ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಮಾದರಿಯ ಕೊರೊನಾ ವೈರಸ್‌ಗಳಿಗೆ ಸಂಭಾವ್ಯ ಲಸಿಕೆ ಸಿದ್ಧ?

|
Google Oneindia Kannada News

ಲಂಡನ್, ಆಗಸ್ಟ್ 26: ಕೊವಿಡ್ 19 ಮಾತ್ರವಲ್ಲದೆ ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಎಲ್ಲಾ ಮಾದರಿಯ ಕೊರೊನಾ ರೋಗಾಣುಗಳಿಗೆ ಸಂಭಾವ್ಯ ಲಸಿಕೆ ಪ್ರಯೋಗಕ್ಕೆ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯ ಚಿಂತನೆ ನಡೆಸಿದೆ.

Recommended Video

ಟೀಕೆಗಳಿಗೆ ಉತ್ತರ ನೀಡುವ ಅವಕಾಶ ಕಳೆದುಕೊಂಡಿತೇ Congress‌? | Oneindia Kannada

ಕೊವಿಡ್‌-19 ವೈರಾಣುವಿನ 3ಡಿ ಮಾದರಿಯ ಮೂಲಕ, ಈ ವೈರಾಣುವಿಗೇ ಹೋಲುವ ಇತರೆ ಕೊರೊನಾ ವೈರಾಣುಗಳನ್ನು ಅಧ್ಯಯನ ನಡೆಸಿ, ಮುಂದೆ ಪ್ರಾಣಿಗಳಿಂದ ಹರಡಬಹುದಾದ ವೈರಸ್‌ನ್ನು ತಡೆಯುವುದೇ ಇದರ ಉದ್ದೇಶವಾಗಿದೆ' ಎಂದು ಕೇಂಬ್ರಿಜ್‌ನ ಭಾಗವಾಗಿರುವ ಡಿಯೊಸಿನ್‌ವ್ಯಾಕ್ಸ್‌ ಕಂಪನಿಯ ಸಂಸ್ಥಾಪಕ ಪ್ರೊ.ಜೋನಥನ್‌ ಹಿನೀ ಹೇಳಿದರು.

ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್

ಬಾವಲಿಗಳಿಂದ ಹರಡುವ ಕೊರೊನಾ ವೈರಾಣು ಸೇರಿದಂತೆ ಸಾರ್ಸ್‌ ರೀತಿಯ ಎಲ್ಲ ಮಾದರಿಯ ಕೊರೊನಾ ವೈರಾಣುಗಳ ಧಾತುವಿನ ಅಂಶಗಳನ್ನು ಅಧ್ಯಯನ ನಡೆಸಿ ಹೊಸ ಸಂಭಾವ್ಯ ಲಸಿಕೆ 'ಡಿಯೋಸ್‌‌-ಕೊವಾಕ್ಸ್‌ 2' ಅನ್ನು ತಯಾರಿಸಲಾಗಿದ್ದು, ಎಲ್ಲ ಹಂತದ ಪ್ರಯೋಗಗಳಲ್ಲಿ ಯಶಸ್ವಿಯಾದರೆ ಯಾವುದೇ ಚುಚ್ಚುಮದ್ದಿನ ಬಳಕೆ ಮಾಡದೆ 'ಜೆಟ್‌ ಇಂಜೆಕ್ಷನ್‌' ಮುಖಾಂತರ ಚರ್ಮದೊಳಗೆ ಸೇರಿಸಬಹುದು ಎಂದು ಕೇಂಬ್ರಿಡ್ಜ್ ವಿ.ವಿ ತಿಳಿಸಿದೆ.

Cambridge University Kicks Off Vaccine Race To Fight All Coronaviruses

ಅವರ ತಂಡವು ಸಿಂಥೆಟಿಕ್ಜೀನ್‌ಗಳಿಂದ ಎನ್‌ಕೋಡ್ ಮಾಡಲಾದ ಕಂಪ್ಯೂಟರ್ ರಚಿತ ಪ್ರತಿಜನಕ ರಚನೆಗಳನ್ನು ಅಭಿವೃದ್ಧಿಪಡಿಸಿದೆ. ಇದು ವೈರಸ್‌ನ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಲು ಮತ್ತು ಪ್ರಯೋಜನಕಾರಿ ಆಂಟಿವೈರಲ್ ಉತ್ಪಾದನೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

ಆಕ್ಸ್‌ಫರ್ಡ್ ಯೂನಿವರ್ಸಿಟಿಯು ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಹಂತದ ಪ್ರಯೋಗವನ್ನು ಭಾರತದಲ್ಲಿ ಆರಂಭಿಸಿದೆ.

English summary
The University of Cambridge on Wednesday confirmed plans to begin trials of a potential new vaccine not only against COVID-19 but all coronaviruses that may spill over from animals to humans in the future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X