ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಕ್ಸಿಟ್‌ ಬಿಲ್‌: ನಾಟಕೀಯ ಬೆಳವಣಿಗೆಯಲ್ಲಿ ಬಹುಮತ ಕಳೆದುಕೊಂಡ ಪ್ರಧಾನಿ

By ಅನಿಲ್ ಆಚಾರ್
|
Google Oneindia Kannada News

ಇಡೀ ಜಗತ್ತು ಕುತೂಹಲದಿಂದ ಗಮನಿಸುತ್ತಿದ್ದ ಯುಕೆಯ 'ಹೌಸ್‌ ಆಫ್ ಕಾಮನ್ಸ್‌'ನ ಮಂಗಳವಾರದ ಬ್ರೆಕ್ಸಿಟ್ ಚರ್ಚೆ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.

ಬ್ರಿಕ್ಸಿಟ್‌ ನಿರ್ಣಯದ ಪರವಾಗಿ ಪ್ರಧಾನಿ ಬೋರಿಸ್ ಜಾನ್ಸನ್‌ ಹೌಸ್ ಆಫ್ ಕಾಮನ್ಸ್‌ ಉದ್ದೇಶಿಸಿ ಮಾತನಾಡಲು ಆರಂಭಿಸುತ್ತಿದ್ದ ಅವರದ್ದೇ ಕನ್ಸರ್‌ವೇಟಿವ್ ಪಕ್ಷದ ಎಂಪಿ, ಫಿಲಿಪ್ ಲೀ ಆಡಳಿತ ಪಕ್ಷದ ಗ್ಯಾಲರಿಯಿಂದ ಪ್ರತಿಪಕ್ಷದ ಗ್ಯಾಲರಿ ಕಡೆಗೆ ನಡೆದುಕೊಂಡು ಹೋಗಿ ಆಸೀನರಾದರು. ಈ ಮೂಲಕ ಪ್ರಧಾನಿ ಬೋರಿಸ್ ಅಗತ್ಯವಾಗಿದ್ದ 'ಕಾರ್ಯನಿರ್ವಹಣಾ ಬಹುಮತ'ವನ್ನು ಕಳೆದುಕೊಂಡರು.

ಅಕ್ಟೋಬರ್‌ 31ರೊಳಗೆ ಬ್ರಿಟನ್‌ ಐರೋಪ್ಯ ಒಕ್ಕೂಟದಿಂದ ಹೊರಬರುವ ನಿರ್ಣಯವನ್ನು ತೆಗೆದುಕೊಳ್ಳುವುದಾಗಿ ಪ್ರಧಾನಿ ಬೋರಿಸ್ ಪ್ರತಿಪಾದಿಸಿಕೊಂಡು ಬಂದಿದ್ದರು. 'ಒಪ್ಪಂದದೊಂದಿಗೆ ಅಥವಾ ಯಾವುದೇ ಒಪ್ಪಂದಗಳಿಲ್ಲದೆ ಬ್ರಿಟನ್ ಯುರೋಪಿಯನ್ ಯೂನಿಯನ್‌ನಿಂದ ಹೊರಬರಲಿದೆ' ಎಂದು ಅವರು ಡೆಡ್‌ಲೈನ್‌ ಕೂಡ ನಿಗದಿ ಮಾಡಿದ್ದರು.

Brexit: Defection In UK Parliament, PM Boris Loses Majority

ಪ್ರಧಾನಿ ಬೋರಿಸ್ ಜಾನ್ಸನ್‌ ಈ ನಿರ್ಧಾರವನ್ನು ಅವರದ್ದೇ ಪಕ್ಷದ ಸದಸ್ಯರೂ ಸೇರಿದಂತೆ ಪ್ರತಿಪಕ್ಷಗಳು ವಿರೋಧಿಸುತ್ತಿವೆ. "ಮೌಲ್ಯರಹಿತವಾದ ಹಾದಿ ಹಿಡಿದಿರುವ ಪ್ರಧಾನಿಗಳ ಈ ನಿರ್ಧಾರ ಜನಜೀವನವನ್ನು ಸಂಕಷ್ಟಕ್ಕೆ ದೂಡಲಿದೆ,'' ಎಂದು ಸಂಸದ ಫಿಲಿಪ್‌ ಲೀ ಮಂಗಳವಾರ ಸ್ಥಾನ ಪಲ್ಲಟಕ್ಕೂ ಮುನ್ನ ಆರೋಪಿಸಿದರು.

ಸದ್ಯ ಆಡಳಿತ ಪಕ್ಷದ ಕೆಲವು ಸದಸ್ಯರೂ ಸೇರಿದಂತೆ ಪ್ರತಿಪಕ್ಷಗಳು ಬ್ರೆಕ್ಸಿಟ್ ಕುರಿತು ಹೌಸ್‌ ಆಫ್ ಕಾಮನ್ಸ್‌ನಲ್ಲಿ ಬಿಲ್ ಮಂಡನೆಗೂ ಮುನ್ನ ಚರ್ಚೆಗೆ ಅವಕಾಶ ನೀಡುವಂತೆ ಸ್ವೀಕರ್ ಕೋರಿದ್ದಾರೆ. ಒಂದು ವೇಳೆ ಚರ್ಚೆಗೆ ತೆರೆದುಕೊಂಡರೆ ಬ್ರಿಕ್ಸಿಟ್ ನಿರ್ಣಯದ ಕುರಿತಾದ ತೀರ್ಮಾನದ ಡೆಡ್‌ಲೈನ್ ಜನವರಿಗೆ ಮುಂದೂಡಲ್ಪಡುವ ಸಾಧ್ಯತೆ ಇದೆ. ಅಕಸ್ಮಾತ್ ಯಾವುದೇ ಒಪ್ಪಂದ ಇಲ್ಲದ ಬ್ರೆಕ್ಸಿಟ್‌ ಡೀಲ್‌ಗೆ ಹೌಸ್‌ನಲ್ಲಿ ಬಹುಮತ ಪಡೆದುಕೊಂಡರೆ ಪ್ರಧಾನಿ ಬೋರಿಸ್ ಜಾನ್ಸನ್‌ ಅಂದುಕೊಂಡಂತೆ ಅಕ್ಟೋಬರ್‌ ಅಂತ್ಯಕ್ಕೆ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಕಾಯ್ದೆಗೆ ಅನುಮೋದನೆ ಸಿಗಲಿದೆ.

ಗ್ರೀಕ್‌ ನಂತರ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರುವ ಕುರಿತು ಹಿಂದಿನ ಪ್ರಧಾನಿ ತೆರೆಸಾ ಮೇ ಕಾಲದಲ್ಲಿಯೇ ಚರ್ಚೆ ಆರಂಭವಾಗಿತ್ತು. ಈ ಕುರಿತು ಒಮ್ಮೆ ಜನಮತ ಗಣನೆಯೂ ನಡೆದಿತ್ತು. ಆದರೆ ಜನಪ್ರತಿನಿಧಿಗಳ ಸಭೆಯಲ್ಲಿ ವಿಶ್ವಾಸ ಮೂಡದ ಕಾರಣ ಪ್ರಪಂಚವೇ ಕುತೂಹಲದಿಂದ ಕಾಯುತ್ತಿರುವ ನಿರ್ಣಯದ ಸುತ್ತ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಅದರ ಸುತ್ತ ನಡೆದ ನಾಟಕೀಯ ಬೆಳವಣಿಗೆ ಮಂಗಳವಾರ ಜಗತ್ತಿನ ಗಮನ ಸೆಳೆದಿದೆ.

English summary
United Kingdom Prime Minister Boris Johnson on Tuesday lost his working majority in parliament ahead of a showdown with rebel MPs over Brexit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X