ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್‌: 2009ರ ಬಳಿಕ ಭಾರೀ ಉದ್ಯೋಗ ನಷ್ಟ ಕಂಡ ಇಂಗ್ಲೆಂಡ್

|
Google Oneindia Kannada News

ಲಂಡನ್, ಆಗಸ್ಟ್‌ 11: ಕೊರೊನಾವೈರಸ್ ಜಗತ್ತಿನಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವುದರ ಜೊತೆಗೆ ಕೋಟ್ಯಾಂತರ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ಕೊರೊನಾ ಬಿಕ್ಕಟ್ಟು ಇಂಗ್ಲೆಂಡ್‌ನಲ್ಲೂ ಭಾರೀ ಉದ್ಯೋಗ ನಷ್ಟಕ್ಕೆ ಕಾರಣವಾಗಿದ್ದು ಜೂನ್‌ವರೆಗಿನ ಮೂರು ತಿಂಗಳಿನಲ್ಲಿ ಕೆಲಸ ಮಾಡುವವರ ಸಂಖ್ಯೆ 220,000 ರಷ್ಟು ಕುಸಿಯಿತು ಎಂದು ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ತಿಳಿಸಿದೆ.

2009ರ ಬಳಿಕ ಬ್ರಿಟನ್‌ನಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಉದ್ಯೋಗ ನಷ್ಟಕ್ಕೆ ಕೊರೊನಾ ಕಾರಣವಾಗಿದೆ. ಸ್ವಯಂ ಉದ್ಯೋಗಿಗಳ ಸಂಖ್ಯೆಯು ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇವರಲ್ಲಿ ವಯಸ್ಸಾದ ಕಾರ್ಮಿಕರು ಹೆಚ್ಚಿದ್ದಾರೆ.

ಚಾಮರಾಜನಗರ; ಕೆಲಸ ಖಾಲಿ ಇದೆ, ಆ.14ರಂದು ನೇರ ಸಂದರ್ಶನಚಾಮರಾಜನಗರ; ಕೆಲಸ ಖಾಲಿ ಇದೆ, ಆ.14ರಂದು ನೇರ ಸಂದರ್ಶನ

ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಅಲ್ಲಿನ ಸರ್ಕಾರ ಬೃಹತ್ ಉದ್ಯೋಗ ಧಾರಣ ಯೋಜನೆಯನ್ನು ಹೊಂದಿತ್ತು. ಆದರೆ ಇದು ಅಕ್ಟೋಬರ್‌ಗೆ ಕೊನೆಗೊಳ್ಳುವುದರಿಂದ ಉದ್ಯೋಗ ನಷ್ಟ ಹೆಚ್ಚಾಗುವ ನಿರೀಕ್ಷೆಯಿದೆ.

Corona Impact: UK Suffers Biggest Job Losses Since 2009

ಸರ್ಕಾರದ ಬೆಂಬಲ ಕಾರ್ಯಕ್ರಮಗಳು ಕಾರ್ಯನಿರ್ವಹಿಸುತ್ತಿವೆ ಆದರೆ ಉದ್ಯೋಗ ನಷ್ಟ ಅನಿವಾರ್ಯ ಎಂದು ಅಂಕಿ ಅಂಶಗಳು ತೋರಿಸಿವೆ ಎಂದು ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಹೇಳಿದ್ದಾರೆ.

ನಿರುದ್ಯೋಗ ದರವು ಅನಿರೀಕ್ಷಿತವಾಗಿ ಶೇ. 3.9ರಷ್ಟಿದೆ. ಆದರೆ ಇದು ಕೆಲಸ ಹುಡುಕುವುದನ್ನು ಬಿಟ್ಟ ಮತ್ತು ನಿರುದ್ಯೋಗಿಗಳೆಂದು ಪರಿಗಣಿಸದ ಜನರ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ತಿಳಿಸಿದೆ.

ಇದಲ್ಲದೆ, ಜೂನ್‌ನಲ್ಲಿ ಸುಮಾರು 3,00,000 ಜನರು ತಾವು ಕೆಲಸದಿಂದ ದೂರವಿದ್ದರೂ ಮತ್ತು ಯಾವುದೇ ವೇತನವನ್ನು ಪಡೆಯದಿದ್ದರೂ ಉದ್ಯೋಗದಲ್ಲಿದ್ದಾರೆ ಎಂದು ಹೇಳಿದರು. ಇದು ನಿರುದ್ಯೋಗ ದರವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಒಎನ್‌ಎಸ್ ತಿಳಿಸಿದೆ.

ರಾಯಿಟರ್ಸ್ ಸಮೀಕ್ಷೆ ನಡೆಸಿದ ಅರ್ಥಶಾಸ್ತ್ರಜ್ಞರು ನಿರುದ್ಯೋಗ ದರವು 4.2% ಕ್ಕೆ ಏರಿಕೆಯಾಗಬಹುದೆಂದು ನಿರೀಕ್ಷಿಸಿದ್ದರು.

ಕಳೆದ ವಾರ, ಬ್ಯಾಂಕ್ ಆಫ್ ಇಂಗ್ಲೆಂಡ್ ಈ ವರ್ಷದ ಕೊನೆಯಲ್ಲಿ ನಿರುದ್ಯೋಗ ದರವು ಶೇ. 7.5 ಕ್ಕೆ ತಲುಪಲಿದೆ ಎಂದು ಮುನ್ಸೂಚನೆ ನೀಡಿದೆ.

English summary
Covid-19 impact The number of people in work in Britain fell by 2,20,000 in the three months to June, the most since 2009
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X