಒತ್ತಾಯಿಸಿದೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ಕಳೆದ ವರ್ಷ ಕಾಣಿಸಿಕೊಂಡ ಕೊರೊನಾ ವೈರಸ್ ಈಗಲೂ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುತ್ತಿದೆ. ಪ್ರಪಂಚದಾದ್ಯಂತ ಇಲ್ಲಿಯವರೆಗೂ 39,16,338 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, 13,43,054 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈವರೆಗೂ 270,711 ಕೊರೊನಾಗೆ ಬಲಿಯಾಗಿದ್ದಾರೆ. 48,958 ಜನರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

English summary
Coronavirus Pandemic started between October 6 and December 11 2019: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X