ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಕೋಟಿ ಸಂಭಾವ್ಯ ಕೊರೊನಾ ಲಸಿಕೆ ಖರೀದಿಗೆ ಸಜ್ಜಾದ ಬ್ರಿಟನ್

|
Google Oneindia Kannada News

ಲಂಡನ್, ಜುಲೈ 20: 9 ಕೋಟಿ ಸಂಭಾವ್ಯ ಕೊರೊನಾ ಲಸಿಕೆ ಖರೀದಿಗೆ ಬ್ರಿಟನ್ ಸಜ್ಜಾಗಿದೆ.

Recommended Video

Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

ಬ್ರಿಟನ್‌ನಲ್ಲಿ ಕೊರೊನಾ ಸೋಂಕು ವಿಪರೀತವಾಗಿದ್ದು, 90 ಮಿಲಿಯನ್(9 ಕೋಟಿ) ಸಂಭಾವ್ಯ ಕೊರೊನಾ ಲಸಿಕೆ ಪಡೆಯಲು ಅನೇಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ಪಿಫೈಜರ್ ಇಂಕ್, ಬಯೋಎನ್ ಟೆಕ್, ಫ್ರೆಂಚ್ ಕ್ರೂಪ್ ಆಫ್ ವಾಲ್‌ನೆವಾ ಜೊತೆ ಒಪ್ಪಂದ ನಡೆದಿದೆ. ಬ್ರಿಟನ್ ಬಯೋ ಎನ್ ಟೆಕ್ ,ಪಿಫೈಜರ್ ನಿಂದ 30(3 ಕೋಟಿ) ಮಿಲಿಯನ್ ಲಸಿಕೆಯನ್ನು ಪಡೆಯಲಿದೆ.

ಕೊವಿಡ್ 19 : ಯಾವ ದೇಶದಲ್ಲಿ ಹೆಚ್ಚು ಸಾವು, ಹೆಚ್ಚು ಸೋಂಕಿತರು?ಕೊವಿಡ್ 19 : ಯಾವ ದೇಶದಲ್ಲಿ ಹೆಚ್ಚು ಸಾವು, ಹೆಚ್ಚು ಸೋಂಕಿತರು?

ಬಯೋ ಎನ್‌ಟೆಕ್ ಯುಎಸ್ ಫಾರ್ಮಾಸುಟಿಕಲ್ ಪಿಫೈಜರ್ ಜೊತೆ ಸೇರಿ ಲಸಿಕೆ ಸಿದ್ಧಪಡಿಸುತ್ತಿದೆ. 150ಕ್ಕಿಂತಲೂ ಹೆಚ್ಚು ಕೊರೊನಾ ಲಸಿಕೆಗಳು ಸಿದ್ಧಗೊಳ್ಳುತ್ತಿವೆ. ಇದಕ್ಕೂ ಮುನ್ನ ಯುಎಸ್ ಬಯೋಟೆಕ್ ಫರ್ಮ್ ಮಾಡೆರ್ನಾ ತಮ್ಮ ಲಸಿಕೆ ಅಂತಿಮ ಹಂತದಲ್ಲಿದೆ ಎಂದು ಹೇಳಿತ್ತು. ಜುಲೈ 27ಕ್ಕೆ ಅಂತಿಮ ಹಂತದ ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿತ್ತು.

ಜೊತೆಗೆ ವಾಲ್‌ನೆವಾ ಕಂಪನಿ ಜೊತೆ 60(60 ಕೋಟಿ) ಮಿಲಿಯನ್ ಲಸಿಕೆಯನ್ನು ಪಡೆಯಲಿದೆ. ಲಸಿಕೆಗೆ ಒಪ್ಪಿಗೆ ದೊರೆತರೆ ಮತ್ತೆ 40(40 ಕೋಟಿ) ಮಿಲಿಯನ್ ಲಸಿಕೆಗಳನ್ನು ಕೊಳ್ಳುವುದಾಗಿ ಬ್ರಿಟನ್ ಹೇಳಿದೆ.

Britain Secures 90 Million Potential Covid-19 Vaccine Doses

ಬ್ರಿಟನ್‌ನಲ್ಲಿ 45 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಕೊರೊನಾ ವೈರಸ್‌ಗಾಗಿಯೇ ಲಸಿಕೆಯನ್ನು ಇದುವರೆಗೆ ತಯಾರು ಮಾಡಿಲ್ಲ, 230 ಮಿಲಿಯನ್ ಜನರಿಗಾಗುವಷ್ಟು ಲಸಿಕೆಯನ್ನು ಬ್ರಿಟನ್ ಆರ್ಡರ್ ಮಾಡಿದೆ.

ಹಾಗೆಯೇ ಬ್ರಿಟನ್ ಆಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದು 100 ಮಿಲಿಯನ್ ಲಸಿಕೆ ತರಿಸಿಕೊಳ್ಳಲು ಮುಂದಾಗಿದೆ.ಇದೇ ಮೊದಲ ಬಾರಿಗೆ ಲಸಿಕೆಗಾಗಿ ಪಿಫೈಜರ್ ಹಾಗೂ ಬಯೋ ಎನ್ ಟೆಕ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಯೋಗಗಳು ಮಧ್ಯದಲ್ಲಿದೆ ಒಪ್ಪಿಗೆ ದೊರೆತ ತಕ್ಷಣ ತರಿಸಿಕೊಳ್ಳುವುದಾಗಿ ಬ್ರಿಟನ್ ತಿಳಿಸಿದೆ.

ಲಸಿಕೆಗೆ ಒಪ್ಪಿಗೆ ದೊರೆತರೆ ಡಿಸೆಂಬರ್ ವರೆಗೆ 100 ಮಿಲಿಯನ್ ಡೋಸಸ್ ತಯಾರಿಸಲಾಗುತ್ತದೆ. 2021ಕ್ಕೆ 1.2 ಬಿಲಿಯನ್ ಲಸಿಕೆ ತಯಾರಾಗುತ್ತೆ. ವಾಲ್‌ನೆವಾದ ಲಸಿಕೆ ಕೂಡ ಕ್ಲಿನಿಕಲ್ ಟ್ರಯಲ್‌ಗೆ ಸಿದ್ಧಗೊಳ್ಳುತ್ತಿದೆ. 2020ರ ಅಂತ್ಯದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಯಲಿದೆ.

English summary
Britain has signed deals to secure 90 million doses of two possible COVID-19 vaccines from an alliance of Pfizer Inc and BioNTech, and French group Valneva, the business ministry said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X