ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ.. ಎಚ್ಚರ.. ಕೊರೊನಾ ಸುಲಭವಾಗಿ ಸಾಯೋದಿಲ್ಲ

|
Google Oneindia Kannada News

ಕೊರೊನಾ ಸಾಂಕ್ರಾಮಿಕ ರೋಗ ಅಷ್ಟು ಸುಲಭವಾಗಿ ಭೂಮಿ ಬಿಟ್ಟು ತೊಲುಗುವುದಿಲ್ಲ ಎನ್ನುವ ಮೂಲಕ ತಜ್ಞರು ಶಾಕ್ ಕೊಟ್ಟಿದ್ದಾರೆ. ಬ್ರಿಟನ್ ಮೂಲದ ವಿಜ್ಞಾನಿಗಳ ಈ ಅಭಿಪ್ರಾಯ ತೀವ್ರ ಸಂಚಲನ ಸೃಷ್ಟಿಸಿದೆ. ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 4 ಕೋಟಿ ಗಡಿದಾಟಿದ ಬೆನ್ನಲ್ಲೇ ವಿಜ್ಞಾನಿಗಳು ಆಘಾತಕಾರಿ ಸುದ್ದಿ ಹೊರಹಾಕಿದ್ದಾರೆ.

ಜಗತ್ತಿನಿಂದ ಕೊರೊನಾ ವೈರಸ್ ಅಷ್ಟು ಸುಲಭವಾಗಿ ಮರೆಯಾಗಲು ಸಾಧ್ಯವಿಲ್ಲ. ಲಸಿಕೆ ಸಂಶೋಧನೆ ಸಕ್ಸಸ್ ಕಂಡರೂ ಕೊರೊನಾ ವೈರಸ್ ನಿಯಂತ್ರಣ ಸಾಧ್ಯವಷ್ಟೇ ಆದರೆ ನಿರ್ಮೂಲನೆ ಮಾಡಲು ಆಗದು ಎಂದಿದ್ದಾರೆ ತಜ್ಞರು. ಬ್ರಿಟನ್‌ನಲ್ಲಿ ಕೊರೊನಾ ಲಸಿಕೆ ಸಂಶೋಧನೆ ಭರದಿಂದ ಸಾಗಿದೆ. ಮತ್ತೊಂದು ಕಡೆ ಚಳಿಗಾಲದ ಹಿನ್ನೆಲೆ 2ನೇ ಅಲೆಯ ಹೊಡೆತಕ್ಕೆ ಸಿಲುಕಿ ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳು ನಲುಗಿ ಹೋಗಿವೆ. ಈ ಸಂದಿಗ್ಧ ಸಂದರ್ಭದಲ್ಲಿ ವಿಜ್ಞಾನಿಗಳು ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ.

ಆರೋಗ್ಯವಂತ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಲಸಿಕೆ ಪ್ರಯೋಗಆರೋಗ್ಯವಂತ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಲಸಿಕೆ ಪ್ರಯೋಗ

ಅಲ್ಲದೆ ಕೊರೊನಾ ಸೋಂಕಿನ ಬಗ್ಗೆ ಲಘುವಾಗಿ ಪರಿಗಣಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬ ಸಂದೇಶವನ್ನು ಬ್ರಿಟನ್ ಮೂಲದ ತಜ್ಞರು ಜಗತ್ತಿಗೆ ರವಾನಿಸಿದ್ದು, ಜಗತ್ತು ಮತ್ತೊಂದು ಬೆಚ್ಚಿಬಿದ್ದಿದೆ.

ಲಸಿಕೆ ನಂಬಿ ಕೂತರೆ ಸ್ಮಶಾನ..!

ಲಸಿಕೆ ನಂಬಿ ಕೂತರೆ ಸ್ಮಶಾನ..!

ಇನ್ನೇನು ಲಸಿಕೆ ಬಂದುಬಿಡುತ್ತೆ, ಕೊರೊನಾ ಈ ಭೂಮಿಯನ್ನೇ ಬಿಟ್ಟು ತೊಲಗುತ್ತೆ ಎಂಬ ಊಹೆಗಳು ಇದ್ದರೆ ಅದನ್ನು ಈಗಲೇ ಮನಸ್ಸಿನಿಂದ ತೆಗೆದುಹಾಕಿ. ಏಕೆಂದರೆ ಈವರೆಗೂ ಯಾವುದೇ ಕೊರೊನಾ ಲಸಿಕೆಗಳು ಅಷ್ಟು ಪ್ರಮಾಣದಲ್ಲಿ ಪ್ರಭಾವ ಬೀರುತ್ತಿಲ್ಲ. ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ ತೊಲಗುತ್ತೆ ಎಂಬುದು ಭ್ರಮೆ, ಲಸಿಕೆ ಮೂಲಕ ಸದ್ಯಕ್ಕೆ ಅದನ್ನ ನಿಯಂತ್ರಿಸಬಹುದು. ಲಸಿಕೆ ಬಂದ ನಂತರವೂ ಹಲವು ವರ್ಷಗಳ ಕಾಲ ಕೊರೊನಾ ಭೂಮಿ ಮೇಲೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಇದ್ದು ಜೀವ ಉಳಿಸಿಕೊಳ್ಳಿ ಎಂದು ಬ್ರಿಟನ್‌ ತಜ್ಞರು ಜಗತ್ತಿಗೆ ಸಲಹೆ ನೀಡಿದ್ದಾರೆ.

2ನೇ ಅಲೆಗೆ ತತ್ತರಿಸಿದ ಯುರೋಪ್

2ನೇ ಅಲೆಗೆ ತತ್ತರಿಸಿದ ಯುರೋಪ್

ಕೆಲ ತಿಂಗಳ ಹಿಂದೆ ಯುರೋಪ್ ರಾಷ್ಟ್ರಗಳ ಸ್ಥಿತಿ ನಿಮಗೆ ನೆನಪಿರಬಹುದು. ಅದರಲ್ಲೂ ಇಟಲಿ ಮತ್ತು ಸ್ಪೇನ್ ಪರಿಸ್ಥಿತಿ ಮರೆಯಲು ಸಾಧ್ಯವಿಲ್ಲ. ಹೀಗೆ ಒಂದೆರಡು ತಿಂಗಳು ಕಣ್ಣಮುಂದೆ ನರಕ ಕಂಡಿದ್ದ ಯುರೋಪ್‌ನ ಈ ದೇಶಗಳು, ಮತ್ತೆ ಬೆಚ್ಚಿಬಿದ್ದಿವೆ. ಉತ್ತರ ಧ್ರುವಕ್ಕೆ ಸಮೀಪದಲ್ಲಿರುವ ಈ ದೇಶಗಳಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗೆ ತಲುಪುತ್ತದೆ. ಇದು ಕೊರೊನಾ ಉಲ್ಬಣಿಸಲು ಸೂಕ್ತ ವಾತಾವರಣ. ಹೀಗೆ ಯುರೋಪ್‌ನಲ್ಲಿ ಕೊರೊನಾ ಮತ್ತೊಮ್ಮೆ ಆಟಾಟೋಪ ತೋರಿಸುತ್ತಿದೆ. ಕಳೆದ 1 ವಾರದಿಂದಲೇ 10, 20 ಸಾವಿರ ಕೇಸ್‌ಗಳು ಸ್ಪೇನ್, ಇಟಲಿ, ಫ್ರಾನ್ಸ್‌ನಲ್ಲಿ ದಾಖಲಾಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಸಾಧ್ಯತೆ ಇದೆ.

ಬ್ರಿಟನ್ ಪಾಡು ಯಾರಿಗೂ ಬೇಡ..!

ಬ್ರಿಟನ್ ಪಾಡು ಯಾರಿಗೂ ಬೇಡ..!

ದ್ವೀಪರಾಷ್ಟ್ರ ಬ್ರಿಟನ್‌ನಲ್ಲಿ ಬರೀ ಚಳಿ ಇರುವುದಿಲ್ಲ, ಅಲ್ಲಿನ ವಾತಾವರಣ ಮೈಕೊರೆಯುವಂತೆ ಮಾಡುತ್ತದೆ. ಇಷ್ಟು ಪ್ರಮಾಣದ ಚಳಿ ಎದುರಾದಾಗ ಸಾಮಾನ್ಯವಾಗಿಯೇ ಜನರು ಆಸ್ಪತ್ರೆ ಸೇರುತ್ತಿದ್ದರು. ಈಗ ಕೇಳಬೇಕ, ಚಳಿ ಜೊತೆ ಕೊರೊನಾ ಬೇರೆ ಬಂದು ಅಪ್ಪಳಿಸಿದೆ. ಹೀಗಾಗಿ ಬ್ರಿಟನ್‌ನಲ್ಲಿ ಸೋಂಕಿಗೆ ತುತ್ತಾಗುವವರು ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿನ ಸರ್ಕಾರದ ಬುಡ ಅಲುಗಾಡುವಂತೆ ಮಾಡಿದೆ. ಮುಂದಿನ ಪರಿಸ್ಥಿತಿ ಹೇಗಪ್ಪಾ ಅಂತಾ ಆ ದೇಶದ ಜನ ನಡುಗುತ್ತಿದ್ದಾರೆ. ಬ್ರಿಟನ್‌ನಲ್ಲಿ ಈವರೆಗೂ 7 ಲಕ್ಷ 90 ಸಾವಿರ ಜನರಿಗೆ ಕೊರೊನಾ ಕನ್ಫರ್ಮ್ ಆಗಿದ್ದರೆ, 44 ಸಾವಿರ ಬ್ರಿಟನ್ ನಿವಾಸಿಗಳು ಈ ಡೆಡ್ಲಿ ವೈರಸ್‌ಗೆ ಬಲಿಯಾಗಿದ್ದಾರೆ.

ಮುನ್ನೆಚ್ಚರಿಕೆ ಇಲ್ಲದಿದ್ದರೆ ಸಂಕಷ್ಟ ಪಕ್ಕಾ..!

ಮುನ್ನೆಚ್ಚರಿಕೆ ಇಲ್ಲದಿದ್ದರೆ ಸಂಕಷ್ಟ ಪಕ್ಕಾ..!

ಲಸಿಕೆ ಇನ್ನೂ ಸಿಕ್ಕಿಲ್ಲ, ಸದ್ಯಕ್ಕೆ ಸಿಗುವ ಹಾಗೆ ಕಾಣುತ್ತಿಲ್ಲ. ಹೀಗಿದ್ದರೂ ಇನ್ನೆರಡು ತಿಂಗಳಲ್ಲಿ ನಾವು ಲಸಿಕೆಯ ಸಂಶೋಧನೆ ಮುಗಿಸಬೇಕು. ಅದರಲ್ಲಿ ಯಶಸ್ಸು ಕಂಡು ನಮ್ಮ ಪ್ರಜೆಗಳಿಗೆ ನೀಡಬೇಕು ಎಂದು ತಜ್ಞರು ತಮ್ಮ ವರದಿಯಲ್ಲಿ ಬ್ರಿಟನ್ ಸರ್ಕಾರಕ್ಕೆ ತಿಳಿಸಿದ್ದಾರೆ. ಅಲ್ಲದೆ ಚಳಿಗಾಲದಲ್ಲಿ ಕೊರೊನಾ ಕಂಟ್ರೋಲ್‌ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅತ್ಯಗತ್ಯ, ಕೇರ್‌ಲೆಸ್ ಮಾಡಿದರೆ ಮುಂದೆ ಭಾರಿ ದೊಡ್ಡ ಅನಾಹುತವೇ ಎದುರಾಗಲಿದೆ ಎಂದಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಜೊತೆ ಜನರು ಗುಂಪುಗೂಡದಂತೆ ಮುನ್ನೆಚ್ಚರಿಕೆ ಅಗತ್ಯ ಎಂಬ ಅಂಶಗಳನ್ನೂ ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ.

ಬ್ರಿಟನ್ ಸರ್ಕಾರ ಒಳ್ಳೆಯದನ್ನೇ ಮಾಡಿದೆ..!

ಬ್ರಿಟನ್ ಸರ್ಕಾರ ಒಳ್ಳೆಯದನ್ನೇ ಮಾಡಿದೆ..!

ಇದೇ ವರದಿಯಲ್ಲಿ ತಜ್ಞರು ಬ್ರಿಟನ್ ಸರ್ಕಾರದ ಕ್ರಮ ಕೊಂಡಾಡಿದ್ದಾರೆ. ಕೊರೊನಾ ವ್ಯಾಕ್ಸಿನ್ ಸಂಶೋಧನೆ ಸೇರಿದಂತೆ ಕೊರೊನಾ ಸೋಂಕು ನಿರ್ಮೂಲನೆಗೆ ಬೇಕಾದ ಕ್ರಮಗಳಿಗೆ ಬ್ರಿಟನ್ ಸರ್ಕಾರ ಪ್ರಾಶಸ್ತ್ಯ ನೀಡಿದೆ. ಇದು ಬ್ರಿಟನ್‌ಗೂ ಒಳ್ಳೆಯದೆ, ನಾವು ಆದಷ್ಟು ಬೇಗ ಕೊರೊನಾ ಲಸಿಕೆ ಕಂಡುಹಿಡಿಯಲು ಯಶಸ್ವಿಯಾದರೆ ನಮ್ಮ ಪ್ರಜೆಗಳ ಜೊತೆಗೆ ಇಡೀ ಜಗತ್ತಿಗೆ ಲಸಿಕೆ ಹಂಚಬಹುದು. ಈ ಮೂಲಕ ಕೊರೊನಾ ಸೋಂಕಿನ ವಿರುದ್ಧ ಬ್ರಿಟನ್ ಮುಂಚೂಣಿಯಲ್ಲಿ ನಿಂತು ಹೋರಾಡಿದಾಂತಾಗುತ್ತದೆ ಎಂದಿದ್ದಾರೆ ಸಂಶೋಧಕರು. ಈಗಾಗಲೇ 5-6 ಕೊರೊನಾ ಲಸಿಕೆಗಳ ಸಂಶೋಧನೆಗೆ ಬ್ರಿಟನ್ ಭಾರಿ ಪ್ರಮಾಣದ ಹಣ ನೀಡಿದೆ.

Recommended Video

Mohammed Siraj ಬೆಳೆದು ಬಂದ ಹಾದಿ , ಹಾಗು IPLಗೆ ಪ್ರವೇಶ ಹೇಗಿತ್ತು | Oneindia Kannada

English summary
UK experts warned Coronavirus cannot be easily eradicated from this world. Experts said vaccines can control the coronavirus but it is impossible to eradicate it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X