ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದಿಗೆ ಬಿತ್ತು ಅರಮನೆಯ ಜಗಳ, ಇದು ಖಾಸಗಿ ವಿಷಯ ಎಂದ ರಾಣಿ

|
Google Oneindia Kannada News

ಬ್ರಿಟನ್ ರಾಜಮನೆತನದ ಮಾನ, ಮರ್ಯಾದೆ ಬೀದಿಗೆ ಬಿದ್ದಿದೆ. ಬ್ರಿಟನ್‌ನ ಪತ್ರಿಕೆಗಳಿಗೆ ಕೆಲವು ದಿನಗಳಿಂದ ಇದೇ ವಿಚಾರ ಹೆಡ್‌ಲೈನ್ ಆಗುತ್ತಿದೆ. ಅಂದಹಾಗೆ ಪ್ರಿನ್ಸ್‌ ಹ್ಯಾರಿ ಪತ್ನಿ ಮೆಘನ್‌ ಮಾರ್ಕೆಲ್ ಮಾಡಿರುವ ಜನಾಂಗೀಯ ತಾರತಮ್ಯ ಆರೋಪದ ಬಳಿಕ ಬಕಿಂಗ್‌ಹ್ಯಾಮ್ ಅರಮನೆ ತತ್ತರಿಸಿ ಹೋಗಿದೆ. ಇನ್ನು ಇದೇ ಮೊದಲ ಬಾರಿಗೆ ಮೆಘನ್‌ ಮಾರ್ಕೆಲ್ ಆರೋಪದ ಕುರಿತು ರಾಣಿ ಎಲಿಜಬೆತ್ ಪ್ರತಿಕ್ರಿಯಿಸಿದ್ದಾರೆ.

ಸಮಸ್ಯೆ ಖಾಸಗಿಯಾಗಿ ಬಗೆಹರಿಸುತ್ತೇವೆ ಎಂದು ರಾಣಿ ಎಲಿಜಬೆತ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರಮನೆಯ ಮಾಜಿ ಸೊಸೆ ಮೆಘನ್ ಆರೋಪದ ಬಗ್ಗೆ ಕಾಳಜಿ, ಕಳಕಳಿ ಇದೆ. ಮೊಮ್ಮಗ ಹ್ಯಾರಿ ಮತ್ತು ಪತ್ನಿ ಮೆಘನ್‌ಗೆ ಎಂತಹ ಸವಾಲುಗಳು ಎದುರಾಗಿದ್ದವು ಎಂಬುದನ್ನು ತಿಳಿದು ಇಡೀ ಕುಟುಂಬಕ್ಕೆ ದುಃಖವಾಗಿದೆ ಎಂದಿದ್ದಾರೆ.

ರಾಯಲ್ ವೆಡ್ಡಿಂಗ್: ಪ್ರಿನ್ಸ್ ಹ್ಯಾರಿ-ಮೇಘನ್ ಮದುವೆ ಸಂಭ್ರಮರಾಯಲ್ ವೆಡ್ಡಿಂಗ್: ಪ್ರಿನ್ಸ್ ಹ್ಯಾರಿ-ಮೇಘನ್ ಮದುವೆ ಸಂಭ್ರಮ

ಆದರೆ ಬಕಿಂಗ್‌ಹ್ಯಾಮ್ ಅರಮನೆಯ ಈ ಪ್ರಕಟಣೆಗೆ ಟೀಕೆಗಳು ಕೂಡ ವ್ಯಕ್ತವಾಗಿವೆ. ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಬ್ರಿಟನ್‌ನ ಮಾಧ್ಯಮಗಳು ಇದೇ ವಿಚಾರವನ್ನ ಕೆಲ ದಿನಗಳಿಂದ ಬಿಟ್ಟೂ ಬಿಡದೆ ತೋರಿಸುತ್ತಿವೆ. ಇದು ಬ್ರಿಟನ್ ರಾಣಿ ಎಲಿಜಬೆತ್ ಸೇರಿದಂತೆ ಬಕಿಂಗ್‌ಹ್ಯಾಮ್ ಅರಮನೆಗೆ ತೀವ್ರ ಮುಜಗರ ಉಂಟುಮಾಡಿದೆ.

ಅರಮನೆ ಬಿಟ್ಟು 1 ವರ್ಷದ ನಂತರ..!

ಅರಮನೆ ಬಿಟ್ಟು 1 ವರ್ಷದ ನಂತರ..!

ನಮಗೆ ಬಕಿಂಗ್‌ಹ್ಯಾಮ್ ಅರಮನೆ ಸಹವಾಸವೇ ಬೇಡ ಅಂತಾ ಮೆಘನ್‌ ಮಾರ್ಕೆಲ್ ಮತ್ತು ಪ್ರಿನ್ಸ್ ಹ್ಯಾರಿ ಹೊರಬಂದು ಸುಮಾರು 1 ವರ್ಷ ಕಳೆದಿದೆ. ಇದೇ ಸಂದರ್ಭದಲ್ಲಿ ವಿವಾದ ಕಿಡಿ ಧಗಧಗಿಸುತ್ತಿದೆ. 2020ರಲ್ಲಿ ಮೆಘನ್‌ ಮಾರ್ಕೆಲ್ ಹಾಗೂ ಪ್ರಿನ್ಸ್ ಹ್ಯಾರಿ ರಾಜಮನೆತನದ ಬಿರುದನ್ನು ತೊರೆದು ಸ್ವತಂತ್ರವಾಗಿ ಬದುಕುವ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಸುಮಾರು 1 ವರ್ಷದಿಂದ ಅವರು ಸ್ವತಂತ್ರರಾಗಿ ಬದುಕುತ್ತಿದ್ದಾರೆ. ಆದರೆ ಇದೀಗ ಖ್ಯಾತ ನಿರೂಪಕಿ ಓಫ್ರಾ ವಿನ್‌ಫ್ರೆಗೆ ನೀಡಿದ್ದ ಸಂದರ್ಶನದಲ್ಲಿ ಮೆಘನ್‌ ಮಾಡಿರುವ ಆರೋಪಗಳು ವಿವಾದ ಭುಗಿಲೇಳುವಂತೆ ಮಾಡಿದೆ.

ಬ್ರಿಟನ್ ರಾಜಮನೆತನಕ್ಕೆ ಆಘಾತ ನೀಡಿದ ಪ್ರಿನ್ಸ್ ಹ್ಯಾರಿ-ಮೇಘನ್ ದಂಪತಿಬ್ರಿಟನ್ ರಾಜಮನೆತನಕ್ಕೆ ಆಘಾತ ನೀಡಿದ ಪ್ರಿನ್ಸ್ ಹ್ಯಾರಿ-ಮೇಘನ್ ದಂಪತಿ

ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು..?

ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು..?

ಅಮೆರಿಕದ ಖ್ಯಾತ 'ಟಾಕ್‌ ಶೋ' ನಿರೂಪಕಿ ಓಫ್ರಾ ವಿನ್‌ಫ್ರೆಗೆ ನೀಡಿದ್ದ ಸಂದರ್ಶನದಲ್ಲಿ ಮೆಘನ್‌ ಹಲವು ಗಂಭೀರ ಆರೋಪಗಳನ್ನ ಮಾಡಿದ್ದರು. ಪ್ರಿನ್ಸ್‌ ಹ್ಯಾರಿಯನ್ನು ಮದುವೆಯಾಗಿ ಹೋದ ಬಳಿಕ, ತನಗೆದುರಾದ ಕಷ್ಟಗಳು ಮತ್ತು ಅರಮನೆಯಲ್ಲಿ ಅನುಭವಿಸಿದ ಜನಾಂಗೀಯ ತಾರತಮ್ಯ ನೀತಿಯ ಬಗ್ಗೆ ಸಂದರ್ಶನದ ವೇಳೆ ಅಳಲು ತೋಡಿಕೊಂಡಿದ್ದರು. ಅಲ್ಲದೆ ತನ್ನ ಮಗ ಹೊಟ್ಟೆಯಲ್ಲಿದ್ದಾಗ ಆತನ ಬಣ್ಣ ಯಾವುದಾಗಿರುತ್ತದೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ಆರೋಪಿಸಿದ್ದರು. ಮೆಘನ್‌ ಈ ರೀತಿ ಆರೋಪ ಮಾಡುತ್ತಿದ್ದಂತೆ ಇಡೀ ಜಗತ್ತು ಶಾಕ್‌ಗೆ ಒಳಗಾಗಿತ್ತು. ಒಂದಾನೊಂದು ಕಾಲದಲ್ಲಿ ಜಗತ್ತಿನ ಕೇಂದ್ರಬಿಂದು ಎಂದು ಕರೆಸಿಕೊಳ್ಳುತ್ತಿದ್ದ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಜನಾಂಗೀಯ ತಾರತಮ್ಯ ನಡೆದಿತ್ತು ಎಂಬ ಆರೋಪವೇ ಆಘಾತಕಾರಿ ವಿಚಾರವಾಗಿತ್ತು. ಹೀಗಾಗಿಯೇ ಮೆಘನ್ ಆರೋಪಕ್ಕೆ ಅರಮನೆ ಪ್ರತಿಕ್ರಿಯೆ ನೀಡಿದೆ.

ಬ್ರಿಟನ್ ಮೀಡಿಯಾಗಳಲ್ಲಿ ದೊಡ್ಡ ಸುದ್ದಿ..!

ಬ್ರಿಟನ್ ಮೀಡಿಯಾಗಳಲ್ಲಿ ದೊಡ್ಡ ಸುದ್ದಿ..!

ಬ್ರಿಟನ್‌ ಪತ್ರಿಕೆಗಳಲ್ಲಿ ಕಳೆದ ಕೆಲ ದಿನಗಳಿಂದ ಮೆಘನ್‌, ಪ್ರಿನ್ಸ್‌ ಹ್ಯಾರಿ ಹಾಗೂ ಬಕಿಂಗ್‌ಹ್ಯಾಮ್ ಪ್ಯಾಲೆಸ್ ರಾರಾಜಿಸುತ್ತಿದೆ. ಓಫ್ರಾ ವಿನ್‌ಫ್ರೆಗೆ ನೀಡಿದ್ದ ಸಂದರ್ಶನದಲ್ಲಿ ಮೆಘನ್‌ ಜನಾಂಗೀಯ ತಾರತಮ್ಯ ಆರೋಪ ಮಾಡುತ್ತಿದ್ದಂತೆ ಹಲವು ಆಯಾಮದಲ್ಲಿ ಸುದ್ದಿಗಳು ಪ್ರಕಟವಾಗಿವೆ. ಮತ್ತೊಂದು ಕಡೆ ವಿಶ್ಲೇಷಣೆಗಳಿಗೆ ಕೊರತೆ ಇಲ್ಲ. ಇದು ಇಳಿ ವಯಸ್ಸಿನಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಸೇರಿದಂತೆ ಇಡೀ ಬಕಿಂಗ್‌ಹ್ಯಾಮ್ ಪ್ಯಾಲೆಸ್ ನೆಮ್ಮದಿಯನ್ನೇ ಹಾಳು ಮಾಡಿದೆ. ನಮ್ಮ ಕುಟುಂಬದಲ್ಲಿ ಇಂತಹ ಘಟನೆ ನಡೆದಿತ್ತಾ ಎಂದು ಕುಟುಂಬಸ್ಥರಿಗೂ ಶಾಕ್‌ಗೆ ಆಗಿದೆಯಂತೆ.

ಬ್ರಿಟನ್ ರಾಜಕುಮಾರ ಹ್ಯಾರಿ ಸಮೋಸ ಕದ್ದಿದ್ದೇಕೆ?ಬ್ರಿಟನ್ ರಾಜಕುಮಾರ ಹ್ಯಾರಿ ಸಮೋಸ ಕದ್ದಿದ್ದೇಕೆ?

ಪಾರ್ಲಿಮೆಂಟ್‌ನಲ್ಲೂ ಬಿಸಿಬಿಸಿ ಚರ್ಚೆ..!

ಪಾರ್ಲಿಮೆಂಟ್‌ನಲ್ಲೂ ಬಿಸಿಬಿಸಿ ಚರ್ಚೆ..!

ಮೆಘನ್‌ ಮಾಡಿರುವ ಜನಾಂಗೀಯ ತಾರತಮ್ಯ ಆರೋಪದ ಪರ ಹಾಗೂ ವಿರುದ್ಧ ಚರ್ಚೆಗಳು ಬ್ರಿಟನ್‌ನಲ್ಲಿ ತೀವ್ರ ಕಾವು ಪಡೆದಿವೆ. ಕೆಲವರು ಮೆಘನ್‌ ವಿರುದ್ಧ ಕೋಪ ಹೊರಹಾಕುತ್ತಿದ್ದರೆ, ಇನ್ನೂ ಕೆಲವರು ಮೆಘನ್‌ ಪರ ನಿಂತಿದ್ದಾರೆ. ಇದೇ ವಿಚಾರವಾಗಿ ಬ್ರಿಟನ್ ಪಾರ್ಲಿಮೆಂಟ್‌ನಲ್ಲೂ ಚರ್ಚೆ ನಡೆದಿದೆ. ಘಟನೆ ಬಗ್ಗೆ ಬ್ರಿಟನ್ ಸಂಸದರು ಸದನದಲ್ಲಿ ಚರ್ಚೆ ನಡೆಸಿದ್ದಾರೆ. ಅದ್ರಲ್ಲೂ ಬಹುಪಾಲು ಮಹಿಳಾ ಸಂಸದರು ಮೆಘನ್ ಬೆಂಬಲಕ್ಕೆ ನಿಂತಿದ್ದಾರಂತೆ. ಹೀಗಾಗಿ ವಿವಾದಗಳಿಗೆ ಅಂತ್ಯ ಹಾಡಿ, ಖಾಸಗಿ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಬಕಿಂಗ್‌ಹ್ಯಾಮ್ ಪ್ಯಾಲೆಸ್ ಮುಂದಾಗಿದೆ ಎನ್ನಲಾಗುತ್ತಿದೆ.

English summary
Buckingham Palace gave a reply about Prince Harry and Meghan Markle’s explosive interview & Palace want to keep things private.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X