• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುರೋಪಿಯನ್ ಒಕ್ಕೂಟಕ್ಕೆ ಗುಡ್‌ಬೈ ಹೇಳಿದ ಬ್ರಿಟನ್

|

ಲಂಡನ್, ಫೆಬ್ರವರಿ 1: ಹಲವು ವರ್ಷಗಳ ತಿಕ್ಕಾಟ, ಗೊಂದಲಗಳ ಬಳಿಕ ಬ್ರಿಟನ್, ಕೊನೆಗೂ ಯುರೋಪಿಯನ್ ಒಕ್ಕೂಟದಿಂದ ಹೊರನಡೆದಿದೆ. ಇದರಿಂದ ಯುರೋಪ್ ಖಂಡದ ನೆರೆಹೊರೆಯ ದೇಶಗಳೊಂದಿಗೆ ಅದು ನಾಲ್ಕು ದಶಕಗಳಿಂದ ಬೆಳೆಸಿಕೊಂಡಿದ್ದ ಆಪ್ತ ಆರ್ಥಿಕ, ರಾಜಕೀಯ ಮತ್ತು ಕಾನೂನಾತ್ಮಕ ಒಪ್ಪಂದಗಳಿಗೆ ತಿಲಾಂಜಲಿ ಇಟ್ಟಿದೆ.

ಆದರೆ, ಯುರೋಪಿಯನ್ ಒಕ್ಕೂಟದ ಸಖ್ಯವನ್ನು ಔಪಚಾರಿಕವಾಗಿ ತೊರೆದಿದ್ದರೂ, ಅದರ ಸಂಪೂರ್ಣ ಪ್ರಕ್ರಿಯೆಗಳು ಪೂರ್ಣಗೊಂಡು ಅಧಿಕೃತ 'ವಿಚ್ಚೇದನ' ಪರಿಗಣನೆಯಾಗುವುದು 2020ರ ಡಿ. 31ರಂದು. ಯುರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ ಹಲವಾರು ಒಪ್ಪಂದಗಳ ಷರತ್ತುಗಳಿಗೆ ಒಳಪಟ್ಟಿದ್ದು, ಅವುಗಳಿಂದ ಹೊರ ಹೋಗಲು ಮತ್ತು ಭವಿಷ್ಯದ ಯೋಜನೆಗಳಿಗಾಗಿ ಸಹಭಾಗಿತ್ವ ನಡೆಸಲು ಹನ್ನೊಂದು ತಿಂಗಳ ಪರಿವರ್ತನೆಯ ಅವಧಿ ಇರಲಿದೆ.

ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಗೆ: ಏನಿದು ಬ್ರೆಕ್ಸಿಟ್? Explainer

ಬ್ರಿಟನ್ ಸಂಸತ್‌ನಲ್ಲಿ ಮೂರು ಬಾರಿ ಬ್ರೆಕ್ಸಿಟ್ ಗಡುವಿನ ಮಸೂದೆ ಮಂಡನೆಯಾಗಿದ್ದವು. ಆದರೆ ಭವಿಷ್ಯದ ಕುರಿತಾದ ಸೂಕ್ತ ಯೋಜನೆಗಳು ಸಿದ್ಧವಾಗದ ಹಾಗೂ ಒಪ್ಪಂದಗಳಲ್ಲಿನ ಲೋಪಗಳ ಕಾರಣ ಸಂಸದರಿಂದ ವಿರೋಧ ವ್ಯಕ್ತವಾಗಿ ಮಸೂದೆ ವಿಫಲವಾಗಿದ್ದವು. ಬೋರಿಸ್ ಜಾನ್ಸನ್ ಸರ್ಕಾರ ಕೊನೆಗೂ ಬ್ರೆಕ್ಸಿಟ್‌ಗೆ ಅನುಮೋದನೆ ಪಡೆದುಕೊಳ್ಳುವಲ್ಲಿ ಸಫಲವಾಗಿತ್ತು.

ರಾತ್ರಿ 11 ಗಂಟೆಗೆ ಜಾರಿ

ರಾತ್ರಿ 11 ಗಂಟೆಗೆ ಜಾರಿ

ಜನವರ 31ರ ರಾತ್ರಿ 11 ಗಂಟೆ ಬಳಿಕ ಬ್ರೆಕ್ಸಿಟ್ ಜಾರಿಯಾಯಿತು. 2016ರ ಜೂನ್‌ನಲ್ಲಿ ಬ್ರೆಕ್ಸಿಟ್ ಕುರಿತು ನಡೆದ ಜನಾಭಿಪ್ರಾಯ ಸಂಗ್ರಹಣೆಯ 43 ತಿಂಗಳ ಬಳಿಕ ಯುರೋಪಿಯನ್ ಒಕ್ಕೂಟದ ನಾಲ್ಕು ದಶಕಗಳ ನಂಟನ್ನು ಬ್ರಿಟನ್ ಕಡಿದುಕೊಂಡಿದೆ. ಪರಿವರ್ತನೆಯ ಅವಧಿ ಪೂರ್ಣಗೊಳ್ಳುವವರೆಗೂ ಬ್ರಿಟನ್ ಒಕ್ಕೂಟದ ನಿಯಮಗಳಿಗೆ ಒಳಗೊಂಡಿರುತ್ತದೆ.

ಆದರೆ ಯುರೋಪಿಯನ್ ಒಕ್ಕೂಟದ ಸಂಸ್ಥೆಗಳನ್ನು ಪ್ರತಿನಿಧಿಸುವ ಮತ್ತು ಅವುಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಬ್ರಿಟನ್ ಕಳೆದುಕೊಳ್ಳಲಿದೆ. ಇದರ ಅರ್ಥ ಯುರೋಪಿಯನ್ ಸಂಸತ್‌ನಲ್ಲಿ ಬ್ರಿಟನ್‌ನ ಯಾವುದೇ ಸದಸ್ಯರು ಇರುವುದಿಲ್ಲ.

ಹೊಸ ಒಪ್ಪಂದಗಳಿಗೆ ಕಾತರ

ಹೊಸ ಒಪ್ಪಂದಗಳಿಗೆ ಕಾತರ

ಫೆ. 1ರಿಂದಲೇ ಯುರೋಪಿಯನ್ ಒಕ್ಕೂಟ ಸದಸ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟಿನ ಮಾತುಕತೆ ಆರಂಭಿಸಲು ಸಿದ್ಧನಿರುವುದಾಗಿ ಬ್ರಿಟನ್ ಹೇಳಿದೆ. ವಹಿವಾಟು ಸಂಬಂಧ ತಾವು ಇನ್ನೂ ಚರ್ಚೆ ನಡೆಸುತ್ತಿರುವುದರಿಂದ ಇನ್ನಷ್ಟು ಸಮಯ ಬೇಕಾಗುತ್ತದೆ, ಹೀಗಾಗಿ ಒಪ್ಪಂದಗಳ ಕುರಿತು ಬ್ರಿಟನ್ ಜತೆ ಈಗಲೇ ಚರ್ಚೆ ಸಾಧ್ಯವಿಲ್ಲ ಎಂದು ಒಕ್ಕೂಟದ ಸದಸ್ಯ ದೇಶಗಳು ತಿಳಿಸಿವೆ.

ಬ್ರೆಕ್ಸಿಟ್ ಮಸೂದೆ ಅಂಗೀಕಾರ, ಬೊರಿಸ್ ಗೆ ಐತಿಹಾಸಿಕ ಗೆಲುವು

ಮಾರ್ಚ್‌ನಿಂದ ಹೊಸ ಮಾತುಕತೆ

ಮಾರ್ಚ್‌ನಿಂದ ಹೊಸ ಮಾತುಕತೆ

ಇತ್ತೀಚೆಗೆ ಕೆನಡಾ ಜತೆ ಮಾತುಕತೆ ನಡೆಸಿರುವ ಪ್ರಧಾನಿ ಬೋರಿಸ್ ಜಾನ್ಸನ್, ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಪ್ರಸ್ತಾಪಿಸಿದ್ದಾರೆ. ಇದು ಈ ತಿಂಗಳ ಆರಂಭದಲ್ಲಿ ಮುಂದುವರಿಯಲಿದೆ. ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸುವ ಷರತ್ತುಗಳಿಗೆ ಫೆ. 25ರಂದು ಯುರೋಪಿಯನ್ ಸಂಸತ್ತು ಅನುಮೋದನೆ ನೀಡುವ ನಿರೀಕ್ಷೆಯಿದೆ. ಹೀಗಾಗಿ ಮಾರ್ಚ್ 1ರ ಬಳಿಕ ಹೊಸ ಮಾತುಕತೆಗಳು ಆರಂಭವಾಗಬಹುದು.

ಏಕಕಾಲದಲ್ಲಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟೇತರ ದೇಶಗಳ ನಡುವೆ ಕೂಡ ವ್ಯಾಪಾರ ಮಾತುಕತೆ ನಡೆಸಲು ಬ್ರಿಟನ್ ಉದ್ದೇಶಿಸಿದೆ. ವ್ಯಾಪಾರವಲ್ಲದೆ, ಭದ್ರತೆ ಮತ್ತು ಕಾನೂನು ಜಾರಿ, ಶಿಕ್ಷಣ ಮತ್ತು ಇಂಧನ ಸೇರಿದಂತೆ ಅನೇಕ ವಿಚಾರಗಳ ಕುರಿತೂ ಒಕ್ಕೂಟದೊಂದಿಗೆ ಬ್ರಿಟನ್ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿದೆ.

ಅವಧಿ ವಿಸ್ತರಣೆಗೆ ಮನವಿ ಮಾಡುವುದಿಲ್ಲ

ಅವಧಿ ವಿಸ್ತರಣೆಗೆ ಮನವಿ ಮಾಡುವುದಿಲ್ಲ

ಪರಿವರ್ತನೆಯ ಅವಧಿಯು 2020ರ ಡಿ. 31ರಂದು ಅಂತ್ಯಗೊಳ್ಳಲಿದೆ. ಇದನ್ನು ಒಂದು ಅಥವಾ ಎರಡು ವರ್ಷಗಳಿಗೆ ವಿಸ್ತರಿಸುವಂತೆ ಬ್ರಿಟನ್ ಮನವಿ ಮಾಡಿಕೊಳ್ಳಬಹುದು. ಆದರೆ ಅದು ಜುಲೈ 1ರ ಒಳಗೆ ಯುರೋಪಿಯನ್ ಒಕ್ಕೂಟಕ್ಕೆ ಮನವಿ ಸಲ್ಲಿಸಬೇಕು. ಈ ರೀತಿ ಮನವಿ ಸಲ್ಲಿಸುವುದಿಲ್ಲ. ಆದಷ್ಟು ಬೇಗನೇ ಬ್ರಿಟನ್, ಒಕ್ಕೂಟದ ನಿಯಮ ಹಾಗೂ ನಿಯಂತ್ರಣಗಳಿಂದ ಮುಕ್ತವಾಗಬೇಕು ಎಂದು ಬೋರಿಸ್ ಪಟ್ಟು ಹಿಡಿದಿದ್ದಾರೆ.

ಬ್ರೆಕ್ಸಿಟ್ ಗೆ ಜ. 31ರ ತನಕ ಕಾಲಾವಕಾಶ ನೀಡಿದ ಯುರೋಪಿಯನ್ ಒಕ್ಕೂಟ

English summary
United Kingdom on Friday 11 PM ormally exited from the European Union. Brexit comes into force 43 months after referendum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X