ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬ್ರೆಕ್ಸಿಟ್' ಗದ್ದಲ: ವಿಶ್ವಾಸಮತ ಗೆದ್ದ ತೆರೇಸಾ ಮೇ

|
Google Oneindia Kannada News

ಲಂಡನ್, ಡಿಸೆಂಬರ್ 13: 'ಬ್ರೆಕ್ಸಿಟ್' ಪರಿಣಾಮದಿಂದ ಸರ್ಕಾರ ಪತನದ ಭೀತಿಯಲ್ಲಿಯೇ ವರ್ಷ ಕಳೆದ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಅವರಿಗೆ ಕೊನೆಗೂ ನೆಮ್ಮದಿ ದೊರಕಿದೆ.

ಕನ್ಸರ್ವೇಟಿವ್ ಪಕ್ಷದ ನಾಯಕಿ ತೆರೇಸಾ ಮೇ ಸಂಸತ್‌ನಲ್ಲಿ 83 ಮತಗಳ ಅಂತರದಿಂದ ವಿಶ್ವಾಸ ಮತ ಗೆಲ್ಲುವ ಮೂಲಕ ಸರ್ಕಾರ ಉಳಿಸಿಕೊಂಡಿದ್ದಾರೆ. 200 ಮತಗಳಿಗೆ ವಿರುದ್ಧವಾಗಿ ತೆರೇಸಾ 117 ಮತಗಳನ್ನು ಪಡೆದುಕೊಂಡರು.

ಬ್ರೆಕ್ಸಿಟ್ ನಂತರ ಬ್ರಿಟನ್ ಪ್ರಧಾನಿಯಾಗಿ ತೆರೇಸಾ ಮೇ ಬ್ರೆಕ್ಸಿಟ್ ನಂತರ ಬ್ರಿಟನ್ ಪ್ರಧಾನಿಯಾಗಿ ತೆರೇಸಾ ಮೇ

ಒಟ್ಟಾರೆ ಮತಗಳಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರ ಶೇ 63ರಷ್ಟು ಮತಗಳು ಮೇ ಅವರ ಪರವಾಗಿ ಬಿದ್ದರೆ, ಶೇ 37ರಷ್ಟು ಮತಗಳು ಅವರ ವಿರುದ್ಧವಾಗಿದ್ದವು.

Brexit UK PM May survives no-confidence vote

ಬಳಿಕ ಮಾತನಾಡಿದ ಮೇ, ಜನರು ಮತ ಹಾಕಿದ 'ಬ್ರೆಕ್ಸಿಟ್' ಅನ್ನು ಜಾರಿಗೊಳಿಸಲು ಬದ್ಧರಾಗಿರುವುದಾಗಿ ಹೇಳಿದರು. ಆದರೆ, ತಮ್ಮ ವಿರುದ್ಧ ಮತ ಚಲಾಯಿಸಿದ ಸಂಸದರ ಕಳವಳಗಳನ್ನೂ ಆಲಿಸುವುದಾಗಿ ತಿಳಿಸಿದರು.

'ಬ್ರೆಕ್ಸಿಟ್' ವಿಚಾರದಲ್ಲಿ ಮುಂದುವರಿಯುವಂತೆ ಅವರ ಬೆಂಬಲಿಗರು ಪಕ್ಷವನ್ನು ಒತ್ತಾಯಿಸಿದ್ದಾರೆ. ಆದರೆ, ಅವರ ಟೀಕಾಕಾರರು ಮೂರನೇ ಒಂದರಷ್ಟು ಸಂಸದರ ಬೆಂಬಲ ಕಳೆದುಕೊಂಡಿರುವುದು ವಿನಾಶಕಾರಿ ಎಂದು ಹೇಳಿದ್ದಾರೆ.

ಬ್ರೆಕ್ಸಿಟ್ ಫಲಿತಾಂಶ: ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್ ವಿಚ್ಛೇದನಬ್ರೆಕ್ಸಿಟ್ ಫಲಿತಾಂಶ: ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್ ವಿಚ್ಛೇದನ

'ಬ್ರೆಕ್ಸಿಟ್' ನೀತಿ ವಿರುದ್ಧ ಸಿಡಿದೆದ್ದ 48 ಸಂಸದರು ಮೇ ವಿರುದ್ಧ ಅವಿಶ್ವಾಸಮತ ಮಂಡಿಸಿದ್ದರು. ಬ್ರೆಕ್ಸಿಟ್ ನೀತಿಯು 2016ರ ಸಾರ್ವತ್ರಿಕ ಫಲಿತಾಂಶವನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದರು.

ಅವಿಶ್ವಾಸ ಮತದ ಫಲಿತಾಂಶದ ಬಳಿಕ ಮಾತನಾಡಿದ ಮೇ, ಯುರೋಪಿಯನ್ ಒಕ್ಕೂಟದ ಸಮ್ಮೇಳನದಲ್ಲಿ ತಮ್ಮ ಬ್ರೆಕ್ಸಿಟ್ ಒಪ್ಪಂದದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುವುದಾಗಿ ತಿಳಿಸಿದರು.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ 'ಬ್ರೆಕ್ಸಿಟ್' ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಬ್ರೆಕ್ಸಿಟ್ ಪರವಾಗಿ ಹೆಚ್ಚು ಮತಗಳು ಬಿದ್ದಿದ್ದವು. ಜನಾದೇಶದ ಬಳಿಕ ಪ್ರಧಾನಿ ಹುದ್ದೆಗೆ ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಿದ್ದರು. ಆ ಸ್ಥಾನವನ್ನು ತುಂಬಿದ್ದ ತೆರೇಸಾ ಮೇ ಬ್ರೆಕ್ಸಿಟ್ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.

English summary
Brtish Prime Minister Theresa May on Wednesday survived no-confidence vote on her leadership of the Conservative Party by 200 of 117.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X