ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಕ್ಸಿಟ್ ಜಾರಿಗೆ ಏಳು ದಿನಕ್ಕೆ ಮುನ್ನ ಯುರೋಪಿಯನ್ ಒಕ್ಕೂಟ-ಬ್ರಿಟನ್ ನಡುವೆ ಒಪ್ಪಂದ

|
Google Oneindia Kannada News

ಲಂಡನ್, ಡಿಸೆಂಬರ್ 24: ಜಗತ್ತಿನ ಅತಿ ದೊಡ್ಡ ವ್ಯಾಪಾರಿ ಬ್ಲಾಕ್‌ಗಳಲ್ಲಿ ಒಂದಾದ ಐರೋಪ್ಯ ಒಕ್ಕೂಟದಿಂದ ಹೊರಬರಲು ಕೇವಲ ಏಳು ದಿನಗಳು ಇರುವ ಮುನ್ನ ಯುರೋಪಿಯನ್ ಒಕ್ಕೂಟದೊಂದಿಗೆ ಯುನೈಟೆಡ್ ಕಿಂಗ್‌ಡಮ್ ಬ್ರೆಕ್ಸಿಟ್ ಪೂರ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಹಲವು ತಿಂಗಳ ಚೌಕಾಸಿ ಮಾತುಕತೆಯ ಬಳಿಕ ಈ ಸಹಿ ಹಾಕಲಾಗಿದೆ.

ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ 'ಬ್ರೆಕ್ಸಿಟ್' ಪ್ರಕ್ರಿಯೆ ಶುರುವಾದ ಬಳಿಕ ಬ್ರಿಟನ್ ಮತ್ತು ಒಕ್ಕೂಟದ ನಡುವೆ ಯಾವುದೇ ವ್ಯಾಪಾರ ಒಪ್ಪಂದಗಳು ನಡೆಯುವ ಬಗ್ಗೆ ಅನುಮಾನಗಳು ಮೂಡಿದ್ದವು. ಇದರಿಂದ ತೀವ್ರ ಆರ್ಥಿಕ ಅರಾಜಕತೆ ಮತ್ತು ಸರಕು ಹಾಗೂ ಔಷಧಗಳ ಪೂರೈಕೆಯಲ್ಲಿನ ವ್ಯತ್ಯಯದ ಭೀತಿ ಉಂಟಾಗಿತ್ತು.

'ಡೀಲ್ ಈಸ್ ಡನ್' (ಒಪ್ಪಂದ ಮುಗಿದಿದೆ) ಎಂಬ ಸಂಗತಿಯನ್ನು ಬ್ರಿಟನ್ ಸರ್ಕಾರ ಸಂತಸದಿಂದ ಹಂಚಿಕೊಂಡಿದೆ. 'ನಮ್ಮ ಹಣ, ಗಡಿಗಳು, ಕಾನೂನುಗಳು, ವ್ಯಾಪಾರ ಮತ್ತು ನಮ್ಮ ಮೀನುಗಾರಿಕೆ ನೀರಿನ ಭಾಗಗಳಲ್ಲಿನ ನಿಯಂತ್ರಣವನ್ನು ಮರಳಿ ಪಡೆದಿದ್ದೇವೆ' ಎಂದು ತಿಳಿಸಿದೆ.

Brexit Deal: UK And European Union Reaches Agreement Just A Week To Spare

'ಈ ಒಪ್ಪಂದವು ಯುಕೆಯ ಪ್ರತಿ ಭಾಗದಲ್ಲಿನ ಕುಟುಂಬಗಳು ಮತ್ತು ಉದ್ಯಮಗಳಿಗೆ ಅದ್ಭುತ ಸುದ್ದಿ. ಶೂನ್ಯ ಟಾರಿಫ್ ಮತ್ತು ಶೂನ್ಯ ಕೋಟಾಗಳ ಆಧಾರದಲ್ಲಿ ಮುಕ್ತ ವ್ಯಾಪಾರ ಒಪ್ಪಂದವನ್ನು ನಾವು ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಂಡಿದ್ದೇವೆ' ಎಂದು ಬ್ರಿಟನ್ ತಿಳಿಸಿದೆ.

ಹಲವು ತಿಂಗಳಿನಿಂದ ಈ ಒಪ್ಪಂದದ ಮಾತುಕತೆಗಳು ಅಂತಿಮ ತೀರ್ಮಾನಕ್ಕೆ ಬರುವುದರಲ್ಲಿ ಹಿನ್ನಡೆ ಅನುಭವಿಸಿದ್ದವು. ಮುಖ್ಯವಾಗಿ ಮೀನುಗಾರಿಕೆ ವಿಭಾಗಕ್ಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಒಪ್ಪಂದಕ್ಕೆ ಬರಲು ವಿಫಲವಾಗಿದ್ದವು. ಇದರಿಂದ 4.5 ವರ್ಷಗಳ ತಿಣುಕಾಟ ಕೊನೆಗೂ ಅಂತ್ಯ ಕಂಡಂತಾಗಿದೆ.

English summary
Brexit deal: UK and European Unions reached an agreement just seven days before deadline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X