ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ವರ್ಷದ ಹಿಂದೆ ಮಾಡಿದ ಮಹಾ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್

|
Google Oneindia Kannada News

ಲಂಡನ್, ಏಪ್ರಿಲ್ 10: ಬರೋಬ್ಬರಿ ನೂರು ವರ್ಷದ ಹಿಂದೆ ಬ್ರಿಟೀಷರು ಮಾಡಿದ್ದ ಮಹಾ ತಪ್ಪಿಗೆ ಈಗ ವಿಷಾದ ವ್ಯಕ್ತಪಡಿಸಲಾಗಿದೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 100 ವರ್ಷ ಆಗಿದ್ದು, ಈ ಸಂದರ್ಭ ಬ್ರಿಟನ್ ಸಂಸತ್ ನಲ್ಲಿ ಮಾತನಾಡಿದ ಪ್ರಧಾನಿ ತೆರೆಸಾ ಮೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಂದು ನಡೆದ ಘಟನೆಗೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತೆರೆಸಾ ಮೇ ಸಂಸತ್ ನಲ್ಲಿ ಇಂದು ಹೇಳಿದ್ದಾರೆ.

ನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್‌ಗೆ ಮೋದಿ ಖಡಕ್ ಉತ್ತರ ನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್‌ಗೆ ಮೋದಿ ಖಡಕ್ ಉತ್ತರ

ಪಂಜಾಬ್ನ ಅಮೃತಸರದಲ್ಲಿ ಜಲಿಯನ್‍ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ 13, 1919 ರಲ್ಲಿ ಶಾಂತಿಯಿಂದ ನಿಶ್ಯಸ್ತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದ 370ಕ್ಕೂ ಹೆಚ್ಚು ದೇಶ ಭಕ್ತರ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡಿನ ದಾಳಿಯನ್ನು ಬ್ರಿಟಿಷ್ ಸೇನೆ ನಡೆಸಿತ್ತು.

British Prime Minister Theresa May in British Parliament today expressed regret for Jallianwala bagh massacre

ಬ್ರಿಟಿಷ್ ಜನರಲ್ ಡಯಾರ್ ಎಂಬಾತ ಸಿಖ್ಖರ ಮೇಲೆ ಗುಂಡಿನ ದಾಳಿ ನಡೆಸಲು ಆದೇಶ ಹೊರಡಿಸಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಈ ಘಟನೆ ಮರೆಯಲಾಗದ ದುರಂತವಾಗಿ ಸೇರಿಹೋಯಿತು. ಘಟನೆ ನಡೆದ ದಿನ ಸಿಖ್ಖರ ಪವಿತ್ರ ದಿನವಾದ ಬೈಸಾಖಿ ಆಗಿತ್ತು.

ಬ್ರೆಕ್ಸಿಟ್ ಪರಿಣಾಮ: ರಾಜೀನಾಮೆ ನೀಡಲು ಮುಂದಾದ ಥೆರೆಸಾ ಮೇ ಬ್ರೆಕ್ಸಿಟ್ ಪರಿಣಾಮ: ರಾಜೀನಾಮೆ ನೀಡಲು ಮುಂದಾದ ಥೆರೆಸಾ ಮೇ

ಸರ್ಕಾರಿ ಅಂಕಿ-ಸಂಖ್ಯೆ ಪ್ರಕಾರ ಅಂದಿನ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 370 ಆದರೆ 1000 ಕ್ಕೂ ಹೆಚ್ಚು ಮಂದಿ ಅಂದಿನ ದಿನ ಹತರಾದರು ಎಂದ ಹೇಳಲಾಗುತ್ತದೆ.

English summary
British Prime Minister Theresa May in British Parliament today expressed regret for Jallianwala bagh massacre. She said, "We deeply regret what happened and the suffering caused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X