ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಕ್ಸಿಟ್: ಶನಿವಾರದಂದು ಅಂತಿಮ ಅನುಮೋದನೆ ಎಂದ ಪ್ರಧಾನಿ ಬೊರಿಸ್

|
Google Oneindia Kannada News

ಲಂಡನ್, ಅಕ್ಟೋಬರ್ 17: ಬಹಳ ವರ್ಷದಿಂದ ಚರ್ಚೆಯ ವಿಷಯವಾಗಿರುವ ಬ್ರೆಕ್ಸಿಟ್ ಕುರಿತು ಇದೇ ಶನಿವಾರದಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ.

ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಬ್ರಿಟನ್ ನ ನಿರ್ಧಾರಕ್ಕೆ ಪುಷ್ಠಿ ನೀಡುವಂತೆ, ಯುರೋಪಿಯನ್ ಒಕ್ಕೂಟ ತ್ತು ಬ್ರಿಟನ್ ನಡುವೆ ಬ್ರೆಕ್ಸಿಟ್ ಕುರಿತಂತೆ ಹೊಸ ಒಪ್ಪಂದವಾಗಿದ್ದು, ಶನಿವಾರ ಈ ಕುರಿತು ಅಂತಿಮ ನಿರ್ಣಯ ಹೊರಬರಲಿದೆ.

ಬ್ರಿಕ್ಸಿಟ್‌ ಬಿಲ್‌: ನಾಟಕೀಯ ಬೆಳವಣಿಗೆಯಲ್ಲಿ ಬಹುಮತ ಕಳೆದುಕೊಂಡ ಪ್ರಧಾನಿಬ್ರಿಕ್ಸಿಟ್‌ ಬಿಲ್‌: ನಾಟಕೀಯ ಬೆಳವಣಿಗೆಯಲ್ಲಿ ಬಹುಮತ ಕಳೆದುಕೊಂಡ ಪ್ರಧಾನಿ

ಬ್ರಿಟನ್ ಸಂಸತ್ ಶನಿವಾರದಂದು ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ನೀಡಿದರೆ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಲಿದೆ.

Britain, European Union reach Brexit deal, Big Decision on Saturday

ಬ್ರಿಟನ್ ಎಗ್ಸಿಟ್ ಅಥವಾ ಸಂಕ್ಷಿಪ್ತವಾಗಿ ಬ್ರೆಕ್ಸಿಟ್ ಎಂದರೆ, ಯುರೋಪಿಯನ್ ಒಕ್ಕೂಟದ ಅಂಗವಾಗಿ, ಆರ್ಥಿಕವಾಗಿ ಪರಸ್ಪರ ಅವಲಂಬಿತವಾಗಿದ್ದ ಬ್ರಿಟನ್ ಬ್ರೆಕ್ಸಿಟ್ ಜಾರಿಯಾದರೆ ಸ್ವಂತ ಆರ್ಥಿಕ ವಹಿವಾಟು ನಡೆಸಲಿದೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ತೀರ್ಮಾನವನ್ನು ಕಳೆದ ವರ್ಷ ಮಾರ್ಚ್‌ 29ರಂದು ತೆಗೆದುಕೊಳ್ಳಲಾಗಿತ್ತು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ 'ಬ್ರೆಕ್ಸಿಟ್' ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಬ್ರೆಕ್ಸಿಟ್ ಪರವಾಗಿ ಹೆಚ್ಚು ಮತಗಳು(2016 ಜೂನ್ 23ರ ಎಣಿಕೆ 51.9%) ಬಿದ್ದಿದ್ದವು.

ನಂತರ ಮಾಜಿ ಪ್ರಧಾನಿ ತೆರೆಸಾ ಮೆ ಅವರು ಬ್ರೆಕ್ಸಿಟ್ ಜಾರಿಗೊಳಿಸಲು ಅಸಮರ್ಥರಾದ ಹಿನ್ನೆಲೆಯಲ್ಲೇ ತಮ್ಮ ಸ್ಥಾನ ತೊರೆದಿದ್ದರು. ಇದೀಗ ಮತ್ತೆ ಬ್ರೆಕ್ಸಿಟ್ ಸುದ್ದಿಯಲ್ಲಿದ್ದು, ಇದೇ ಶನಿವಾರ ಈ ಕುರಿತು ಅಂತಿಮ ಅನುಮೋದನೆ ಹೊರಬರಲಿದೆ.

English summary
Britain, European Union reach Brexit deal, Big Decision on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X