ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಿಹಾಸಿಕ ಸಮಾರಂಭದಲ್ಲಿ ಬ್ರಿಟನ್ ರಾಜನಾದ ಮೂರನೇ ಚಾರ್ಲ್ಸ್

|
Google Oneindia Kannada News

ಲಂಡನ್ ಸೆಪ್ಟೆಂಬರ್ 10: ಶನಿವಾರ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಮೂರನೇ ಚಾರ್ಲ್ಸ್ ಅವರನ್ನು ಅಧಿಕೃತವಾಗಿ ಬ್ರಿಟನ್‌ನ ರಾಜನಾಗಿ ಘೋಷಿಸಲಾಗಿದೆ. 96 ನೇ ವಯಸ್ಸಿನಲ್ಲಿ ರಾಣಿ ಎರಡನೇ ಎಲಿಜಬೆತ್ ಗುರುವಾರ ನಿಧನರಾದ ಬಳಿಕ ಅವರ ಹಿರಿಯ ಪುತ್ರ ಮೂರನೇ ಚಾರ್ಲ್ಸ್ ಬ್ರಿಟನ್ ರಾಜನ ಪಟ್ಟಕ್ಕೆ ಏರಿದ್ದಾರೆ. ರಾಣಿ ಎರಡನೇ ಎಲಿಜಬೆತ್ ನಿಧನದ ಬಳಿಕ ಸಂತಾಪ ಸೂಚಕವಾಗಿ ಕೆಳಗಿಳಿಸಲಾಗಿದ್ದ ಧ್ವಜಗಳನ್ನು ಚಾರ್ಲ್ಸ್ ಕೌನ್ಸಿಲ್ ಸಭೆಗೆ ಪ್ರವೇಶದ ನಂತರ ಧ್ವಜಗಳು ಪೂರ್ಣವಾಗಿ ಹಾರಿಸಲಾಯಿತು.

ರಾಣಿ ಎಲಿಜಬೆತ್ II ನಿಧನ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆ ಅಕ್ಸೆಶನ್ ಕೌನ್ಸಿಲ್‌ನ ಸಭೆಯಲ್ಲಿ ಚಾರ್ಲ್ಸ್ III ಅಧಿಕೃತವಾಗಿ ದೊರೆ ಎಂದು ಘೋಷಿಸಲಾಯಿತು ಎಂದು ಬಕಿಂಗ್‌ಹ್ಯಾಮ್ ಅರಮನೆ ತಿಳಿಸಿದೆ. ರಾಣಿ ಎಲಿಜಬೆತ್ II ರ ಉತ್ತರಾಧಿಕಾರವನ್ನು ಮೇಲ್ವಿಚಾರಣೆ ಮಾಡುವ ಔಪಚಾರಿಕ ಸಂಸ್ಥೆಯು ಬೆಳಗ್ಗೆ 10:00 ರಿಂದ (0900 GMT) ಸಭೆ ಸೇರಿತ್ತು, ಲಂಡನ್‌ನ ಸೇಂಟ್ ಜೇಮ್ಸ್ ಅರಮನೆಯ ಬಾಲ್ಕನಿಯಿಂದ ಮೊದಲ ಸಾರ್ವಜನಿಕ ಘೋಷಣೆ ಮಾಡಲಾಯಿತು.

ಬ್ರಿಟನ್‌ನ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ ಅವರು ಗುರುವಾರ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು, ಅವರ ನಂತರ ಅವರ ಮಗ ರಾಜರಾಗುತ್ತಿದ್ದಾರೆ. ರಾಣಿಯ ಮರಣದ ನಂತರ ತಕ್ಷಣವೇ ಚಾರ್ಲ್ಸ್ ಪಟ್ಟವನ್ನು ಅಲಂಕಾರ ಮಾಡಿದ್ದಾರೆ.

charles was formally proclaimed king on saturday

ಹೊಸ ರಾಜ ಚಾರ್ಲ್ಸ್ III ಈ ಹೆಸರನ್ನು ಹಂಚಿಕೊಂಡ ಮೂರನೇ ಬ್ರಿಟಿಷ್ ದೊರೆ. ಚಾರ್ಲ್ಸ್ I ಮರಣದಂಡನೆಗೆ ಒಳಗಾದ ಏಕೈಕ ಬ್ರಿಟಿಷ್ ದೊರೆ, ​​ಚಾರ್ಲ್ಸ್ I ರ ಆಳ್ವಿಕೆಯು ಕ್ರೂರ ಅಂತರ್ಯುದ್ಧ ಮತ್ತು ರಾಜಮನೆತನದ ನಿರ್ಮೂಲನೆಗೆ ಕಾರಣವಾಯಿತು.

ಕಿಂಗ್ ಚಾರ್ಲ್ಸ್ II ವ್ಯಕ್ತಿ ಅಂತರ್ಯುದ್ಧದ ಸಮಯದಲ್ಲಿ ತನ್ನ ತಂದೆಯೊಂದಿಗೆ ಯುದ್ಧದಲ್ಲಿ ಸೇರಿಕೊಂಡನು. ಆದರೆ ಸೋಲು ಅನಿವಾರ್ಯವೆಂದು ಸ್ಪಷ್ಟವಾದ ಕಾರಣ ಇಂಗ್ಲೆಂಡ್ ಅನ್ನು ತೊರೆದು, 1649 ರಲ್ಲಿ ಹೇಗ್‌ಗೆ ತೆರಳಿದ್ದರು ತನ್ನ ತಂದೆಯ ಮರಣದಂಡನೆಯ ನಂತರ ಇಂಗ್ಲೆಂಡ್‌ನಲ್ಲಿ ರಾಜಪ್ರಭುತ್ವವನ್ನು ರದ್ದುಗೊಳಿಸಿದರೂ, ಜನವರಿ 1, 1651 ರಂದು ಚಾರ್ಲ್ಸ್ ಸ್ಕಾಟ್ಲೆಂಡ್‌ನ ರಾಜನಾಗಿ ಪಟ್ಟಾಭಿಷೇಕಗೊಂಡನು.

charles was formally proclaimed king on saturday

ಶುಕ್ರವಾರದ ಭಾವನಾತ್ಮಕ ಮೊದಲ ಭಾಷಣದಲ್ಲಿ ಪ್ರಿನ್ಸ್ ಚಾರ್ಲ್ಸ್ ತನ್ನ ಪ್ರೀತಿಯ ತಾಯಿ ಎಲಿಜಬೆತ್ ಸೇವೆಯ ಜೀವನವನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿದರು. ಚಾರ್ಲ್ಸ್ ಏಳು ದಶಕಗಳ ಆಳ್ವಿಕೆಯಲ್ಲಿ ತನ್ನ ತಾಯಿಯ "ಅಚಲವಾದ ಭಕ್ತಿ" ಯನ್ನು ಶ್ಲಾಘಿಸಿ ಅವರ ಆಳ್ವಿಕೆಗೆ ಧ್ವನಿಗೂಡಿಸಿದರು.

"ರಾಣಿ ಎಲಿಜಬೆತ್ ಅವರ ಜೀವನದಲ್ಲಿ ಉತ್ತಮವಾಗಿ ಬದುಕಿದರು. ಉತ್ತಮ ಆಡಳಿತ ನೀಡಿದವರು. ಹೀಗಾಗಿ ಆಕೆಯ ಮರಣದ ನಂತರ ಆಳವಾದ ಶೋಕ ವ್ಯಕ್ತವಾಯಿತು. ಆ ಸೇವೆಯ ಭರವಸೆಯನ್ನು ನಾನು ಇಂದು ನಿಮ್ಮೆಲ್ಲರಿಗೂ ನೀಡುತ್ತೇನೆ" ಎಂದು ಅವರು ಹೇಳಿದರು. ರಾಣಿಯ ಮರಣದ ನಂತರ ಕಿಂಗ್ ಚಾರ್ಲ್ಸ್ III (73) ಬ್ರಿಟನ್ ರಾಜನಾದರು.

English summary
Charles III is set to be formally proclaimed king at a historic ceremony at St James's Palace on Saturday as flags were lowered in mourning for Queen Elizabeth II who passed away on Thursday at the age of 96.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X