ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಪ್ರಧಾನಿ ಚುನಾವಣೆ: 5ನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್‌ ಟಾಪ್‌

|
Google Oneindia Kannada News

ಲಂಡನ್​​ ಜುಲೈ, 20: ಬ್ರಿಟನ್​ ಪ್ರಧಾನಿ ರೇಸ್​​ ಅಂತಿಮ ಹಂತಲ್ಲಿದ್ದು, ಭಾರತ ಮೂಲದ ರಿಷಿ ಸುನಕ್​​​ ಕೊನೆಯ ಸುತ್ತಿಗೆ ದಾಪುಗಾಲನ್ನು ಇಟ್ಟಿದ್ದಾರೆ. ರಿಷಿ ಸುನಕ್‌ ಎದುರಾಳಿಯಾಗಿ ಲಿಜ್ ಟ್ರಸ್ ಎಂಬುವರು ಇದ್ದಾರೆ.

ಇನ್ಪೋಸಿಸ್​ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕ್​ ಪ್ರಧಾನಿ ಆಗಿ ಆಯ್ಕೆಯಾದರೆ, ಹೊಸದೊಂದು ಇತಿಹಾಸ ನಿರ್ಮಾಣವಾಗಲಿದೆ. ಬುಧವಾರ ನಡೆದ 5ನೇ ಸುತ್ತಿನ ಮತದಾನದಲ್ಲಿ ರಿಷಿ ಸುನಕ್‌ ಅವರಿಗೆ ಕನ್ಸರ್ವೇಟಿವ್ ಪಕ್ಷದ ಸಹೋದ್ಯೋಗಿಗಳು ಬೆಂಬಲಕ್ಕೆ ನಿಂತಿದ್ದು, ಈ ಮೂಲಕ ಅವರು 137 ಮತಗಳನ್ನು ಪಡೆದುಕೊಂಡಿದ್ದಾರೆ. ಈಗ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಭಾರತೀಯ ಮೂಲದ ರಿಷಿ ಸುನಕ್‌ ಅತ್ಯಂತ ಹತ್ತಿರದ ವ್ಯಕ್ತಿಯಾಗಿದ್ದಾರೆ.

ಬ್ರಿಟನ್‌ನ ಸಿರಿವಂತರ ಪಟ್ಟಿಯಲ್ಲಿ ಋಷಿ ಸುನಕ್; ಇಷ್ಟು ಆಸ್ತಿ ಸಂಪಾದಿಸಿದ್ದು ಹೇಗೆ?ಬ್ರಿಟನ್‌ನ ಸಿರಿವಂತರ ಪಟ್ಟಿಯಲ್ಲಿ ಋಷಿ ಸುನಕ್; ಇಷ್ಟು ಆಸ್ತಿ ಸಂಪಾದಿಸಿದ್ದು ಹೇಗೆ?

ಇನ್ನು ಎದುರಾಳಿಯಾಗಿರುವ ಲಿಜ್​ ಟ್ರಸ್​​​ 113 ಮತ ಪಡೆದುಕೊಂಡಿದ್ದಾರೆ. ಇವರಿಬ್ಬರು ಮಾತ್ರ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಇನ್ನು ಪೆನ್ನಿ ಮೊರ್ಡಾಂಟ್​ ಅಕಾಡದಿಂದ ​ಹೊರಬಿದ್ದಿದ್ದಾರೆ. ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ರಿಷಿ ಸುನಕ್​​ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳು ಕಾಣತೊಡಗಿವೆ. ನಿನ್ನೆ ನಡೆದ 4ನೇ ಸುತ್ತಿನಲ್ಲಿ ರಿಷಿ ಸುನಕ್​​ 118 ಮತ ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದರು. ಪೆನ್ನಿ ಮೊರ್ಡಾಂಟ್​ 92 ಮತ, ವಿದೇಶಾಂಗ ಕಾರ್ಯದರ್ಶಿ ಲಿಜ್​ ಟ್ರಸ್​ 86 ಮತ ಪಡೆದುಕೊಂಡಿದ್ದರು. ಶಾಸಕ ಕೆಮಿ ಬಡೆನೊಚ್​ ಸ್ಪರ್ಧೆಯಿಂದ ಹೊರಬಿದ್ದಿದ್ದರು.

British Prime Minister Election; Rishi Sunak tops in the 5th round of voting as well

ಬ್ರಿಟನ್‌ನಲ್ಲಿ ಕನ್ಸರ್ವೇಟಿವ್‌ ಪಕ್ಷದಿಂದ ಸಚಿವರ ರಾಜೀನಾಮೆ ಪರ್ವ ಮುಂದುವರೆದು, ಬೋರಿಸ್ ಜಾನ್ಸನ್ ಜುಲೈ 7 ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕನ್ಸರ್ವೇಟಿವ್ ನಾಯಕತ್ವ ತ್ಯಜಿಸಿದ್ದರೆ. ಸೆಪ್ಟೆಂಬರ್ 5 ರಂದು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುವವರೆಗೂ ಬೋರಿಸ್‌ ಅವರೇ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಹಲವು ಹಗರಣಗಳು ಸೇರಿದಂತೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.

"ಈ ಸ್ಪರ್ಧೆಯು ನಮ್ಮ ಪಕ್ಷದ ನಾಯಕನಾಗುವುದಕ್ಕಿಂತ ಹೆಚ್ಚಿನದು, ಎಂದು ಸುನಕ್ ಅವರು ಈ ತಿಂಗಳ ಆರಂಭದಲ್ಲಿ ತಮ್ಮ ನಾಯಕತ್ವದ ಬಿಡ್ ಅನ್ನು ಪ್ರಾರಂಭಿಸಿದಾಗ ಚರ್ಚೆಯಲ್ಲಿ ಹೇಳಿದರು. ಅವರು 1960ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ವಲಸೆ ಬಂದಿದ್ದು, ಭಾರತೀಯ ಕುಟುಂಬದೊಂದಿಗೆ ಬಿಡ್ ಅನ್ನು ಪ್ರಾರಂಭಿಸಿದ್ದರು. ಆಗಿನಿಂದ ವೈಯಕ್ತಿಕ ಮತ್ತು ವೃತ್ತಿಪರರ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸಿದ್ದಾರೆ. "ನಾನು ಈ ಸಂಸತ್ತಿನಲ್ಲಿ ತೆರಿಗೆಯನ್ನು ಇಳಿಸುತ್ತೇನೆ, ಅಧಿಕಾರನ್ನು ಜವಾಬ್ದಾರಿಯುತವಾಗಿ ಮಾಡಲಿದ್ದೇನೆ. ಚುನಾವಣೆಗಳನ್ನು ಗೆಲ್ಲಲು ತೆರಿಗೆಯನ್ನು ಕಡಿತಗೊಳಿಸುವುದಿಲ್ಲ. ತೆರಿಗೆಗಳನ್ನು ಕಡಿತಗೊಳಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.

ಕೊನೆಯ ಹಂತದ ಮತದಾನದಲ್ಲಿ ರಿಷಿ ಸುನಕ್‌, ಮತ್ತು ಲಿಜ್ ಟ್ರಸ್ ಎಂಬುವವರು ಉಳಿದಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ನಿರ್ಣಯ ಕನ್ಸರ್ವೇಟಿವ್‌ ಪಕ್ಷದ ಸದಸ್ಯರ ಕೈಯಲ್ಲಿದೆ. ಆದಾಗ್ಯೂ ರಿಷಿ ಸುನಕ್‌ ಟಾಪ್‌ನಲ್ಲಿದ್ದು ಅವರು ಯುಕೆ ಪ್ರಧಾನಿಯಾಗುವ ಎಲ್ಲ ಲಕ್ಷಗಳು ಗೋಚರವಾಗುತ್ತಿವೆ.. ಹಾಗಾದ್ರೆ ಪ್ರಧಾನಿ ಯಾರಾಗಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

English summary
The British Prime Minister race is in the final stage, and India-born Rishi Sunak has made strides to the last round. Liz Truss is opposite Rishi Sunak, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X