ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರ್ಕ್ ಹೊಟ್ಟೆಯಲ್ಲಿತ್ತು ಈಜಲು ಹೋದ ಪ್ರವಾಸಿಗನ ಕೈ

|
Google Oneindia Kannada News

ಲಂಡನ್, ನವೆಂಬರ್ 8: ಪತ್ನಿಯ 40ನೇ ಜನ್ಮದಿನವನ್ನು ಆಚರಿಸಲು ಫ್ರಾನ್ಸ್ ಪ್ರವಾಸ ಕೈಗೊಂಡಿದ್ದ ಬ್ರಿಟನ್ ವ್ಯಕ್ತಿ ಭಕ್ಷಕ ಶಾರ್ಕ್‌ಗೆ ಆಹಾರವಾದ ಭೀಕರ ಘಟನೆ ಶುಕ್ರವಾರ ವರದಿಯಾಗಿದೆ. ಹಿಂದೂ ಮಹಾಸಾಗರದ ಈಜಲು ಸುರಕ್ಷಿತವೆಂದು ಮಾಹಿತಿ ನೀಡಲಾಗಿದ್ದ ಸ್ಥಳಲ್ಲಿಯೇ ಶಾರ್ಕ್ ದಾಳಿ ನಡೆಸಿರುವುದು ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ.

ನಾಗರಿಕ ಸೇವೆಯ ಅಧಿಕಾರಿಯಾಗಿದ್ದ ಎಡಿನ್‌ಬರ್ಗ್ ನಿವಾಸಿ ರಿಚರ್ಡ್ ಮಾರ್ಟಿನ್ ಟರ್ನರ್ (44) ಶಾರ್ಕ್ ದಾಳಿಗೆ ಬಲಿಯಾದ ದುರ್ದೈವಿ. ಪತ್ನಿ ವೆರೈಟಿ ಟರ್ನರ್ ಜತೆ ಪ್ರವಾಸಕ್ಕೆ ತೆರಳಿದ್ದ ಅವರು, ನ.2ರಂದು ರೀಯೂನಿಯನ್ ಐಲ್ಯಾಂಡ್‌ನಲ್ಲಿ ಸ್ನಾರ್ಕೆಲಿಂಗ್ ಮಾಡುತ್ತಿದ್ದರು. ಇಲ್ಲಿ ಯಾವುದೇ ಅಪಾಯಕಾರಿ ಜಲಚರಗಳು ಇಲ್ಲ. ಹೀಗಾಗಿ ಈಜಾಡಲು ಸುರಕ್ಷಿತ ಎಂದು ಅಧಿಕಾರಿಗಳು ಪ್ರವಾಸಿಗರಿಗೆ ಅವಕಾಶ ನೀಡಿದ್ದರು.

 ದಕ್ಷಿಣ ಕೊರಿಯಾದಲ್ಲಿ ನಡೆಯುತ್ತೆ ಬದುಕಿದ್ದವರಿಗೆ ಅಂತ್ಯ ಸಂಸ್ಕಾರ! ದಕ್ಷಿಣ ಕೊರಿಯಾದಲ್ಲಿ ನಡೆಯುತ್ತೆ ಬದುಕಿದ್ದವರಿಗೆ ಅಂತ್ಯ ಸಂಸ್ಕಾರ!

ಆದರೆ ಸ್ನಾರ್ಕೆಲಿಂಗ್‌ಗೆ ತೆರಳಿದ್ದ ಟರ್ನರ್ ನಾಪತ್ತೆಯಾಗಿದ್ದರು. ಅವರು ಈಜಲು ತೆರಳಿದ್ದ ಭಾಗದಲ್ಲಿ ನಾಲ್ಕು ಶಾರ್ಕ್‌ಗಳು ಪತ್ತೆಯಾಗಿದ್ದವು. ಹಿಂದೂ ಮಹಾಸಾಗರದ ಫ್ರೆಂಚ್ ಇಲಾಖೆ ಈ ನಾಲ್ಕೂ ಶಾರ್ಕ್‌ಗಳನ್ನು ಸೆರೆಹಿಡಿದಿತ್ತು.

 British Tourist Eaten By Shark In Reunion Island

ನಾಲ್ಕೂ ಶಾರ್ಕ್‌ಗಳ ಹೊಟ್ಟೆ ಪರಿಶೀಲಿಸಿದಾಗ 13 ಅಡಿ ಉದ್ದದ ಟೈಗರ್‌ ಶಾರ್ಕ್ ಹೊಟ್ಟೆಯಲ್ಲಿ ಟರ್ನರ್ ಅವರ ರಕ್ತಸಿಕ್ತ ಕೈ ಕಾಣಿಸಿದೆ. ಅದರ ಬೆರಳಿನಲ್ಲಿದ್ದ ಉಂಗುರ ನೋಡಿ ಅವರ ಇದು ತಮ್ಮ ಪತಿಯದ್ದೇ ಕೈ ಎಂದು ಪತ್ನಿ ಗುರುತಿಸಿದ್ದಾರೆ.

 British Tourist Eaten By Shark In Reunion Island

ಈ ಶಾರ್ಕ್ ಹೊಟ್ಟೆಯಲ್ಲಿದ್ದ ಮಾಂಸದ ಇತರೆ ಭಾಗಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಲ್ಲಿ ಟರ್ನರ್ ಅವರಲ್ಲದೆ ಬೇರೆ ಯಾರಾದರೂ ಮನುಷ್ಯರ ಅಂಗಗಳು ಇರಬಹುದೇ ಎಂದು ಪರಿಶೀಲನೆ ಮಾಡಲಾಗುತ್ತಿದೆ.

English summary
A British tourist was eaten by shark in Reunion Island while snorkelling where the lagoon was described as safe for swimmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X