ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಶೀಲ್ಡ್‌ ಪಡೆದ ಬ್ರಿಟಿಷ್ ದಂಪತಿಗಳ ಮಾಲ್ಟಾ ಪ್ರಯಾಣಕ್ಕೆ ತಡೆ

|
Google Oneindia Kannada News

ಲಂಡನ್‌, ಜು.14: ಬ್ರಿಟಿಷ್ ದಂಪತಿಗಳಾದ ಸ್ಟೀವ್ ಮತ್ತು ಗ್ಲೆಂಡಾ ಹಾರ್ಡಿ ಶುಕ್ರವಾರ ಮಾಲ್ಟಾಕ್ಕೆ ತೆರಳಲು ವಿಮಾನ ಹತ್ತುವುದನ್ನು ತಡೆಯಲಾಗಿದೆ. ಯುರೋಪಿಯನ್ ಯೂನಿಯನ್ ಅನುಮೋದಿಸದ ಅಸ್ಟ್ರಾಜೆನೆಕಾ ಲಸಿಕೆಯ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್ ಅನ್ನು ಸ್ವೀಕರಿಸಿದ್ದ ಕಾರಣಕ್ಕೆ ಯುಕೆ ವಿಮಾನ ನಿಲ್ದಾಣದಿಂದ ಈ ದಂಪತಿ ಹಿಂದೆ ಹೋಗಬೇಕಾದ ಸ್ಥಿತಿ ಬಂದೊದಗಿದೆ.

64 ರ ಸ್ಟೀವ್ ಹಾರ್ಡಿ ಮತ್ತು 63 ರ ಗ್ಲೆಂಡಾ ಹಾರ್ಡಿ ಹಲ್ ಮೂಲದವರಾಗಿದ್ದು, ತಮ್ಮ ಮಗನನ್ನು ಈ ದಂಪತಿ ಒಂದು ವರ್ಷದಿಂದ ನೋಡಿಲ್ಲ ಎಂದು ವರದಿಯಾಗಿದೆ. ಈ ಹಿನ್ನೆಲೆ ಮಗನನ್ನು ಭೇಟಿ ಮಾಡಲು ಮಾಲ್ಟಾಕ್ಕೆ ತೆರಳಲು ವಿಮಾನದಲ್ಲಿ ಟಿಕೆಟ್‌ ಕಾಯ್ದಿರಿಸಿದ್ದರು. ಆದರೆ ಮುಂಜಾನೆ 3.30 ರ ಸುಮಾರಿಗೆ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಿಂದ ಹಿಂತಿರುಗಬೇಕಾಗಿ ಬಂದಿದೆ ಎಂದು ವರದಿಗಳು ತಿಳಿಸಿವೆ.

ಡೆಲ್ಟಾ ರೂಪಾಂತರ ಹೆಚ್ಚಳ: ಬ್ರಿಟನ್‌ ಪ್ರಧಾನಿ ಕಳವಳ ಡೆಲ್ಟಾ ರೂಪಾಂತರ ಹೆಚ್ಚಳ: ಬ್ರಿಟನ್‌ ಪ್ರಧಾನಿ ಕಳವಳ

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಡ್‌ ಲಸಿಕೆಯನ್ನು ಲಕ್ಷಾಂತರ ಜನರು ಸ್ವೀಕರಿಸಿದ್ದಾರೆ. ಅದರಂತೆ ಈ ದಂಪತಿ ಮಾರ್ಚ್‌ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಆದರೆ ಲಸಿಕೆಯನ್ನು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಅನುಮೋದಿಸಿಲ್ಲ ಆದ್ದರಿಂದ ಯುರೋಪಿಯನ್ ಯೂನಿಯನ್ ಲಸಿಕೆ ಪಾಸ್ಪೋರ್ಟ್ ಯೋಜನೆಯಲ್ಲಿ ಸ್ವೀಕರಿಸುವುದಿಲ್ಲ.

British Couple, Who Took Covishield Shots, Stopped From Flying To Malta from UK

ಈ ಬಗ್ಗೆ ಪ್ರತಿಕ್ರಿಯಿಸಿದ ದಂಪತಿ, "ಪ್ರತಿಯೊಂದು ವಿಧಾನವನ್ನು ಅನುಸರಿಸಿದ್ದೇವೆ. ಆದರೆ ನಮಗೆ ಯಾವ ಲಸಿಕೆ ನೀಡಲಾಗಿದೆ ಎಂದು ನಮಗೆ ತಿಳಿದಿಲ್ಲ. ನಮ್ಮ ಮಗನನ್ನು ನೋಡಲು ಸಾಧ್ಯವಿಲ್ಲ ಎಂಬುದು ಸಮಸ್ಯೆಯಾಗಿದೆ," ಎಂದು ಹೇಳಿದ್ದಾರೆ.

"ನಾವು ನಮ್ಮ ಲಸಿಕೆ ತೆಗೆದುಕೊಂಡಾಗ ನಮ್ಮಲ್ಲಿ ಲಸಿಕೆ ಇತ್ತು, ಅವುಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ನಾವು ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದೇವೆ. ನಮಗೆ ಯಾವ ಲಸಿಕೆ ಹಾಕಲಾಗುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ. ಅದರ ಬಗ್ಗೆ ನಾವು ಸರ್ಕಾರವನ್ನು ನಂಬಿದ್ದೇವೆ. ಬೋರಿಸ್ ಜಾನ್ಸನ್ ಈ ದೇಶದಲ್ಲಿ ಯಾವುದೇ ಭಾರತೀಯ ಲಸಿಕೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ. ಅದು ಸ್ಪಷ್ಟವಾಗಿ ಸುಳ್ಳು ಏಕೆಂದರೆ ಅದು ನಮಗೆ ಲಭಿಸಿದೆ"ಎಂದು ಹಾರ್ಡಿ ಯುಕೆ ಪತ್ರಿಕೆಗೆ ತಿಳಿಸಿದರು.

ಇಂಟರ್ನೆಟ್ ಕ್ರ್ಯಾಶ್: ಬಿಬಿಸಿ, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ಸ್‌ ಡೌನ್ಇಂಟರ್ನೆಟ್ ಕ್ರ್ಯಾಶ್: ಬಿಬಿಸಿ, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ಸ್‌ ಡೌನ್

ಕಳೆದ ತಿಂಗಳು ಕೆಲವು ದೇಶಗಳು ಕೋವಿಶೀಲ್ಡ್ ಅನ್ನು ಸ್ವೀಕರಿಸುವುದಾಗಿ ಹೇಳಿದ್ದವು. ಆದರೆ ಮಾಲ್ಟಾ ಕೋವಿಶೀಲ್ಡ್‌ಗೆ ಅನುಮೋದನೆ ನೀಡಿಲ್ಲ. ಮಾಲ್ಟಾ ಯುಕೆ ಪ್ರಯಾಣಕ್ಕಾಗಿ ಹಸಿರು ಪಟ್ಟಿಯಲ್ಲಿದೆ. ಅಂದರೆ ಈ ದೇಶದಿಂದ ಬರುವವರು ಕ್ವಾರಂಟೈನ್‌ ಆಗಬೇಕಾಗಿಲ್ಲ.

ಇನ್ನು ಯುಕೆ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, "ಕೋವಿಶೀಲ್ಡ್ ಡೋಸ್‌ ಪಡೆದ ಬ್ರಿಟನ್ನರನ್ನು ಪ್ರಯಾಣಿಸುವುದನ್ನು ತಡೆಯಬಾರದು. ಇದು ಸರಿಯಲ್ಲ. ನಮ್ಮ ಮಾಲ್ಟೀಸ್ ಸಹೋದ್ಯೋಗಿಗಳೊಂದಿಗೆ ನಾವು ಖಂಡಿತವಾಗಿಯೂ ಎಲ್ಲ ಸೌಕರ್ಯ ನೀಡಿದ್ದೇವೆ. ಆದರೆ ನಾವೀಗ ವೈಜ್ಞಾನಿಕ ಅಂಶವನ್ನು ಪ್ರಬಲವಾಗಿ ಹೇಳುತ್ತೇವೆ. ಕೋವಿಶೀಲ್ಡ್ ಡೋಸ್‌ ಪಡೆದ ಬ್ರಿಟನ್ನರನ್ನು ಪ್ರಯಾಣಕ್ಕೆ ತಡೆಯೊಡ್ಡಬಾರದು," ಎಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
British Couple, Who Took Covishield Shots, Stopped Flying To Malta from UKs Manchester airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X